Friday, September 20, 2024

ಪ್ರಾಯೋಗಿಕ ಆವೃತ್ತಿ

ಶೈಕ್ಷಣಿಕ ಒತ್ತಡ ನಿವಾರಣೆಗೆ ಯೋಗ ದಿವ್ಯಔಷಧ: ಕೆ.ಟಿ.ಹನುಮಂತು

ಪ್ರಸ್ತುತ ದಿನಗಳಲ್ಲಿನ ವಿದ್ಯಾರ್ಥಿಗಳ ಶೈಕ್ಷಣಿಕ ಒತ್ತಡ ನಿವಾರಣೆಗೆ ಯೋಗ ದಿವ್ಯಔಷಧ ಎಂದು ನಂಜಮ್ಮ ಮೋಟೇಗೌಡ ಚಾರಿಟಬಲ್ ಟ್ರಸ್ಟ್ ಅಧ್ಯಕ್ಷ ಕೆ.ಟಿ.ಹನುಮಂತು ಹೇಳಿದರು.

ಮಂಡ್ಯ ನಗರದಲ್ಲಿರುವ ಗಾಂಧಿಭವನದಲ್ಲಿ ಅಮೃತ ಬಿಂದು ಯೋಗಶಾಲೆ ಮೈಸೂರು ಹಾಗೂ ಪತಂಜಲಿ ಯೋಗಶಾಲೆ ಮತ್ತು ಯುವಕ್ರೀಡಾ ಹಾಗೂ ಸಾಂಸ್ಕೃತಿಕ ಸಂಸ್ಥೆ ಕ್ಯಾತನಹಳ್ಳಿ ಇವರು ಆಯೋಜಿಸಿದ್ದ ಅಂತರ ಶಾಲಾ ಮಟ್ಟದ ಯೋಗಾಸನ ಸ್ಪರ್ಧೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಶೈಕ್ಷಣಿಕ ಕ್ಷೇತ್ರದಲ್ಲಿನ ವಿದ್ಯಾರ್ಥಿಗಳು ಸೃಜನಾತ್ಮಕ ಕಲೆ ಮತ್ತು ಕೌಶಲಜ್ಞಾನ ವೃದ್ದಿಗೆ ಹೆಚ್ಚು ಮಹತ್ವ ನೀಡಬೇಕು, ಯೋಗ, ಧ್ಯಾನ, ಚಿತ್ರಕಲೆ, ಕರಾಟೆ, ವಿಜ್ಞಾನ ಅವಿಸ್ಕಾರ, ಸಂಗೀತ, ಕ್ರೀಡೆ ಇವುಗಳ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಳ್ಳಬೇಕು ಎಂದು ನುಡಿದರು.

ವಿದ್ಯಾರ್ಥಿಯ ಜೀವನದಲ್ಲಿ ಯೋಗ ಮತ್ತು ಧ್ಯಾನ ಸಮಗ್ರ ಅಭಿವೃದ್ದಿಗೆ ಸಾಧನವಾಗಿದೆ, ಶ್ರಮದಿಂದ ಮಾತ್ರ ಸಾಧಕನಾಗಲು ಸಾಧ್ಯವಿದೆ, ಏಕಾಗ್ರತೆ ಹೆಚ್ಚಿಸಿಕೊಳ್ಳುವ ಮನೋಭಾವವನ್ನು ಮೈಗೂಡಿಸಿಕೊಳ್ಳಬೇಕು, ವಿದ್ಯಾರ್ಥಿಗೆ ನೆನಪಿನ ಶಕ್ತಿ ಬಹಾಳ ಮುಖ್ಯ ಎಂದರು.

ಶಿಕ್ಷಣ ಯೋಗಿ ಪ್ರಶಸ್ತಿ ಪುರಸ್ಕೃತ ವಕೀಲ ಬೂದನೂರು ಬೊಮ್ಮಯ್ಯ, ಯೋಗಶಿಕ್ಷಣದಿಂದ ಮಕ್ಕಳಲ್ಲಿ ಮಾನಸಿಕ ಮತ್ತು ದೈಹಿಕ ಸಾಮರ್ಥ್ಯ ಹೆಚ್ಚಾಗಿ ಸಮತೋಲನದಿಂದ ಬೆಳೆವಣಿಯಾಗುತ್ತದೆ, ಕೌಸಲಜ್ಞಾನ ಹೆಚ್ಚಿಸಿಕೊಳ್ಳಲು ಸಾಧ್ಯವಾಗುತ್ತದೆ, ಆರೋಗ್ಯವು ವೃದ್ಧಿಸುತ್ತದೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶ್ರೀ ಅಮೃತ ಬಿಂದು ಯೋಗಶಾಲೆ ಸಂಸ್ಥಾಪಕ ಯೋಗಾಚಾರ್ಯ ಕ್ಯಾತನಹಳ್ಳಿ ವೆಂಟಕೇಶ್, ನಂದಾ ಎಸ್.ಬಾಲಕೃಷ್ಣ, ಕಸ್ತೂರಿರಂಗನ್, ಬಾಬು, ಡಾ.ರಾಮಕೃಷ್ಣ, ಬಾಬು ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!