Thursday, September 19, 2024

ಪ್ರಾಯೋಗಿಕ ಆವೃತ್ತಿ

ಕೆ.ವಿ. ಶಂಕರಗೌಡ ನಾಡಿನ ಸಾಕ್ಷಿಪ್ರಜ್ಞೆ ಆಗಿದ್ದರು ; ಜಯರಾಮ್ ರಾಯಪುರ

ಮಂಡ್ಯ ನೆಲದಲ್ಲಿ ಜನಿಸಿ ನಿತ್ಯ ಸಚಿವ ಎಂದೇ ಹೆಸರಾಗಿದ್ದ ಕೆ.ವಿ. ಶಂಕರಗೌಡರು ನಾಟಕಕಾರ, ಸಮಾಜ ಸೇವೆ, ಶಿಕ್ಷಣ ತಜ್ಞ, ಹಲವಾರು ನಾಯಕರನ್ನು ಹುಟ್ಟು ಹಾಕಿದವರು, ನಾಡಿಗೆ ಸಾಕ್ಷಿ ಪ್ರಜ್ಞೆ ಆಗಿದ್ದರು ಎಂದು ಬೆಂಗಳೂರು ಮಹಾನಗರ ಪಾಲಿಕೆ ವಿಶೇಷ ಆಯುಕ್ತ ಜಯರಾಮ್ ರಾಯಪುರ ಬಣ್ಣಿಸಿದರು.

ಮಂಡ್ಯ ನಗರದ ಪಿಇಎಸ್ ಕಾಲೇಜಿನ ಸ್ವಾಮಿ ವಿವೇಕಾನಂದ ರಂಗಮಂದಿರದಲ್ಲಿ ಕರ್ನಾಟಕ ಸಂಘ, ಕರ್ನಾಟಕ ಮೂಡಲಪಾಯ ಯಕ್ಷಗಾನ ಪರಿಷತ್ ಹಾಗೂ ಆದಿಚುಂಚನಗಿರಿ ಮೂಡಲಪಾಯ ಯಕ್ಷಗಾನ ಕೇಂದ್ರದಿಂದ ನಡೆಯುತ್ತಿರುವ ನಾಟಕೋತ್ಸವ ಕೆ.ವಿ ಶಂಕರಗೌಡ ಅಧ್ಯಯನ ಪೀಠ, ಕೆ.ವಿ ಶಂಕರಗೌಡ ಲಲಿತ ಕಲಾ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಉದ್ಘಾಟಿಸಿ ಮಾತನಾಡಿದರು.

ಬಹುಮುಖ್ಯ ಪ್ರತಿಭೆಗಳಲ್ಲಿ ಬಸವಣ್ಣನವರು ಗಂಗರಸರ ಕಾಲದಲ್ಲಿ ದಂಡನಾಯಕನಾಗಿದ್ದ ಚಾವುಂಡರಾಯರಲ್ಲಿ ಬಹುಮುಖ ವ್ಯಕ್ತಿತ್ವವಿತ್ತು. ಮೂರನೇ ಬಹುಮುಖ ವ್ಯಕ್ತಿತ್ವ ಕಂಡಿದ್ದು ಕೆ.ವಿ ಶಂಕರಗೌಡರು. ಒಬ್ಬ ವ್ಯಕ್ತಿಯಲ್ಲಿ ಹಲವಾರು ಆಯಾಮ ಕಾಣುವುದು ಅಪರೂಪ. ಅಂತಹ ಬಹುಮುಖ ವ್ಯಕ್ತಿತ್ವದವರು ಕೆ.ವಿ ಶಂಕರಗೌಡರು ಎಂದು ಹೇಳಿದರು.

