Thursday, April 18, 2024

ಪ್ರಾಯೋಗಿಕ ಆವೃತ್ತಿ

ಅಕ್ಷರದವ್ವ ಸಾವಿತ್ರಿ ಬಾಯಿ ಫುಲೆ ಎಂದಿಗೂ ಪ್ರಸ್ತುತ: ಪಿಎಸ್ಐ ಸವಿತಾ

ಮಹಿಳೆಯರ ಶಿಕ್ಷಣಕ್ಕೆ ನಿಷೇಧವಿದ್ದ ಕಾಲಘಟ್ಟದಲ್ಲಿ ಎಲ್ಲ ಅಡೆತಡೆಗಳನ್ನು ಎದುರಿಸಿ, ಹೆಣ್ಣು ವಿದ್ಯೆ ಕಲಿಸಿದ ಭಾರತದ ಮೊದಲ ಶಿಕ್ಷಕಿ ಸಾವಿತ್ರಿ ಬಾಪುಲೆ ಎಂದೆಂದಿಗೂ ಪ್ರಸ್ತುತ ಎಂದು ಮಹಿಳಾ ಪೊಲೀಸ್ ಠಾಣೆಯ ಪಿಎಸ್ಐ ಸವಿತಾ ಬಾಬುಗೌಡ ಪೊಲೀಸ ಪಾಟೀಲ ಹೇಳಿದರು.

ಮಂಡ್ಯ ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ಕರ್ನಾಟಕ ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ರಾಜ್ಯ ಘಟಕ ಧಾರವಾಡ ಹಾಗೂ ಜಿಲ್ಲಾ ಘಟಕ ಆಯೋಜಿಸಿದ್ದ ಜಿಲ್ಲಾ ಮಟ್ಟದ ಸಾವಿತ್ರಿಬಾಯಿ ಫುಲೆ ಜಯಂತಿ ಹಾಗೂ ನಿವೃತ್ತ ಶಿಕ್ಷಕಿಯರಿಗೆ ಸನ್ಮಾನ ಸಮಾರಂಭವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಮಹಿಳೆಯರು ಶಿಕ್ಷಣವನ್ನು ಪಡೆದುಕೊಂಡರೆ ಬದುಕು ಹಸನಾಗುತ್ತದೆ , ಶಿಕ್ಷಣವು ಸ್ವರ್ಗದ ಬಾಗಿಲು ತೆರೆಯುತ್ತದೆ ಎಂಬುದನ್ನು ಹೇಳಿದ ಸಾವಿತ್ರಿಬಾಯಿ ಪೂಲೆ ಅವರ ಮಾತು ಇಂದಿಗೂ ಪ್ರಸ್ತುತವಾಗಿದೆ ಎಂದು ನುಡಿದರು.

ಶಿಕ್ಷಣವನ್ನು ಕಲಿತರೆ ಮಾತ್ರ ನಮ್ಮನ್ನು ನಾವು ನೋಡಿಕೊಳ್ಳಲು ಸಾಧ್ಯ ಎಂಬುದನ್ನು ಒತ್ತಿ ಹೇಳಿದ ಮಹಾನ್ ಸಮಾಜ ಸುಧಾರಕಿ ಸಾವಿತ್ರಿಬಾಯಿ ಫುಲೆ ಎಂದರೆ ಅತಿಶಯೋಕ್ತಿಯೇನಲ್ಲ. ಹೆಣ್ಣು ಎಂದರೆ ನಾಲ್ಕು ಗೋಡೆಯ ಮಧ್ಯೆದಲ್ಲಿಯೇ ಕಳೆಯಬೇಕೆನ್ನುವುದನ್ನೇ ಹೋಗಲಾಡಿಸಿದ ಕೀರ್ತಿ ಫುಲೆ ಕುಟುಂಬಕ್ಕೆ ಸಲ್ಲಬೇಕು ಎಂದು ತಿಳಿಸಿದರು.

nudikarnataka.com

ಸಂಘದ ಜಿಲ್ಲಾಧ್ಯಕ್ಷೆ ಎಚ್ ವೈ ಸರಸ್ವತಿ ಮಾತನಾಡಿ, ಶಿಕ್ಷಣದಿಂದ ಮಹಿಳೆ ಇಂದು ಲೋಕ ಮಾನ್ಯರಾಗುತ್ತಿದ್ದಾರೆ, ಎಲ್ಲಾ ಕ್ಷೇತ್ರಗಳಲ್ಲೂ ಸಾಧನೆ ಮಾಡಲು ಶಿಕ್ಷಣವು ಹೆದ್ದಾರಿಯಾಗಿದೆ ಮಹಿಳಾ ಸಬಲೀಕರಣಕ್ಕೆ ಹೋರಾಟ ಮಾಡಿಕೊಂಡು ಬರುತ್ತಿರುವ ಸಂಘವು ಜನರ ಮೆಚ್ಚುಗೆಗೆ ಪಾತ್ರವಾಗಿದೆ ಎಂದರು.

