Friday, November 20, 2026

ಪ್ರಾಯೋಗಿಕ ಆವೃತ್ತಿ

ಪೊಲೀಸರ ಪ್ರತಿಭಟನೆಯಲ್ಲಿ ಅವಹೇಳನ ಖಂಡಿಸಿ ಮಂಡ್ಯದಲ್ಲಿ ವಕೀಲರ ಪ್ರತಿಭಟನೆ

ಚಿಕ್ಕಮಗಳೂರಿನಲ್ಲಿ ವಕೀಲ ಪ್ರೀತಂ ಮೇಲಿನ ಹಲ್ಲೆಗೆ ಸಂಬಂಧಿಸಿದಂತೆ ಆರು ಜನ ಪೊಲೀಸರ ವಿರುದ್ಧ ಎಫ್ಐಆರ್ ದಾಖಲಾಗಿದೆ, ಆದರೆ ಇದರಿಂದ ರೊಚ್ಚಿಗೆದ್ದ ಚಿಕ್ಕಮಗಳೂರಿನ ಪೊಲೀಸರು ವಕೀಲರ ವಿರುದ್ದ ಪ್ರತಿಭಟಿಸುವ ಸಂದರ್ಭದಲ್ಲಿ ವಕೀಲರನ್ನು ಅವಹೇಳನ ಮಾಡಿರುವುದನ್ನು ಖಂಡಿಸಿ ಮಂಡ್ಯ ವಕೀಲರು ಸೋಮವಾರ ಪ್ರತಿಭಟನೆ ನಡೆಸಿದರು.

ಮಂಡ್ಯ ಜಿಲ್ಲಾ ವಕೀಲರ ಸಂಘದ ನೇತೃತ್ವದಲ್ಲಿ ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಪ್ರತಿಭಟನೆ ನಡೆಸಿದರು. ಪೊಲೀಸರ ಪ್ರತಿಭಟನೆಯಲ್ಲಿ ವಕೀಲರನ್ನು ಸಂಘರ್ಷಕ್ಕೆ ಬರುವಂತೆ ತೊಡೆತಟ್ಟಿ,  ಕರೆಯುವುದರ ಮೂಲಕ ಗೂಂಡಾರೀತಿಯ ವರ್ತನೆ ತೋರಿರುವುದು ಖಂಡನೀಯ ಎಂದು ವಕೀಲರ ಸಂಘದ ಅಧ್ಯಕ್ಷ ರಾಜೇಂದ್ರ ಕಿಡಿಕಾರಿದರು.

ಪ್ರತಿಭಟನೆಯಲ್ಲಿ  ಕಾರ್ಯದರ್ಶಿಗಳಾದ ಸಿದ್ದರಾಜು, ಉಪಾಧ್ಯಕ್ಷ ಮರಿಸ್ವಾಮಿ, ಪದಾಧಿಕಾರಿಗಳಾದ ಗಿರಿಗೌಡ, ಮಹೇಶ್, ಸೀತಾರಾಮು, ಸುಂಡಹಳ್ಳಿ ಮಂಜುನಾಥ್, ಅಮೃತ್, ಚಂದ್ರಕಲಾ, ಮುಂತಾದ ವಕೀಲರು ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