ಮಂಡ್ಯದ ಯಾವ ಕೆರೆಯಲ್ಲಿ ಕಮಲ ಅರಳಿಸ್ತಿದ್ದಾರೋ ಕಾಣ್ತಿಲ್ಲ ಎಂದು ಶಾಸಕ ಸುರೇಶ್ ಗೌಡ ಹೇಳಿಕೆ ವಿಚಾರಕ್ಕೆ ತಿರುಗೇಟು ಕೊಟ್ಟಿರುವ ಸಚಿವ ನಾರಾಯಣಗೌಡ ನಾವು ಯಾವ ಕೆರೆ ಅಂತ ತೋರುಸ್ತೇವೆ
ಸುರೇಶ್ ಗೌಡರು ಕಣ್ಣಿಟ್ಟು ಕೊಂಡು ನೋಡಲಿ ಎಂದು ವಾಗ್ದಾಳಿ ನಡೆಸಿದರು.
ಮಂಡ್ಯ ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷರಾಗಿ ತಮ್ಮ ಆಪ್ತ ಶ್ರೀನಿವಾಸ್ ಅಧಿಕಾರ ಸ್ವೀಕಾರ ಸಮಾರಂಭ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ನಾನು ಉಪಚುನಾವಣೆಯಲ್ಲಿ ನಿಂತಾಗಲೂ ಹಿಂಗೆ ಟೀಕೆ, ಟಿಪ್ಪಣಿ ಮಾಡಿದ್ರು.
ಅವರಿಗೆ ನನ್ನ ಫಲಿತಾಂಶ ಉತ್ತರ ನೀಡಿತ್ತು. ಅವರು ಅಭಿವೃದ್ಧಿ ಬಗ್ಗೆ ಚಿಂತನೆ ಮಾಡಲಿ. ನಮ್ಮ ಸರ್ಕಾರ ಬಂದಿರೋದ್ರಿಂದ ಅವರ ತಾಲ್ಲೂಕು ಅಭಿವೃದ್ಧಿ ಯಾಗಿದೆ ಎಂಬುದನ್ನು ಮರೆಯಬಾರದು ಎಂದರು.