ಶೈಕ್ಷಣಿಕ ವಿಚಾರ ಸೇರಿದಂತೆ ಮಹಿಳೆಯರ ಸಮಸ್ಯೆಯನ್ನು ಪರಿಹರಿಸುವ ಕಾರ್ಯವನ್ನು ಮಾಡಲಾಗುತ್ತಿದೆ, ಇದಕ್ಕೆ ಎಲ್ಲರೂ ಸಹಕರಿಸುತ್ತಿರುವುದು ಮೆಚ್ಚುವ ಕೆಲಸವಾಗಿದೆ. ಸರ್ಕಾರದಲ್ಲಿ ಮಹಿಳೆಯರಿಗೆ ಸಿಗಬೇಕಾದ ಹಲವು ಯೋಜನೆಗಳನ್ನು ಪಡೆದುಕೊಳ್ಳಲು ಸಾವಿತ್ರಿಬಾಯಿ ಫುಲೆ ಶಿಕ್ಷಕಿಯರ ಸಂಘ ಪ್ರಮುಖ ಪಾತ್ರ ವಹಿಸುತ್ತಿದೆ ಎಂದರು.

ಹೆರಿಗೆ ರಜಾ ಹೆಚ್ಚಳ ಮತ್ತು ಶಿಕ್ಷಕಿಯರಿಗೆ ಇದ್ದ ಹಲವು ಸಮಸ್ಯೆಗಳನ್ನು ಬಗೆಹರಿಸುವಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸುತ್ತಾ ಬರುತ್ತಿದೆ, ಸಾವಿತ್ರಿಬಾಯಿ ಫುಲೆ ಹೆಸರಿನಲ್ಲಿ ಶಿಕ್ಷಕಿಯರಿಗೆ ರಾಜ್ಯಮಟ್ಟದ ಪ್ರಶಸ್ತಿ ಪ್ರದಾನ ಮಾಡುವ ಯೋಜನೆಯು ಕೂಡ ಸಕಾರಗೊಂಡಿದೆ ಎಂದು ತಿಳಿಸಿದರು.

ಮಹಿಳಾ ಮತ್ತು ಮಕ್ಕಳ ಧ್ವನಿ ಸಂಸ್ಥೆ ಮಹಿಳಾ ಅಧ್ಯಕ್ಷ ರಜಿನಿರಾಜ್ ಮಾತನಾಡಿ, ಇಂದಿಗೂ ಮಹಿಳೆಯರ ಮೇಲೆ ದೌರ್ಜನ್ಯ ಮತ್ತು ಹಲ್ಲೆ ಪ್ರಕರಣಗಳು ಹೆಚ್ಚಾಗುತ್ತಿವೆ, ಮಾನಹಾನಿ ಕೃತ್ಯಗಳು ನಡೆಯುತ್ತಿವೆ.ಕೌಟುಂಬಿಕ ಸಮಸ್ಯೆಗಳು ಮಹಿಳೆಯರನ್ನು ಕಾಡುತ್ತಿವೆ, ಈ ನಿಟ್ಟಿನಲ್ಲಿ ಮಹಿಳೆಯರು ದಿಟ್ಟ ನಿರ್ಧಾರವನ್ನು ಕೈಗೊಂಡು ಸಂಘಟನಾತ್ಮಕ ಮನೋಭಾವ ರೂಢಿಸಿಕೊಳ್ಳಬೇಕೆಂದರು. ಇದೇ ಸಂದರ್ಭದಲ್ಲಿ ನಿವೃತ್ತ ಶಿಕ್ಷಕಿಯರನ್ನು ಅಭಿನಂದಿಸಲಾಯಿತು.

ಕಾರ್ಯಕ್ರಮದಲ್ಲಿ ಮಹಿಳಾ ಪೊಲೀಸ್ ಠಾಣೆಯ ಪಿಎಸ್.ಐ ಜಯಗೌರಿ, ಸಂಘದ ಗೌರವಾಧ್ಯಕ್ಷೆ ಸಿ ಪಾರ್ವತಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಕುಸ್ತರ್ ಬಾನು, ಖಜಾಂಚಿ ಲಕ್ಷ್ಮಮ್ಮ, ಶಿಕ್ಷಕಿಯರಾದ ಪ್ರಭಾವತಿ, ಶಿವಕುಮಾರಿ, ಸುಧಾಮಣಿ, ಸುಜಾತ, ಲತಾ ಹಾಗೂ ಸವಿತಾ ಇತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!