Saturday, July 13, 2024

ಪ್ರಾಯೋಗಿಕ ಆವೃತ್ತಿ

ಕೆಮ್ಮಣ್ಣು ನಾಲೆ ಉಳಿಸಿ : ನಾಳೆ ಅಚ್ಚುಕಟ್ಟುದಾರರ ಪ್ರತಿಭಟನೆ

ನ.ಲಿ.ಕೃಷ್ಣ ಕೃಷಿಕರು, ಸಾಮಾಜಿಕ ಹೋರಾಟಗಾರರು.

ಹೂಳುತೆಗೆದು ತೂಬು ರೀಪೇರಿ ಮಾಡಿ ನಾಲೆ ಕೊನೆಗೆ ನೀರು ಹರಿಸಲು ಆಗ್ರಹ

ಮದ್ದೂರು ಕೆರೆಯ ಮುಖ್ಯ ನಾಲೆಯಾದ ಕೆಮಣ್ಣುನಾಲೆಗೆ ಪಟ್ಟಣದ ತ್ಯಾಜ್ಯ ಸೇರಿ ಚರಂಡಿಯಂತಾಗಿದ್ದು ಕೆಮಣ್ಣು ನಾಲೆ ಉಳಿಸಿ ಎಂದು ಆಗ್ರಹಿಸಿ ಕೆಮ್ಮಣ್ಣುನಾಲೆ ಅಚ್ವುಕಟ್ಟುದಾರರು ನಾಳೆ ನೀರಾವರಿ ಇಲಾಖೆ ಕಛೇರಿ ಎದುರು ಪ್ರತಿಭಟನೆ ಹಮ್ಮಿಕ್ಕೊಂಡಿದ್ದಾರೆ.

ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ತೆಂಗು ಬೆಳೆಗಾರರ ಸಂಘದ ಅಧ್ಯಕ್ಷ ಚನ್ನಸಂದ್ರ ಲಕ್ಷ್ಮಣ್, ಪಟ್ಟಣದ ಘನ ಹಾಗು ದ್ರವ ತ್ಯಾಜ್ಯ ಅಕ್ರಮವಾಗಿ ನಾಲೆಗೆ ಸೇರಿತ್ತಿರುವ ಕಾರಣ ನಾಲೆಗೆ ಹೂಳು ತುಂಬಿಕ್ಕೊಂಡು ಜಲಕಳೆ ಆವೃತ್ತಗೊಂಡು ನಾಲೆ ಯಲ್ಲಿ ನೀರುಹರಿಯದಂತಾಗಿದೆ ಎಂದು ದೂರಿದರು.
ಇದರಿಂದ ಬೆಳೆಗಳಿಗೆ ಸಕಾಲಿಕವಾಗಿ ನೀರುಸಿಗದೆ ಬೆಳೆ ಒಣಗಿ ಅಪಾರ ನಷ್ಟ ಉಂಟಾಗುತ್ತಿದೆ ಇದರ ನಷ್ಠ ಭರಿಸುವವರು ಯಾರು ಎಂದು ಅಕ್ರೊಶ ವ್ಯಕ್ತಪಡಿಸಿದರು.

ನೀರಾವರಿ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯದ ಕಾರಣದಿಂದ ಪಟ್ಟಣದ ಯುಜಿಡಿ ಪೈಪ್ ಗಳು ನಾಲೆಗೆ ಅಡ್ಡಲಾಗಿ ಹಾದು ಹೋಗಿದೆ. ಇದರಿಂದ ನಾಲೆಯ ನೀರು ಸರಾಗವಾಗಿ ಹರಿಯಲು ಆಡಚಣೆ ಆಗಿರುವುದೇ ನಾಲೆಯ ಇಂತಹ ದುಸ್ಥಿಗೆ ಕಾರಣವಾಗಿದೆ ಎಂದು ತಿಳಿಸಿದ್ದಾರೆ.

ಕೂಡಲೆ ನಾಲೆಯ ಹೂಳು ತೆಗೆದು ಹಾಳಾಗಿರುವ ತೂಬುಗಳನ್ನ ರಿಪೇರಿ ಗೊಳಿಸಿ, ಮುರಿದ ಸೇತುವೆ ಸರಿಪಡಿಸಿ, ನಾಲೆಯ ಕೊನೆವರೆಗೂ ನೀರುಹರಿಸಿ, ಅಚ್ಚುಕಟ್ಟುದಾರರ ಹಿತಕಾಯಬೇಕು ಎಂದು ಆಗ್ರಹಿಸಿ ಪಟ್ಟಣದ ನೀರಾವರಿ ಕಛೇರಿ ಎದುರು ಪ್ರತಿಭಟನೆ ಹಮ್ಮಿಕ್ಕೊಳ್ಳಲಾಗಿದೆ ಎಂದು ತಿಳಿಸಿದರು

ರೈತರ ಮನವಿಗೆ ಸ್ಪಂದಿಸದೆ ಉದ್ದಟತನ ತೋರುತ್ತಾ, ನಾಲೆಯ ದುಸ್ಥಿಗೆ ಕಾರಣವಾಗಿರುವ ಇಂಜಿನಿಯರ್ ತಾರ ಅವರನ್ನು ಕೂಡಲೆ ವರ್ಗಾಯಿಸಿ, ದಕ್ಷ ಅಧಿಕಾರಿಯನ್ನು ಕೆಮ್ಮಣ್ಣು ನಾಲೆ ನಿರ್ವಹಣೆಗೆ ನೇಮಿಸಿಬೇಕೆಂದು ಈ ವೇಳೆ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ಹದಿನಾಲ್ಕು ಹಳ್ಳಿಗಳ ಕೃಷಿಕರ ಜೀವನಾಡಿಯಾಗಿರುವ ಕೆಮ್ಮಣ್ಣುನಾಲೆಯ ಆಧುನಿಕರಣ ಮಾಡುವ ಮೂಲಕ ಶಾಶ್ವತ ಪರಿಹಾರಕ್ಕೆ ಸರ್ಕಾರ ಮುಂದಾಗಬೇಕು.

ಪ್ರಯಾಣಿಕರ ಸುರಕ್ಷತೆಗಾಗಿ ಪಟ್ಟಣ ವ್ಯಾಪ್ತಿಯಲ್ಲಿ ತಡೆ ಗೋಡೆ ಹಾಗೂ ಘನ ತ್ಯಾಜ್ಯ ಹಾಕುವುದನ್ನು ತಡೆಯಲು ಜಾಲರಿ ಅಳವಡಿಕೆ ಸೇರಿದಂತೆ ಸರ್ವಿಸ್ ರಸ್ತೆಗಳ ಡಾಂಬರಿಕರಣ ಮಾಡಬೇಕು. ಶಾಶ್ವತ ಪರಿಹಾರವಾಗಿ ನಾಲೆಯ ಅಧುನಿಕರಣಕ್ಕೆ ಕ್ರಮವಹಿಸಬೇಕೆಂದಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!