Friday, September 20, 2024

ಪ್ರಾಯೋಗಿಕ ಆವೃತ್ತಿ

ಯಾರ್‍ಯಾರು ಭೂಮಿ ಕಬಳಿಸಿದ್ದಾರೆ ತನಿಖೆಯಾಗಲಿ- ಚಲುವರಾಯಸ್ವಾಮಿ

ನಾನು ರೈತರ ಭೂಮಿ ಕಬಳಿಸಿಲ್ಲ ಎಂದು ಎಚ್‌.ಡಿ.ಕುಮಾರಸ್ವಾಮಿ ಹೇಳಿದ್ದಾರೆ, ಹಾಗಾದರೆ ಯಾರು ಭೂಮಿ ಕಬಳಿಸಿರುವವರು? ವೈಟ್ ಪೇಪರ್ ಡಿಕ್ಲೇರ್ ಮಾಡಲಿ ಬಿಡಿ. ಒಬ್ಬ ಮನುಷ್ಯ ಆಸ್ತಿ ಮಾಡುವುದಕ್ಕೆ ಇತಿಮಿತಿ ಇರುತ್ತದೆ. ರಾಜಕೀಯವಾಗಿ ಬಂದ ಕುಟುಂಬ ಎಷ್ಟು ಆಸ್ತಿ ಮಾಡಿದೆ ಎಂದು ತನಿಖೆ ಆಗಲಿ ಎಂದು ಕೃಷಿ ಸಚಿವ ಚಲುವರಾಯಸ್ವಾಮಿ ತಿರುಗೇಟು ನೀಡಿದರು.

ಮಂಡ್ಯ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕೇಂದ್ರ ಸರ್ಕಾರದೊಂದಿಗೆ ಎಚ್ಡಿಕೆ ಇದ್ದು, ಅವರೇ ತನಿಖೆ ಮಾಡಿಸಲಿ. ಎಲ್ಲ ಪಕ್ಷದ ಪ್ರಮುಖ ರಾಜಕಾರಣಿಗಳ ಮೇಲೆ ತನಿಖೆ ಆಗಲಿ. ಯಾರ್‍ಯಾರು ಎಷ್ಟು ಆಸ್ತಿ ಮಾಡಿದ್ದಾರೆಂದು ಕುಮಾರಸ್ವಾಮಿಯಿಂದಲೇ ಜನರಿಗೆ ಗೊತ್ತಾಗಲಿ ಎಂದರು.

ಎಚ್‌ಡಿಕೆ ಎಲ್ಲರನ್ನೂ ಟೀಕಿಸುತ್ತಿದ್ದಾರೆ. ನಾವು ಅವರು ಜತೆಯಲ್ಲಿಯೇ ಇದ್ದವರು. ಸಹಾಯ, ಬೆಂಬಲ ಮಾಡಿದವರನ್ನೇ ಒಂದು ಹೆಜ್ಜೆ ಮುಂದೆ ಹೋಗಿ ಮರೆಯುತ್ತಾರೆ. ಸಹಾಯ ಮಾಡಿದವರನ್ನ ನೆನೆಯುವಂತದ್ದನ್ನ ನಾನು ನೋಡಿಲ್ಲ ಎಂದ ಅವರು, ಹೆಚ್‌ಡಿಕೆ ಮನೆಗೆ ಅಕ್ರಮ ವಿದ್ಯುತ್ ಸಂಪರ್ಕ ಪಡೆದ ವಿವಾದ ಬಗ್ಗೆ ಪ್ರತಿಕ್ರಿಯಿಸಿ, ಫಾಸ್ಟ್ ಇಸ್ ಫಾಸ್ಟ್. ನಾವು ಅವರಂತೆ ವಿಚಾರ ಸಿಕ್ಕಿದರೆ ಎಳೆಯಲ್ಲ. ಅದನ್ನ ಬಿಟ್ಟು ಮುಂದೆ ಹೋಗೋಣ. ಗೃಹಜ್ಯೋತಿ ಯೋಜನೆ ಬಗ್ಗೆ ಎಚ್‌ಡಿಕೆ ಮಾಡುತ್ತಾರೆ. ನಾವು ಒಬ್ಬ ಮನುಷ್ಯನನ್ನು ಗೌರವಿಸಬೇಕು, ಪ್ರೀತಿಸಬೇಕು. ಆದರೆ ಅವರು ನಮ್ಮನ್ನ ಪ್ರೀತಿಸಬೇಕು, ಗೌರವಿಸಬೇಕು ಎಂದು ಕಾನೂನಿದೆಯೇ. ಒಬ್ಬರನ್ನ ಗೌರವದಿಂದ ಕಾಣುವುದು ನಮ್ಮ ಸಂಸ್ಕೃತಿ ಎಂದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!