ಮದ್ದೂರು ತಾಲ್ಲೂಕಿನ ವೈದ್ಯನಾಥಪುರ ಗ್ರಾಮದ ಕಾಲುವೆ ರಸ್ತೆಯಲ್ಲಿ ನೆನ್ನೆ ಸುರಿದ ಭಾರಿ ಬಿರುಗಾಳಿ ಸಹಿತ ಮಳೆಗೆ ತೆಂಗಿನ ಮರವೊಂದು ಬುಡ ಸಮೇತ ಉರುಳಿ ಬಿದ್ದಿದೆ.
ಮರ ಬಿದ್ದ ರಭಸಕ್ಕೆ ರಸ್ತೆ ಉದ್ದಕ್ಕೂ ಇದ್ದ ವಿದ್ಯುತ್ ಕಂಬ , ತಂತಿಗಳು ಕಿತ್ತಿ ಹೋಗಿವೆ.
ತೆಂಗಿನ ಮರ ಬಿದ್ದ ಎದುರುಗಡೆ ಮೂರು ವಾಸದ ಮನೆಗಳಿದ್ದು,ಅದೃಷ್ಟವಶಾತತ್ ಯಾರಿಗೂ ಏನೂ ತೊಂದರೆಯಾಗಿಲ್ಲ.
ತೆಂಗಿನ ಮರ ಜನರಿಲ್ಲದ ಸಮಯದಲ್ಲಿ ಬಿದ್ದದ್ದರಿಂದ, ಕೂದಲೆಳೆಯಲ್ಲಿ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.