ವರದಿ: ಪ್ರಭು ವಿ ಎಸ್
ಮದ್ದೂರು ತಾಲೂಕಿನ ಕೂಳಗೆರೆ ಗ್ರಾ.ಪಂ.ಗೆ ನೂತನ ಅಧ್ಯಕ್ಷರಾಗಿ ಎನ್.ಡಿ.ಎ ಬೆಂಬಲಿತ ಅಭ್ಯರ್ಥಿ ಆಯ್ಕೆಯಾಗಿದ್ದಾರೆ.
ಹಿಂದಿನ ಅಧ್ಯಕ್ಷೆ ಉಮಾಪುಟ್ಟಸ್ವಾಮಿಯವರ ರಾಜಿನಾಮೆಯಿಂದ ತೆರವಾಗಿದ್ದ ಸ್ಥಾನಕ್ಕೆ ಶುಕ್ರವಾರ ನಿಗಧಿಯಾಗಿದ್ದ ಚುನಾವಣೆ ವೇಳೆ ಎನ್.ಡಿ.ಎ ಅಭ್ಯರ್ಥಿಯಾಗಿ ರೇಖಾ ನಂಜುಂಡಸ್ವಾಮಿ ಮತ್ತು ಕಾಂಗ್ರೆಸ್ ಬೆಂಬಲಿತ ಅಭ್ಯರ್ಥಿ ಉಮಾನಿಂಗರಾಜು ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದರು.
ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆ ವೇಳೆ ಎನ್.ಡಿ.ಎ ಬೆಂಬಲಿತ ಅಭ್ಯರ್ಥಿ ರೇಖಾ ನಂಜುಂಡಸ್ವಾಮಿ 8 ಮತ, ಇವರ ಪ್ರತಿಸ್ಪರ್ಧಿ ಉಮಾ ನಿಂಗರಾಜು 6 ಮತಗಳನ್ನು ಪಡೆದು ಎರಡು ಮತಗಳ ಅಂತರದಿಂದ ಪರಾಭವಗೊಂಡರಲ್ಲದೇ ಅರಕಲ್‌ದೊಡ್ಡಿ ಗ್ರಾಮದ ಗ್ರಾ.ಪಂ.ಸದಸ್ಯ ತಿಬ್ಬೇಗೌಡ ಗೈರು ಹಾಜರಾಗಿದ್ದರು. ಚುನಾವಣಾಧಿಕಾರಿಯಾಗಿ ತಾ.ಪಂ. ಇ.ಓ ರಾಮಲಿಂಗಯ್ಯ ಕರ್ತವ್ಯ ನಿರ್ವಹಿಸಿದರು.
ನೂತನ ಅಧ್ಯಕ್ಷರಾಗಿ ಆಯ್ಕೆಯಾದ ರೇಖಾನಂಜುಂಡಸ್ವಾಮಿಯವರನ್ನು ಗ್ರಾ.ಪಂ. ಸದಸ್ಯರು ಹಾಗೂ ಸ್ಥಳೀಯ ಮುಖಂಡರು ಅಭಿನಂದಿಸಿದರು.
ಅಭಿನಂದನೆ ಸ್ವೀಕರಿಸಿ ಮಾತನಾಡಿದ ನೂತನ ಅಧ್ಯಕ್ಷೆ ರೇಖಾ ನಂಜುಂಡಸ್ವಾಮಿ ತಮ್ಮನ್ನು ಅಧ್ಯಕ್ಷರನ್ನಾಗಿಸಲು ಶ್ರಮಿಸಿದ ಜೆ.ಡಿ.ಎಸ್ ಹಾಗೂ ಬಿ.ಜೆ.ಪಿ ಮುಖಂಡರಿಗೆ ಅಭಿನಂದನೆ ಸಲ್ಲಿಸುವುದಾಗಿ ಅವರಿಗೆ ಚ್ಯುತಿ ಬಾರದಂತೆ ಶ್ರದ್ಧೆ ಪ್ರಾಮಾಣಿಕತೆಯಿಂದ ಕರ್ತವ್ಯ ನಿರ್ವಹಿಸಿ ಸರಕಾರದ ಯೋಜನೆಗಳನ್ನು ಅರ್ಹ ಫಲಾನುಭವಿಗಳಿಗೆ ತಲುಪಿಸುವುದಾಗಿ ಹೇಳಿದರು.
ಕಡಿಮೆ ಅವಧಿಯಲ್ಲಿ ಗ್ರಾ.ಪಂ. ವ್ಯಾಪ್ತಿಯ ಎಲ್ಲಾ ಗ್ರಾಮಗಳಿಗೂ ಅಗತ್ಯ ಸೌಲಭ್ಯ ಕಲ್ಪಿಸಲುವ ಜತಗೆ ನರೇಗಾ ಯೋಜನೆಯಡಿ ಗ್ರಾಮಾಭಿವೃದ್ಧಿಗೆ ಹೆಚ್ಚಿನ ಒತ್ತು ನೀಡಿ ಕುಡಿಯುವ ನೀರು, ರಸ್ತೆ ದುರಸ್ತಿ, ಬೀದಿದೀಪ ಇನ್ನಿತರ ಸವಲತ್ತು ಕಲ್ಪಿಸಿ ಮಾದರಿ ಗ್ರಾ.ಪಂ. ನ್ನಾಗಿಸಲು ಶಕ್ತಿ ಮೀರಿ ಶ್ರಮಿಸುವುದಾಗಿ ತಿಳಿಸಿದರು.
ಈ ವೇಳೆ ಗ್ರಾ.ಪಂ. ಸದಸ್ಯರಾದ ರೇಖಾ, ಜಯಮ್ಮ, ಕುಮಾರಿ, ಮುಖಂಡರಾದ ಕೆ.ಟಿ.ಶೇಖರ್, ಮಂಡ್ಯ ಮಲ್ಲೇಶ್, ಕೆ.ಟಿ.ನಂದೀಶ್, ಕೆ.ಟಿ.ಅನಿಲ್‌ಕುಮಾರ್, ಪಿ.ಡಿ.ಓ ರಾಜಣ್ಣ ಸೇರಿದಂತೆ ಗ್ರಾಮಸ್ಥರು ಹಾಜರಿದ್ದರು.




