Friday, April 19, 2024

ಪ್ರಾಯೋಗಿಕ ಆವೃತ್ತಿ

ಛಾಯಾಚಿತ್ರ ಎಂಬುದು ಅದ್ಭುತ ಲೋಕ

ಛಾಯಾಚಿತ್ರ ಅದ್ಭುತ ಲೋಕವಾಗಿದ್ದು,ಒಳ್ಳೆಯ ಛಾಯಾಚಿತ್ರಗಾರರಾಗಲು ಉತ್ತಮ ಗುರುಗಳು ಸಿಗಬೇಕು.ಆಗ ಉತ್ತಮ ಛಾಯಾಗ್ರಾಹಕನಾಗಲು ಸಾಧ್ಯ ಎಂದು ಛಾಯಾಗ್ರಾಹಕ ವಿಭಾಗದ ಮುಖ್ಯಸ್ಥರಾದ ಬಸವರಾಜು ಮಾಯಾಚರಿ ಅವರು ತಿಳಿಸಿದರು.

ಜಿಲ್ಲಾ ಪಂಚಾಯತ್, ಬ್ಯಾಂಕ್ ಆಫ್ ಬರೋಡ ಸ್ವಉದ್ಯೋಗ ತರಬೇತಿ ಸಂಸ್ಥೆ, ಇವರ ಸಂಯುಕ್ತ ಆಶ್ರಯದಲ್ಲಿ ಒಂದು ತಿಂಗಳು ಮಂಡ್ಯ ನಗರದ ಕೆ.ಎಚ್‌.ಪಿ ಕಾಲೋನಿಯಲ್ಲಿರುವ ಬ್ಯಾಂಕ್ ಆಫ್ ಬರೋಡ ಆರ್ ಸೆಟಿ ಸಭಾಂಗಣದಲ್ಲಿ ನಡೆದ ವಿಡಿಯೋ ಹಾಗೂ ಫೋಟೋಗ್ರಾಫಿ ತರಬೇತಿ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಛಾಯಾಗ್ರಹಣದಲ್ಲಿ ಕಲಿಯಬೇಕಾದ ಸಾಕಷ್ಟು ವಿಷಯಗಳಿದೆ.ನಿಮ್ಮಲ್ಲಿರುವ ಕ್ಯಾಮರಾಗಳಲ್ಲಿ ಸಾಕಷ್ಟು ಕಲಾತ್ಮಕವಾದ ಛಾಯಾಚಿತ್ರಗಳನ್ನು ಸೆರೆ ಹಿಡಿಯ ಬಹುದಾಗಿದ್ದು, ಅದಕ್ಕೆ ತರಬೇತಿಯ ಅವಶ್ಯಕತೆ ಇದೆ ಎಂದರು.

ಈ 30 ದಿನಗಳ ತರಬೇತಿಯಲ್ಲಿ ಗುರುಗಳು ಉತ್ತಮ ತರಬೇತಿ ನೀಡುತ್ತಾರೆ.ಇದರ ಜೊತೆಗೆ ಸತತ ಪ್ರಯತ್ನದಿಂದ ಈ ಅವಕಾಶವನ್ನು ಸದ್ಬಳಕೆ ಮಾಡಿಕೊಳ್ಳಿ ಎಂದರು.

ಇದೇ ವೇಳೆ ವೃತ್ತಿಪರ ಛಾಯಾಗ್ರಾಹಕ ಸಂಘದ ಅಧ್ಯಕ್ಷ ಪ್ರಭು ಮಾತನಾಡಿ, ಶಿಬಿರಾರ್ಥಿಗಳು ವಿಡಿಯೋ ಹಾಗೂ ಛಾಯಾಚಿತ್ರ ತರಬೇತಿಯನ್ನು ಉತ್ತಮವಾಗಿ ಪಡೆದು ಉತ್ತಮ ಛಾಯಾಚಿತ್ರಗಾರ ರಾಗಿ ಹೊರಹೂಮ್ಮಿ ಎಂದು ತರಬೇತಿ ದಾರರಿಗೆ ಶುಭ ಆರಿಸಿದರು.

ಬ್ಯಾಂಕಿನ ಉಪವಲಯದ ವ್ಯವಸ್ಥಾಪಕ ಸನಾತನ ಸತುವ, ಆರ್ ಸೆಟಿ ನಿರ್ದೇಶಕ ವಿ.ವಿವೇಕ್, ಸೂರ್ಯಪ್ರಕಾಶ್, ಕಿಶೋರ್,ಕಾಂತರಾಜು, ಸೇರಿದಂತೆ ಇತರರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!