Friday, September 20, 2024

ಪ್ರಾಯೋಗಿಕ ಆವೃತ್ತಿ

ಸುದ್ದಿಯಲ್ಲಿ ನಿಖರತೆ ಇರಲಿ : ಎಸ್ಪಿ ಯತೀಶ್

ಇತ್ತೀಚಿನ ದಿನಗಳಲ್ಲಿ ಮಾಧ್ಯಮ ಕ್ಷೇತ್ರದಲ್ಲಿ ಗುಣಮಟ್ಟದ ಸುದ್ದಿಗಳು ಕಡಿಮೆಯಾಗುತ್ತಿದೆ. ಸುದ್ದಿಯಲ್ಲಿ ನಿಖರತೆ ಕಾಣುತ್ತಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಎನ್.ಯತೀಶ್ ತಿಳಿಸಿದರು.

ಮಂಡ್ಯ ನಗರದ ಕೆ.ವಿ. ಶಂಕರಗೌಡ ಶತಮಾನೋತ್ಸವ ಭವನದಲ್ಲಿ ನಡೆದ 2022-25 ನೇ ಸಾಲಿನ ನೂತನ ಆಡಳಿತ ಮಂಡಳಿ ಅಧಿಕಾರ ಸ್ಬೀಕಾರ ಅಭಿನಂದನಾ ಸಮಾರಂಭದಲ್ಲಿ ಅವರು ಭಾಗವಹಿಸಿ ಮಾತನಾಡಿದರು.

ಇಂದು‌ ಸಮಾಜದಲ್ಲಿ ಪತ್ರಕರ್ತರ ಜವಾಬ್ದಾರಿ ಮುಖ್ಯವಾಗಿದೆ. ವೈಯಕ್ತಿಕ ಹಿತಾಸಕ್ತಿ ಬದಿಗಿಟ್ಟು ಹೆಚ್ಚಿಸುವ ಕೆಲಸ ಆಗಬೇಕಿದೆ. ಎಲ್ಲಾ ಪತ್ರಕರ್ತರನ್ನು ಒಗ್ಗೂಡಿ ಕರೆದುಕೊಂಡು ಹೋಗುವ ಜವಾಬ್ದಾರಿ ನೂತನ ಮಂಡಳಿಗೆ ಮಂಡಳಿಗೆ ಇದೆ ಎಂದರು.

ಸಮಾಜದ ನಾಲ್ಕು ಸ್ತಂಭಗಳಲ್ಲಿ ಒಂದಾಗಿರುವ ಪತ್ರಿಕಾರಂಗದಲ್ಲಿ ನೀತಿ ಸಂಹಿತೆ ಹಾಗೂ ನೀತಿ ಧರ್ಮ ಇರಬೇಕು. ನೈತಿಕ ವಿಚಾರಗಳನ್ನು ಕಡಿಮೆ ಮಾಡಿ ಸಮಾಜಕ್ಕೆ ಅಗತ್ಯವಿರುವ ಸುದ್ದಿಗಳನ್ನು ನೀಡಿ, ಸುದ್ದಿಯ ನಿಖರತೆಯನ್ನು ಅಭಿವೃದ್ಧಿಪಡಿಸಿಕೊಳ್ಳಿ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!