ಕೆವಿಎಸ್ ಅವರು, ದೂರದರ್ಶಿತ್ವದ ವ್ಯಕ್ತಿಯಾಗಿದ್ದ ಅವರು ಹಲವಾರು ಕ್ಷೇತ್ರಗಳಲ್ಲಿ ತೊಡಗಿಸಿಕೊಂಡಿದ್ದರು. ಮರುಭೂಮಿಯಲ್ಲಿ ಪ್ರತಿಭೆ ಹುಡುಕುವುದು ಅವರ ಕೆಲಸವಾಗಿತ್ತು. ಸಾಂಸ್ಕೃತಿಕ ಪ್ರಜ್ಞೆ ಮೂಡಿಸಲು ನಾಟಕ ಸಂಸ್ಥೆ ಕಟ್ಟಿದ್ದರು. ಯುವಕರು ಯುವತಿಯರಿಗೆ ಉನ್ನತ ಶಿಕ್ಷಣ ನೀಡಲು ಜನತಾ ಶಿಕ್ಷಣ ಟ್ರಸ್ಟ್ ಸ್ಥಾಪಿಸಿದರು. ಹಲವಾರು ನಾಯಕರನ್ನು ರಾಜಕಾರಣಿಯನ್ನಾಗಿ ಬೆಳೆಸಿದ್ದಾರೆ. ಸಾಹಿತಿ ನಾಟಕಕಾರರನ್ನು ಗುರುತಿಸಿ ಸನ್ಮಾನ ಮಾಡಿಸಿ ಹೆಚ್ಚಿನ ಕೆಲಸ ಮಾಡಲು ಉತ್ತೇಜನ ನೀಡಿದರು ಎಂದರು.

ವಿಧಾನ ಪರಿಷತ್ ಮಾಜಿ ಸದಸ್ಯ ಕೆ.ಟಿ ಶ್ರೀಕಂಠೇಗೌಡ ಮಾತನಾಡಿ ಕೆ.ವಿ ಶಂಕರಗೌಡರು ಕೈಹಾಕದ ಕ್ಷೇತ್ರಗಳೇ ಇಲ್ಲ. ಶಿಕ್ಷಣ, ಸಹಕಾರ, ಸಾಹಿತ್ಯ, ರಂಗಭೂಮಿ, ಸಾಮಾಜಿಕ ಕ್ಷೇತ್ರಗಳಲ್ಲಿ ಅದ್ವಿತೀಯ ಸಾಧನೆ ಮಾಡಿದ್ದಾರೆ. ಶಂಕರಗೌಡ ಅವರು ಮಂಡ್ಯ ಜಿಲ್ಲೆ ಕಟ್ಟುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ ಎಂದರು.

ಕಾರ್ಯಕ್ರಮದಲ್ಲಿ ವಿದ್ವಾಂಸ ಡಾ. ರಾಗೌ ಅವರು ಅಧ್ಯಯನ ಪೀಠದ ಸಂದರ್ಶಕ ಪ್ರಾಧ್ಯಾಪಕ ಹುದ್ದೆ ಸ್ವೀಕಾರ ಮಾಡಿದರು. ಕಲಾವಿದ ಮೂರ್ಕಾಲು ದೇವರಾಜು ಅವರಿಗೆ ಕೆ.ವಿ ಶಂಕರಗೌಡ ಲಲಿತಕಲಾ ಪ್ರಶಸ್ತಿ ಪ್ರದಾನ ಮಾಡಲಾಯಿತು. ನಂತರ ಭಾಗವತರು ಹಾಗೂ ವಿವಿಧ ಪರಿಣತರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಕೆ.ವಿ ಶಂಕರಗೌಡ ಜೀವನಾಧಾರಿತ ‘ನಿತ್ಯಸಚಿವ’ ನಾಟಕ ಪ್ರದರ್ಶನ ನಡೆಯಿತು. ಪಿಇಟಿ ಅಧ್ಯಕ್ಷ ಕೆ.ಎಸ್ ವಿಜಯ್ ಆನಂದ್, ಕರ್ನಾಟಕ ಸಂಘದ ಅಧ್ಯಕ್ಷ ಪ್ರೊ. ಜಯಪ್ರಕಾಶ್ ಗೌಡ, ಪ್ರೊ. ರಾಜಪ್ಪ ದಳವಾಯಿ, ಡಾ. ಕಬ್ಬಿನಾಲೆ ವಸಂತ ಭಾರದ್ವಾಜ್, ಪ್ರಮೋದ್ ಶಿಗ್ಗಾವ್, ಅಜಯ್ ನೀನಾಸಂ ಇತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!