Thursday, September 19, 2024

ಪ್ರಾಯೋಗಿಕ ಆವೃತ್ತಿ

ಇಷ್ಟವಾದ ’ವಿಶ್ವಗುರು’ವಿನ ಫೋಟೊ!

✍️ ಮಾಚಯ್ಯ ಎಂ ಹಿಪ್ಪರಗಿ

ತುಂಬಾ ಇಷ್ಟವಾದ ಅಷ್ಟೇ ಮಾರ್ಮಿಕವಾದ ಫೋಟೊ ಇದು. ಇತ್ತೀಚೆಗೆ ನಡೆದ ಜಿ-20 ಸಮ್ಮೇಳನಕ್ಕೆ ಬಂದಿದ್ದ ವಿದೇಶಿ ನಾಯಕರ ಜೊತೆ ಪ್ರಧಾನಿ ಮೋದಿ ತೆಗೆಸಿಕೊಂಡ ಫೋಟೊಗಳಿಗೆ ಲೆಕ್ಕವಿಲ್ಲ. ಅಕ್ಚುಯಲಿ, ಫೋಟೊಗಳೆಂದರೆ ಆ ಮನುಷ್ಯನಿಗೆ ಲೆಕ್ಕವೂ ಅಲ್ಲ. ತನ್ನ ನೆರಳಗಿಂತಲೂ, ಫೋಟೊಗ್ರಾಫರ್‌ಗಳನ್ನೇ ಸದಾ ಜೊತೆಗಿಟ್ಟುಕೊಂಡು ಓಡಾಡುವ ಮನುಷ್ಯ. ಅಂತವುಗಳಲ್ಲಿ ಈ ಫೋಟೊ ಕೂಡಾ ಒಂದು. ಅಮೆರಿಕಾದ ಅಧ್ಯಕ್ಷ ಬೈಡೆನ್‌ಗೆ ಕೂಡಾ ಮಾರ್ಗದರ್ಶನ ಮಾಡಿ, ದಾರಿ ತೋರುತ್ತಿರುವ ‘ವಿಶ್ವ ಗುರು’ವಿನಂತೆ ಮೋದಿ ಪಟಾಲಂ ಇದನ್ನು ‘ಪಿಆರ್ ಸರಕಾಗಿ’ ಬಳಸಿಕೊಳ್ಳುತ್ತಿದೆ. ಆದರೆ ನನಗೆ ಇಷ್ಟವಾಗಿದ್ದೇ ಬೇರೆ ಕಾರಣಕ್ಕೆ!

ಫೋಟೊದಲ್ಲಿರುವ ಅಷ್ಟೂ ಮಂದಿಯ ಹಿಂಬದಿಯಲ್ಲೊಂದು ಹೆಸರು ‘ಬ್ಲರ್ ಆಗಿ ಗೋಚರಿಸುತ್ತಿದೆ. ಹೌದು, ಮಹಾತ್ಮ ಗಾಂಧಿಯ ಹೆಸರು ಅದು! ಯಾವ ಗಾಂಧಿಯ ಕುರುಹನ್ನೆ ಚರಿತ್ರೆಯಿಂದ ಅಳಿಸಲು ‘ಹುಸಿ ವಿಶ್ವಗುರು’ ಮೋದಿ ಹಾಗೂ ಆತನ ಆರೆಸ್ಸೆಸ್ ಪಟಾಲಂ ಹವಣಿಸುತ್ತಿದೆಯೋ, ಅದೇ ಗಾಂಧಿಯ ಛಾಯೆ ಇಲ್ಲದೆ ಹೋದರೆ ಮೋದಿ ಕೂಡಾ nothing ಎಂಬ ಮರ್ಮವನ್ನು ಈ ಫೋಟೊ ಹೊರಹಾಕಿದಂತಿದೆ. ಇವತ್ತಿಗೂ ಜಗತ್ತು ಇಂಡಿಯಾವನ್ನು ಗುರುತಿಸುವುದು ಮಹಾತ್ಮಾ ಗಾಂಧಿ ಎಂಬ ನಿಜವಾದ ಐಡೆಂಟಿಟಿ ಕಾರ್ಡ್ ಮೂಲಕ. ಇದು ಅರ್ಥವಾಗದವರು ಗಾಂಧಿಯ ಪ್ರತಿಕೃತಿಗೂ ಗುಂಡು ಹಾರಿಸಿ ತಮ್ಮ ವಿಕೃತತೆಯನ್ನು ಹೊರಹಾಕುತ್ತಾರೆ. ಅಂತವರಿಗಷ್ಟೇ ಮೋದಿ ಒಬ್ಬ ‘ಹುಸಿ ವಿಶ್ವಗುರು’ವೆನಿಸಲು ಸಾಧ್ಯ.

ಆದರೆ ಈ ಫೋಟೊದಲ್ಲಿರುವ ನಿಜವಾದ ವಿಶ್ವಗುರುವೆಂದರೆ ಅದು ಮಹಾತ್ಮಾ ಗಾಂಧಿಯವರ ಹೆಸರು ಮಾತ್ರ….

ಅಷ್ಟಕ್ಕೂ ಈ ಫೋಟೊ ತೆಗೆಸಿಕೊಂಡದ್ದು ಮಹಾತ್ಮ ಗಾಂಧಿ ಸಮಾಧಿಯಿರುವ ರಾಜಘಾಟ್ ಬಳಿ. ಗಾಂಧಿಯ ಸಮಾದಿ ಸುತ್ತ, ಮೋದಿಯೂ ಸೇರಿದಂತೆ ವಿಶ್ವದ ಎಲ್ಲಾ ರಾಜಕೀಯ ನಾಯಕರು ತಲೆಬಾಗಿಸಿ ನಮಿಸಿ ನಿಂತ ಇನ್ನೊಂದು ಫೋಟೊ ಕೂಡಾ ನಮ್ಮಂತವರಿಗೆ ಇಷ್ಟವಾಗದಿರದು. ಆದರೆ ಖಂಡಿತ ಮೋದಿಯ ಭಕ್ತಗಣಕ್ಕೆ ಇಷ್ಟವಾಗಲಾರದು.

ಅಂದಹಾಗೆ, ಈ ಚಿತ್ರದಲ್ಲಿ ರಾಜಘಾಟ್ ಆವರಣದಲ್ಲಿ ಮೋದಿ ಬೈಡನ್‌ಗೆ ’ಮಹಾತ್ಮಾ ಗಾಂಧಿ ಸತ್ತದ್ದು ಹೇಗೆ? ಅವರನ್ನು ಕೊಂದ ಗೋಡ್ಸೆ ಯಾರು? ಗೋಡ್ಸೆಗೂ ಆರೆಸ್ಸೆಸ್‌ಗೂ ಏನು ಸಂಬಂಧ? ಆರೆಸ್ಸೆಸ್‌ಗೂ ತನಗೂ ಎಂಥಾ ನಂಟು’ ಎಂಬುದನ್ನು ವಿವರಿಸುತ್ತಿರುವಂತಿದೆ, ಹೌದಲ್ವಾ ಫ್ರೆಂಡ್ಸ್?

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!