Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಧಿಕಾರಿಗಳು ಉತ್ತಮ ಸೇವೆ ಸಲ್ಲಿಸಲಿ : ಜಪ್ರುಲ್ಲಾ ಖಾನ್

ಸರ್ಕಾರಿ ನೌಕರರು ತಮಗೆ ದೊರೆತಿರುವ ಅವಕಾಶ ಬಳಸಿಕೊಂಡು ಉತ್ತಮ ಸೇವೆ ಸಲ್ಲಿಸಬೇಕೆಂದು ಜೆಡಿಎಸ್ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಜಪ್ರುಲ್ಮಾ ಖಾನ್ ತಳಿಸಿದರು. ವರ್ಗಾವಣೆ ಸಹಜ ಹಾಗಾಗಿ ಯಾರೊಬ್ಬರೂ ಬೇಸರ ಮಾಡಿಕೊಳ್ಳಬಾರದು ಎಂದರು.

ವಾರ್ತಾ ಇಲಾಖೆ ಸಹಾಯಕ ನಿರ್ದೇಶಕ ಟಿ.ಕೆ. ಹರೀಶ್ ಅವರು ಇತ್ತೀಚೆಗೆ ಮೈಸೂರಿಗೆ ವರ್ಗಾವಣೆಗೊಂಡ ಹಿನ್ನೆಲೆಯಲ್ಲಿ ಜಿಲ್ಲಾ ಮತ್ತು ಪ್ರಾದೇಶಿಕ ಪತ್ರಿಕೆಗಳ ಸಂಪಾದಕರ ಸಂಘವು ನಗರದ ಪತ್ರಕರ್ತರ ಭವನದಲ್ಲಿ ಸೋಮವಾರ ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅನ್ನದ ಋಣ ಎಲ್ಲಿರುತ್ತದೋ ಅಲ್ಲಿಗೆ ಕರೆದೊಯ್ಯುತ್ತದೆ ಇದನ್ನು ಯಾರಿಂದಲೂ ತಪ್ಪಿಸಲು ಸಾಧ್ಯವಿಲ್ಲ. ನಾನು ಹುಟ್ಟಿದ್ದು ಮಂಡ್ಯದಲ್ಲಿ, ಬೆಳೆದಿದ್ದು ಮುಂಬೈಯಲ್ಲಿ, ನಂತರ ದುಬೈ ಸೇರಿ ಜೀವನ ರೂಪಿಸಿಕೊಂಡೆ. ಯಾರು ಎಲ್ಲಿಗೆ ಹೋದರೂ ಉತ್ತಮವಾಗಿ ಕಾರ್ಯ ನಿರ್ವಹಿಸಿದರೆ ದೇವರ ಆಶೀರ್ವಾದ ಅವರಿಗೆ ಇರುತ್ತೆ ಎಂದರು.

ಈ ಮಣ್ಣಿನ ಋಣ ತೀರಿಸುವ ಭಾಗವಾಗಿ ಕೊರೊನ ಸಂದರ್ಭದಲ್ಲಿ ನಮ್ಮ ಫೌಂಡೇಷನ್ ವತಿಯಿಂದ ಫುಡ್ ಕಿಟ್ ವಿತರಣೆ ಮಾಡಿಸಿದೆ.ಆದರೆ ಕೆಲವರು ಈಗ ಮಾಡಬೇಡಿ ಎಂದು ಹೇಳಿದರು.ಅಂತಹ ಸಂದರ್ಭದಲ್ಲಿ ಪತ್ರಕರ್ತ ಮಿತ್ರರು ನನ್ನ ಸಹಾಯಕ್ಕೆ ಬಂದು ನಿಂತರು. ಹರೀಶ್ ಹಾಗೂ ನಿರ್ಮಲ ಅವರು ಉತ್ತಮವಾಗಿ ಸೇವೆ ಸಲ್ಲಿಸಲಿ ಎಂದು ಶುಭ ಕೋರಿದರು.

