Friday, September 20, 2024

ಪ್ರಾಯೋಗಿಕ ಆವೃತ್ತಿ

ಚುನಾವಣೆ ಕೆಲಸಗಳನ್ನು ಜವಾಬ್ದಾರಿಯುತವಾಗಿ ನಿರ್ವಹಿಸಿ: ಡಾ.ಕುಮಾರ

ಚುನಾವಣಾ ಕೆಲಸಗಳು ಒತ್ತಾಯಪೂರ್ವಕವಾಗಿರಬಾರದು, ಜವಾಬ್ದಾರಿಯುತವಾಗಿರಬೇಕು ಎಂದು ಜಿಲ್ಲಾಧಿಕಾರಿ ಡಾ.ಕುಮಾರ ತಿಳಿಸಿದರು.

ಮಂಡ್ಯ ಮಿಮ್ಸ್ ಸಭಾಂಗಣದಲ್ಲಿ ಇಂದು ಲೋಕಸಭಾ ಸಾರ್ವತ್ರಿಕ ಚುನಾವಣೆ 2024 ರ ಹಿನ್ನಲೆ ಸೆಕ್ಟರ್ ಅಧಿಕಾರಿಗಳ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಮಾತನಾಡಿದರು.

ಚುನಾವಣೆ ಕೆಲಸಗಳನ್ನು ನೈತಿಕ ಭಯದೊಂದಿಗೆ, ಪಾರದರ್ಶಕವಾಗಿ, ಚುನಾವಣಾ ಆಯೋಗ ನಿಗದಿಪಡಿಸಿರುವ ನಿಯಮಗಳ ಅನುಸಾರ ನಿರ್ವಹಿಸಬೇಕು,ಯಾವುದೇ ಸ್ವಯಂ ನಿರ್ಧಾರಕ್ಕೆ ಅವಕಾಶವಿಲ್ಲ ಚುನಾವಣಾ ಕೆಲಸಗಳಿಗೆ ನಿಯೋಜಿಸಿರುವ ಸಿಬ್ಬಂದಿಗಳಿಗೆ ಮೊದಲ ಆದ್ಯತೆ ಚುನಾವಣಾ ಕೆಲಸವಾಗಬೇಕು ಎಂದರು.

ಸೆಕ್ಟರ್ ಅಧಿಕಾರಿಗಳು ಮೊದಲು ತಮ್ಮ ವ್ಯಾಪ್ತಿಗೆ ಬರುವ ಮತಗಟ್ಟೆಗಳನ್ನು ಪರಿಶೀಲಿಸಬೇಕು. ರ್ಯಾಂಪ್ (ramp), ಕುಡಿಯುವ ನೀರು, ಶೌಚಾಲಯ, ಬಾಗಿಲು ಕಿಟಕಿ, ವಿದ್ಯುತ್ ವ್ಯವಸ್ಥೆ, ವಿದ್ಯುತ್ ದೀಪ, ಕೊಠಡಿಗಳಿಗೆ ಒಳಗೆ, ಹೊರ ಹೋಗಲು ಮತದಾರರಿಗೆ ಸರಿಯಾದ ವ್ಯವಸ್ಥೆ ಸೇರಿದಂತೆ ಮುಂತಾದ ಮೂಲಭೂತ ವ್ಯವಸ್ಥೆಗಳು ಇರುವ ಬಗ್ಗೆ ತಹಶೀಲ್ದಾರ್ ಅವರಿಗೆ ವರದಿ ನೀಡಬೇಕು. ಯಾವುದೇ ವ್ಯವಸ್ಥೆ ಇಲ್ಲದಿದ್ದಲ್ಲಿ ಸಂಬಂಧಿಸಿದ ಅಧಿಕಾರಿಗಳನ್ನು ಸಂಪರ್ಕಿಸಿ ಸರಿಪಡಿಸಿಕೊಳ್ಳಬೇಕು. ಇ.ವಿ.ಎಂ ಮ್ಯಾನುಯಲ್ ನ್ನು ಅಧ್ಯಯನ ಮಾಡಿ ಸಂಪೂರ್ಣವಾಗಿ ತಿಳಿದುಕೊಂಡು‌ ಕೆಲಸ ನಿರ್ವಹಿಸಬೇಕು ಎಂದರು.

