Thursday, September 19, 2024

ಪ್ರಾಯೋಗಿಕ ಆವೃತ್ತಿ

ಬಿಜೆಪಿ ಸರ್ಕಾರ ಪಠ್ಯಪುಸ್ತಕ ಪರಿಷ್ಕರಣೆಯಲ್ಲಿ ಭಾರಿ ಲೋಪವೆಸಗಿತ್ತು : ಕುಂ.ವೀರಭದ್ರಪ್ಪ

ಹಿಂದಿನ ಬಿಜೆಪಿ ಸರ್ಕಾರ ಪಠ್ಯ ಪುಸ್ತಕದಲ್ಲಿ ಭಾರಿ ಲೋಪ ಎಸಗಿತ್ತು, ಆದ್ದರಿಂದ ಕಾಂಗ್ರೆಸ್ ಸರ್ಕಾರ ಪಠ್ಯಪುಸ್ತಕ ಮರು ಪರಿಷ್ಕರಣೆ ಮುಂದಾಗಿರುವುದು ಸರಿಯಾದ ಕ್ರಮವಾಗಿದೆ ಎಂದು ಸಾಹಿತಿ ಕುಂ.ವೀರಭದ್ರಪ್ಪ ಹೇಳಿದ್ದಾರೆ.

ಚಾಮರಾಜನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾವು ಯಾರನ್ನ ಸೋಲಿಸಬೇಕು ಅಂತ ಇಷ್ಟಪಟ್ಟಿದ್ವೋ ಅವರು ಸೋತಿದ್ದಾರೆ. ಯಾರು ಗೆಲ್ಲಬೇಕು ಅಂತ ಆಶಯ ಹೊಂದಿದ್ದೆವೋ ಅವರು ಗೆದ್ದು 135 ಸೀಟು ತೆಗೆದುಕೊಂಡಿದ್ದಾರೆ. ಕರ್ನಾಟಕ ಜನತೆಗೆ ಗೆಲ್ಲಿಸೋದು ಎಷ್ಟು ಗೊತ್ತೋ, ಸೋಲಿಸೋದು ಸಹ ಅಷ್ಟೇ ಗೊತ್ತು ಎಂದು ಹೇಳಿದ್ದಾರೆ.

ಹಿಂದಿನ ಸರ್ಕಾರ ಪಠ್ಯ ಪುಸ್ತಕದಲ್ಲಿ ಭಾರಿ ಲೋಪ ಎಸಗಿದೆ. ಕೆಲವು ಹುಸಿ ದೇಶ ಭಕ್ತರನ್ನು ಬಿಂಬಿಸುವ ಪ್ರಯತ್ನವನ್ನು ಬಿಜೆಪಿ ಸರ್ಕಾರ ಮಾಡಿತ್ತು. ರೋಹಿತ್ ಚಕ್ರತೀರ್ಥ ಎಂಬ ಅಪಕ್ವ ವ್ಯಕ್ತಿಯನ್ನು ಪಠ್ಯ ಪುಸ್ತಕ ಪರಿಷ್ಕರಣೆ ಸಮಿತಿ ಅಧ್ಯಕ್ಷನನ್ನಾಗಿ ಮಾಡಿತ್ತು. ಅವರು ಮಾಡಿದ ತಪ್ಪನ್ನು ಸರಿಪಡಿಸಬೇಕು. ಹೊಸ ಪಠ್ಯಪುಸ್ತಕ ಜಾರಿಗೆ ತರಬೇಕು. ಬರಗೂರು ರಾಮಚಂದ್ರಪ್ಪ ಜಾರಿಗೆ ತಂದಿದ್ದ ಪುಸ್ತಕಗಳೇ ಮತ್ತೆ ಬರಬೇಕು ಎಂದು ಹೇಳಿದ್ದಾರೆ.

ಬಿಜೆಪಿಯವರು ಹೇಳೋದು ಭಾರತೀಯತೆ ಅಲ್ಲ, ಅವರು ಹೇಳೋದು ಹಿಂದುತ್ವ. ದೇಶದ ಎಲ್ಲರ ಹಿತಾಸಕ್ತಿ ಕಾಪಾಡೋದು ಭಾರತೀಯತೆ. ಬಿಜೆಪಿಯವರು ಹೇಳೋ ಭಾರತೀಯತೆ ಒಪ್ಪೋಕೆ ಸಾಧ್ಯವಿಲ್ಲ. ಬಿಜೆಪಿ ಅವ್ರು ಹೇಳೋದು ಆರ್​​​ಎಸ್​​ಎಸ್ ಪ್ರಣೀತ ಭಾರತೀಯತೆ. ಅಂಬೇಡ್ಕರ್, ಗಾಂಧಿ ಆಶಯದ ಭಾರತೀಯತೆ ಅಲ್ಲ. ಹಳೇ ಪಠ್ಯಕ್ರಮವನ್ನು ಸರ್ಕಾರ ಜಾರಿಗೆ ತರಬೇಕು ಎಂದು ವೀರಭದ್ರಪ್ಪ ಆಗ್ರಹಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!