ಮದ್ದೂರು ತಾಲ್ಲೂಕಿನ ಭಾರತೀನಗರ ಬಳಿಯ ಅಣ್ಣೂರಿನಲ್ಲಿ ಮೇ 6 ರಂದು ಲಕ್ಷ್ಮೀದೇವಿ ದೇವಸ್ಥಾನ ಲೋಕಾರ್ಪಣೆ ಗೊಳ್ಳಲಿದೆ.
ಮೇ 6 ರಂದು ಸಂಜೆ 5 ಗಂಟೆಗೆ, ಗಾಯಿತ್ರಿ ಹೋಮ, ಶ್ರೀ ಲಕ್ಷ್ಮೀ ಹೋಮ, ವಾಸ್ತು ಹೋಮ, ಕಳಸ ಆರಾಧನೆ ನಂತರ ಪ್ರಸಾದ ವಿನಿಯೋಗ ಜರುಗಲಿದೆ.
ಮೇ 7 ರಂದು ಶನಿವಾರ ಬೆಳಿಗ್ಗೆ ಗೋ ಪೂಜೆ ಪ್ರವೇಶ ನಂತರ ಶ್ರೀ ಮಹಾಕಾಳಮ್ಮ ದೇವರ ಸನ್ನಿಧಾನದಿಂದ, ಶ್ರೀ ಲಕ್ಷ್ಮೀ ದೇವಿಯನ್ನು ಕರೆತಂದು ಗೋಪುರಗಳ ಕಳಶ ಸ್ಥಾಪನೆ, ಕುಂಬಾಭಿಷೇಕ ನಡೆಯಲಿದೆ.
ಶ್ರೀಯವರ ಗದ್ದಿಗೆ ಅಲಂಕಾರ ಪೂಜೆ, ಮೇ 8 ರಂದು ಭಾನುವಾರ ಬೆಳಿಗ್ಗೆ 6 ಗಂಟೆಗೆ ಗ್ರಾಮದ ಪ್ರಮುಖ ದೇವರುಗಳಾದ ಶ್ರೀ ವೆಂಕಟೇಶ್ವರ (ತಿಮ್ಮಪ್ಪ), ಶ್ರೀ ಮಹಾಕಾಳಮ್ಮ, ಶ್ರೀ ಮಾರಮ್ಮ, ಶ್ರೀ ಅಮೃತೇಶ್ವರಿ ,ಶ್ರೀ ಸಿದ್ದೇಶ್ವರ, ಶ್ರೀ ಅಟ್ಟಿಮಾರಮ್ಮ ಹಾಗೂ ಬೊಪ್ಪಸಮುದ್ರದ ಶ್ರೀ ಚೌಡಮ್ಮ ದೇವರೊಡನೆ ಗಂಗಾಪೂಜೆ ಮಾಡಲಾಗುವುದು.
ಆಗ್ರ ಪೂಜೆ ನಂತರ ಶ್ರೀ ಮಹಾಲಕ್ಷ್ಮಿ ದೇವರಿಗೆ ಗುಡ್ಡಪ್ಪನನ್ನು ಮಾಡಲು ಪ್ರಾರ್ಥಿಸುವುದು ಮತ್ತು ಬರುವ ಭಕ್ತಾದಿಗಳಿಗೆ ಅನ್ನ ಸಂತರ್ಪಣೆ ವ್ಯವಸ್ಥೆ ಮಾಡಲಾಗಿದೆ ಎಂದು ಊರಿನ ನಾಡಗೌಡ ಎ.ಎಸ್.ರಾಜೀವ್ ತಿಳಿಸಿದ್ದಾರೆ.