Thursday, April 18, 2024

ಪ್ರಾಯೋಗಿಕ ಆವೃತ್ತಿ

ಶ್ರೀರಂಗಪಟ್ಟಣ| ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಗುದ್ದಲಿಪೂಜೆ

ಶ್ರೀರಂಗಪಟ್ಟಣ ವಿಧಾನಸಭಾ ಕ್ಷೇತ್ರದ ಮಂಡ್ಯ ತಾಲೂಕಿನ ತಗ್ಗಹಳ್ಳಿ ಜಿಲ್ಲಾ ಪಂಚಾಯತಿ ಕ್ಷೇತ್ರ ವ್ಯಾಪ್ತಿಯ ಕೋಲಕಾರನದೊಡ್ಡಿ ಗ್ರಾಮದಲ್ಲಿ ಕುಡಿಯುವ ನೀರಿನ ಟ್ಯಾಂಕ್ ನಿರ್ಮಾಣ ಕಾಮಗಾರಿಗೆ ಶಾಸಕ ಎ.ಬಿ.ರಮೇಶ ಬಂಡಿಸಿದ್ದೇಗೌಡ ಗುದ್ದಲಿ ಪೂಜೆ ನೆರವೇರಿಸಿದರು.

ನಂತರ ಮಾತನಾಡಿದ ಅವರು, ಕುಡಿಯುವ ನೀರಿನ ವಾಟರ್ ಟ್ಯಾಂಕ್ ನಿರ್ಮಾಣ ಮಾಡಿ ಜಲ ಜೀವನ ಮಿಷನ್‌ ಯೋಜನೆಯ ಮೂಲಕ ಪ್ರತಿ ಮನೆಗೆ ನಲ್ಲಿ ನೀರು ಸಂಪರ್ಕ ಕಲ್ಪಿಸಲಾಗುವುದು ಎಂದು ಹೇಳಿದರು.

ಹೊಸ ಕಂದಾಯ ಗ್ರಾಮಗಳು ಆದ ಮೇಲೆ ಸರ್ಕಾರ ಹೊಸದಾಗಿ ಹಕ್ಕು ಪತ್ರ ಕೊಡುತ್ತಿದೆ ಅದು ಅವರಿಗೆ ಸ್ವಂತ ಹಕ್ಕು ಇದ್ದಂಗೆ ಎಂದು ಹೇಳಿದರು.ಖಾಲಿ ಜಾಗ ಇರುವ ನಿವೇಶನಗಳಿಗೆ ಹಕ್ಕು ಪತ್ರ ಕೊಡುವುದಿಲ್ಲ.ಮನೆಗಳಲ್ಲಿ ಬಾಡಿಗೆದಾರರು ವಾಸ ಮಾಡುತ್ತಿದ್ದರೆ ಮೂಲ ಖಾತೆದಾರರ ಹೆಸರೇಳಿ ಅವರ ಹೆಸರಿಗೆ ಹಕ್ಕು ಪತ್ರ ನೀಡಲಾಗುವುದು ಎಂದರು.

ಗ್ರಾಮಗಳಲ್ಲಿರುವ ಸರ್ಕಾರಿಶಾಲೆ , ದೇವಸ್ಥಾನಗಳಿಗೂ ಅವರ ಹೆಸರಿನಲ್ಲೆ ಖಾತೆ ನೀಡಲಾಗುವುದು. ಆದ್ದರಿಂದ ಗ್ರಾಮದಲ್ಲೇ ವಾಸ ಮಾಡುತ್ತಿರುವವರು ತಮ್ಮ ಮನೆಯ ಹೆಸರಿನಲ್ಲಿ ಹಕ್ಕುಪತ್ರ ಮಾಡಿಸಿಕೊಳ್ಳಿ ಎಂದು ಹೇಳಿದರು.

ಈಗಾಗಲೇ ಚುನಾವಣೆಗೂ ಮುನ್ನ ಘೋಷಿಸಿದ್ದ ಐದು ಗ್ಯಾರಂಟಿ ಯೋಜನೆಗಳನ್ನು ಅಧಿಕಾರಕ್ಕೆ ಬಂದ ಏಳು ತಿಂಗಳಲ್ಲೇ ಜಾರಿಗೆ ತರುವ ಮೂಲಕ ಕಾಂಗ್ರೆಸ್ ಪಕ್ಷ ನುಡಿದಂತೆ ನಡೆದಿದೆ.ಇದು ನಮ್ಮ ಸರಕಾರದ ಹೆಗ್ಗಳಿಕೆಯಾಗಿದೆ ಎಂದರು.

ಈ ಸಂದರ್ಭದಲ್ಲಿ ಜಿಲ್ಲಾ ಕುರುಬರ ಸಂಘದ ಮಾಜಿ ಅಧ್ಯಕ್ಷ ಕೆ.ಹೆಚ್. ನಾಗರಾಜು, ಗ್ರಾಮ ಪಂಚಾಯಿತಿ ಸದಸ್ಯರಾದ ಹುಚ್ಚೇಗೌಡ, ಪುರುಷೋತ್ತಮ್, ಚನ್ನೇಗೌಡ, ಮುಖಂಡರಾದ ಚಿಕ್ಕಬಸವೇಗೌಡ, ಕಾಂತರಾಜು, ತಗ್ಗಹಳ್ಳಿ ಕೃಷ್ಣ,ರಾಮಚಂದ್ರು,ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ರಮೇಶ್ ಮಿತ್ರ, ಜಿಲ್ಲಾ ಪಂಚಾಯತ್ ಮಾಜಿ ಸದಸ್ಯ ಮಂಜುನಾಥ್ ಸೇರಿದಂತೆ ಇತರರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!