Thursday, September 19, 2024

ಪ್ರಾಯೋಗಿಕ ಆವೃತ್ತಿ

ಜು.30ಕ್ಕೆ ಲಯನ್ ಪದಗ್ರಹಣ; ವಾಕ್ ಶ್ರವಣ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರ

ಅಂತರಾಷ್ಟ್ರೀಯ ಲಯನ್ ಸಂಸ್ಥೆ 317ಜಿ ಜಿಲ್ಲೆಯ ರಾಜ್ಯಪಾಲರ ಜಿಲ್ಲಾ ಸಂಪುಟ ಪದಗ್ರಹಣ ಸಮಾರಂಭ ಹಾಗೂ ವಾಕ್ (ಮಾತು) ಶ್ರವಣ (ಕಿವಿ) ದೋಷವಿರುವವರಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವು ಜು.30ರಂದು ಮಂಡ್ಯನಗರದ ಎ & ಎ ಕನ್ವೆನ್ಷನ್ ಸೆಂಟರ್ ನಲ್ಲಿ ನಡೆಯಲಿದೆ ಎಂದು ಲಯನ್ ಡಾ.ಎನ್. ಕೃಷ್ಣೇಗೌಡ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಅಂದು ಬೆಳಿಗ್ಗೆ 11 ಗಂಟೆಯಿಂದ ಸಂಜೆ 5 ರವರೆಗೆ ವಾಕ್ (ಮಾತು) ಶ್ರವಣ (ಕಿವಿ) ದೋಷವಿರುವವರಿಗೆ ಉಚಿತ ತಪಾಸಣೆ ಮತ್ತು ಚಿಕಿತ್ಸಾ ಶಿಬಿರವು ನಡೆಯಲಿದೆ, ವಾಕ್ (ಮಾತು) ಶ್ರವಣ (ಕಿವಿ) ದೋಷವಿರುವವರು ಈ ಶಿಬಿರದಲ್ಲಿ ಭಾಗವಹಿಸಿ, ಇದರ ಉಪಯೋಗ ಪಡೆದುಕೊಳ್ಳಬೇಕೆಂದರು.

ಶಿಬಿರದಲ್ಲಿ ಉಚ್ಛಾರಣೆ ತೊಂದರೆ, ಭಾಷೆ ತೊಂದರೆ, ಕಲಿಕೆ ತೊಂದರೆ, ಕಿವಿ ಸೋರುವಿಕೆ, ಕಿವಿ ಕೇಳದವರು, ಸೀಳು ತುಟಿ, ಪಾರ್ಶ್ವವಾಯು ರೋಗ, ಬುದ್ದಿ ಮಾಂಧ್ಯತೆ, ಧ್ವನಿ ತೊಂದರೆ ಹಾಗೂ ಧ್ವನಿಯಲ್ಲಿ ಏರುಪೇರು ಇರುವವರಿಗೆ ಚಿಕಿತ್ಸೆ ನೀಡಲಾಗುವುದು. ಬಿಪಿಎಲ್ ಕಾರ್ಡ್ ಹೊಂದಿರುವವರು ಶಿಬಿರಕ್ಕೆ ತರತಕ್ಕದ್ದು ಎಂದು ತಿಳಿಸಿದರು.

ಜಾಹೀರಾತು

ಸಂಜೆ 5 ಗಂಟೆಗೆ ಜಿಲ್ಲೆಯ ರಾಜ್ಯಪಾಲರ ಜಿಲ್ಲಾ ಸಂಪುಟ ಪದಗ್ರಹಣ ಸಮಾರಂಭ ನಡೆಯಲಿದ್ದು, ಮುಖ್ಯ ಅತಿಥಿಯಾಗಿ ಕೃಷಿ ಹಾಗೂ ಜಿಲ್ಲಾ ಉಸ್ತುವಾರಿ ಮಂತ್ರಿ ಎನ್.ಚಲುವರಾಯಸ್ವಾಮಿ ಭಾಗವಹಿಸುವರು. ಅಂತರಾಷ್ಟ್ರೀಯ ಲಯನ್ಸ್ ಸಂಸ್ಥೆಯ ಮಾಜಿ ನಿರ್ದೇಶಕ ಬಿಷ್ಣು ಬಜೋರಿಯ ಜಿಲ್ಲಾ ರಾಜ್ಯಪಾಲ ಡಾ.ಎನ್.ಕೃಷ್ಣಗೌಡರಿಗೆ ಪದಗ್ರಹಣ ನೆರವೇರಿಸುವರು. ಇದೇ ಸಂದರ್ಭದಲ್ಲಿ ಲಯನ್ ವಿ.ವಿ.ಕೃಷ್ಣರೆಡ್ಡಿ, ಲಯನ್ ಬಿ.ಎಸ್.ರಾಜಶೇಖರಯ್ಯ ಅವರನ್ನು ಸನ್ಮಾನಿಸಲಾಗುವುದು. ಉಪ ರಾಜ್ಯಪಾಲರಾಗಿ ಎನ್.ಸುಬ್ರಮಣ್ಯ, ಕೆ.ಎಲ್.ರಾಜಶೇಖರ್ ಅಧಿಕಾರ ಸ್ವೀಕಾರ ಮಾಡುವರು. ಸಂಪುಟ ಅಧಿಕಾರಿಗಳಾಗಿ ಟಿ.ಹೆಚ್.ವೆಂಕಟೇಶ್, ಎ ಕಾಂತರಾಜ್, ಆನಂದ್ ಭಾಗವಹಿಸುವರು ಎಂದರು.

ಗೋಷ್ಟಿಯಲ್ಲಿ ಲಯನ್ ಸಂಸ್ಥೆಯ ಕೆ.ದೇವೇಗೌಡ, ಜಿ.ಎ.ರಮೇಶ್, ರಾಜಶೇಖರ್ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!