Friday, September 20, 2024

ಪ್ರಾಯೋಗಿಕ ಆವೃತ್ತಿ

ಜಾನುವಾರು ರಕ್ಷಣೆಗಾಗಿ ಕೆರೆ ತುಂಬಿಸುವ ಕಾರ್ಯ- ನರೇಂದ್ರಸ್ವಾಮಿ

ಬೇಸಿಗೆಯಲ್ಲಿ ರೈತರ ಜಾನುವಾರುಗಳಿಗೆ ಕುಡಿಯುವ ನೀರು ಜೊತೆಯಲ್ಲಿ ಕೆರೆ ತುಂಬಿಸುವ ಯೋಜನೆಗಳ ಮೂಲಕ ಜನರನ್ನು ಸಂರಕ್ಷಣೆ ಮಾಡುವ ಕೆಲಸವನ್ನು ಮಾಡುತ್ತಿದ್ದೇನೆ ಎಂದು ಶಾಸಕ ಪಿಎಂ ನರೇಂದ್ರಸ್ವಾಮಿ ತಿಳಿಸಿದರು.

ಮಳವಳ್ಳಿ ತಾಲೂಕಿನ ಚೊಟ್ಟನಹಳ್ಳಿ ಹಾಗೂ ಚಂದಹಳ್ಳಿ ಕೆರೆಗಳಿಗೆ ಬಾಗಿನ ಅರ್ಪಿಸಿ ಮಾತನಾಡಿದ ಅವರು, ಕನ್ನಂಬಾಡಿ ನೀರು ತುಂಬಿಲ್ಲದಿದ್ದರೂ ಇಂದು ತಾಲೂಕಿನ ರೈತರು ಬೆಳೆಗಳನ್ನು ಹಾಕದೆ ರೈತರ ಬದುಕು ಸಂಕಷ್ಟ ವಾಗಿದೆ. ಕನಿಷ್ಠ ಜನಜಾನುವಾರುಗಳಿಗಾದರೂ ಬೇಸಿಗೆಯಲ್ಲಿ ಕಾಪಾಡುವ ಜವಾಬ್ದಾರಿಯನ್ನು ಕ್ಷೇತ್ರದ ರೈತರ ಜಾನುವಾರು ಗಳಿಗೆ ಕುಡಿಯುವ ನೀರು ಮತ್ತು ಬರವನ್ನು ನಿಭಾಯಿಸಲು ಗ್ಯಾರಂಟಿ ಯೋಜನೆಗಳ ಜೊತೆಯಲ್ಲಿ ಕೆರೆ ತುಂಬಿಸಲು ಯೋಜನೆಗಳ ಮೂಲಕ ಜನರನ್ನು ಸಂರಕ್ಷಣೆ ಮಾಡುವ ಕೆಲಸವನ್ನು ಮಾಡುತ್ತಿದ್ದೇನೆ ಎಂದು ತಿಳಿಸಿದರು.

ಮಳವಳ್ಳಿಯಲ್ಲಿ ಎರಡು ಕೆರಗಳನ್ನು ಹೊರೆತು ಪಡಿಸಿ ತಾಲೂಕಿನ ಎಲ್ಲಾ ಕೆರೆಗಳನ್ನು ತನ್ನ ಬುದ್ಧಿಶಕ್ತಿ ಮತ್ತು ಅಧಿಕಾರಿಗಳ ಸಹಕಾರದೊಂದಿಗೆ ನೀರು ತುಂಬಿಸಲಾಗಿದೆ ಕೊನೆಯ ಭಾಗಕ್ಕೆ ನೀರು ತರುವುದು ಕಷ್ಟಕರ ಸಹೋದರ ನನ್ನ ಒತ್ತಡಕ್ಕೆ ಮನೆದರ ಅಧಿಕಾರಿಗಳು ತಾಲೂಕಿನ ಕೊನೆಯ ಭಾಗಕ್ಕೆ ನೀರು ತಲುಪಿಸಲು ಶ್ರಮಿಸುತ್ತಾರೆ ಅವರಿಗೆ ಅಭಿನಂದಗಳನ್ನು ಸಲ್ಲಿಸುತ್ತೇನೆ ಎಂದು ತಿಳಿಸಿದರು.

ಇದೇ ವೇಳೆಯಲ್ಲಿ ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯರಾದ ಸುಷ್ಮಾ ರಾಜು, ವಿಶ್ವಾಸ್, ಟಿ ಎ ಪಿ ಸಿ ಎಂ ಎಸ್ ಸಿ ಅಧ್ಯಕ್ಷ ದ್ಯಾಪೇಗೌಡ, ಮುಖಂಡರಾದ ರಾಜು, ಶಿವ ಮಾದೇಗೌಡ, ಅಂಬರೀಶ್, ರವೀಂದ್ರ, ಬಸವರಾಜು ಹಾಗೂ  ನಾಗರಾಜು ಸೇರಿದಂತೆ ಇತರ ಇದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!