ಕಾರ್ಯನಿರತ ಪತ್ರಕರ್ತರ ಸಂಘದ ರಾಜ್ಯ ಕಾರ್ಯದರ್ಶಿ ಮತ್ತೀಕೆರೆ ಜಯರಾಮ್ ಮಾತನಾಡಿ, ಹರೀಶ್ ಅವರು ಮಂಡ್ಯದಲ್ಲಿ ಕರ್ತವ್ಯ ನಿರ್ವಹಿಸುವ ವೇಳೆ ಆಯುಷ್ಮಾನ ಕಾರ್ಡ್ ವಿತರಣೆಗೆ ಸಾಕಷ್ಟು ತಾಂತ್ರಿಕ ತೊಂದರೆಗಳಿದ್ದವು. ಇಂತಹ ಸಂದರ್ಭದಲ್ಲಿ ವೈಯಕ್ತಿಕವಾಗಿ ಕಾಳಜಿ ವಹಿಸಿ ಮಾನ್ಯತೆ ಪಡೆದ ಪತ್ರಕರ್ತರಿಗೆ ಆಯುಷ್ಮಾನ್ ಕಾರ್ಡ್ ವಿತರಣೆ ಮಾಡಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು ಎಂದು ಸ್ಮರಿಸಿದರು.

ಅವರ ಮುಂದಿನ ವೃತ್ತಿ ಜೀವನ ಸಹ ಯಶಸ್ವಿಯಾಗಲಿ, ಪತ್ರಕರ್ತರ ಪರ ಉತ್ತಮವಾಗಿ ಕೆಲಸ ಮಾಡಲಿ ಎಂದು ಶುಭ ಹಾರೈಸಿದರು. ನೂತನವಾಗಿ ಆಗಮಿಸಿರುವ ನಿರ್ಮಲಾ ಅವರು ಸಹ ಪತ್ರಕರ್ತರ ಪರ ಕೆಲಸ ಮಾಡಲಿ ಎಂದು ಆಶಿಸಿದರು.

ನಿರ್ಗಮಿತ ಅಧಿಕಾರಿ ಟಿ.ಕೆ.ಹರೀಶ್ ಮಾತನಾಡಿ, ಕಳೆದ 8 ವರ್ಷಗಳಿಂದ ಮಂಡ್ಯ ವಾರ್ತಾ ಇಲಾಖೆಯಲ್ಲಿ ಕರ್ತವ್ಯ ನಿರ್ವಹಿಸಿದ್ದು, ಎಲ್ಲರೂ ಉತ್ತಮ ಸಹಕಾರ ನೀಡಿದ್ದಾರೆ. ಇದೀಗ ಬಂದಿರುವ ವಾರ್ತಾಧಿಕಾರಿ ನಿರ್ಮಲಾ ಅವರಿಗೂ ಇದೇ ರೀತಿ ಸಹಕಾರ ನೀಡಿ ಎಂದರು.

ವಾರ್ತಾ ಇಲಾಖೆಯ ಸಹಾಯಕ ನಿರ್ದೇಶಕಿ ನಿರ್ಮಲ ಮಂಡ್ಯದಲ್ಲಿ ಈ ಹಿಂದೆ ಉತ್ತಮ ಸೇವೆ ಸಲ್ಲಿಸಿದ್ದೇನೆ. ಅದೇ ರೀತಿ ಮುಂದೆಯೂ ಸೇವೆ ಸಲ್ಲಿಸಲು ಜಿಲ್ಲೆಯ ಎಲ್ಲಾ ಪತ್ರಕರ್ತರ ಸಹಕಾರ ಕೋರಿದರು.

ನಿರ್ಮಲಾ ಹಾಗೂ ಹರೀಶ್ ಅವರನ್ನು ಸಂಘದ ಪರವಾಗಿ ಆತ್ಮೀಯವಾಗಿ ಸನ್ಮಾನಿಸಲಾಯಿತು. ಪತ್ರಕರ್ತರಾದ, ಕೆ.ಎನ್.ನವೀನ್ ಕುಮಾರ್ ಅಧ್ಯಕ್ಷತೆ ವಹಿಸಿದ್ದರು.

ವೇದಿಕೆಯಲ್ಲಿ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಸೋಮಶೇಖರ್ ಕೆರಗೋಡು, ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಜಿಲ್ಲಾಧ್ಯಕ್ಷ ಕೆ.ಸಿ.ಮಂಜುನಾಥ, ಉಪಾಧ್ಯಕ್ಷ ಬಿ.ಪಿ.ಪ್ರಕಾಶ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!