ಚುನಾವಣಾ ದಿನಾಂಕ ಪ್ರಕಟವಾದ ತಕ್ಷಣ ಶಾಸಕರು, ಸಚಿವರ, ಫೋಟೋ, ವಿಡಿಯೋಗಳನ್ನು ವೆಬ್ ಸೈಟ್, ಹೋರ್ಡಿಂಗ್ಸ್ ಗಳಲ್ಲಿ, ಸರ್ಕಾರಿ ಯೋಜನೆಗಳಲ್ಲಿ ಮುಚ್ಚಬೇಕು ಅಥವಾ ತೆರವುಗೊಳಿಸಬೇಕು.
ಖಾಸಗಿ ವಾಹನಗಳಲ್ಲಿ ಚುನಾವಣೆಗೆ ಸಂಬಂಧಿಸಿದಂತೆ ಫ್ಲಾಗ್, ಬ್ಯಾನರ್ ಗಳನ್ನು ಹಾಕಿಕೊಳ್ಳಲು ಅನುಮತಿ ಅವಶ್ಯಕವಾಗಿರುತ್ತದೆ ಅನುಮತಿ ಪಡೆಯದೇ ಅಭ್ಯರ್ಥಿಯು ಪ್ರಚಾರಕ್ಕೆ ಬಳಸುತ್ತಿದ್ದಾರೆ ವಾಹನವನ್ನು ವಶಕ್ಕೆ ಪಡೆಯುವುದು‌‌ ಎಂದರು.

ಕಾರ್ಯಾದೇಶ ನೀಡಿದ್ದರೂ ಕೆಲಸ ಪ್ರಾರಂಭಿಸಲು ಅವಕಾಶವಿಲ್ಲ

ಕಾಮಗಾರಿಗಳಿಗೆ ಸಂಬಂಧಿಸಿದಂತೆ ಕೆಲಸ ಪೂರ್ಣಗೊಂಡಿದ್ದಾರೆ ಬಿಲ್ ಪಾವತಿಗೆ ತೊಂದರೆ ಇಲ್ಲ‌. ಯಾವುದೇ ಹೊಸ ಕಾಮಗಾರಿಗೆ ಮಂಜೂರಾತಿ ಹಾಗೂ ಪ್ರಾರಂಭಿಸಲು ಅವಕಾಶವಿಲ್ಲ. ಟೆಂಡರ್ ಕರೆಯಲು, ಕಾರ್ಯಾದೇಶ ನೀಡಲು ಅವಕಾಶವಿಲ್ಲ. ಕಾರ್ಯಾದೇಶ ನೀಡಿದ್ದರೂ ಕೆಲಸ ಪ್ರಾರಂಭಿಸಲು ಅವಕಾಶವಿಲ್ಲ ಎಂದರು.

ಮತದಾನದ ದಿನದಂದು ಅಭ್ಯರ್ಥಿಯು 3 ವಾಹನಕ್ಕೆ ಮಾತ್ರ ಅವಕಾಶವಿರುತ್ತದೆ. ಇದರ ಬಗ್ಗೆ ನಿಗಾ ವಹಿಸಿ‌. ವಿಡಿಯೋ ಎಲ್. ಇ.ಡಿ ವಾಹನಕ್ಕೆ ಅನುಮತಿ ಪತ್ರ ಪಡೆದಿರುವುದನ್ನು ಪರಿಶೀಲಿಸಬೇಕು. ಸರ್ಕಾರದ ಅನುದಾನ ಬಳಸಿ ಯಾವುದೇ ಜಾಹೀರಾತು ನೀಡಲು ಅವಕಾಶ ಇಲ್ಲ. ಇವುಗಳ ಬಗ್ಗೆ ಎಚ್ಚರಿಕೆ ವಹಿಸಿ ಕಾರ್ಯನಿರ್ವಹಿಸಿ ಎಂದರು.

ಚುನಾವಣೆಯ ನಿರ್ವಹಣೆ ಕಾನೂನು ಸುವ್ಯವಸ್ಥೆ ಕಾಪಾಡುವುದು, ಮಾದರಿ ನೀತಿ ಸಂಹಿತೆ, ಚುನಾವಣಾ ಕಾರ್ಯಗಳ ಸುಗಮ ನಿರ್ವಹಣೆ, ಇವಿಎಂ ( ಎಲೆಕ್ಟ್ರಾನಿಕ್ ವೋಟಿಂಗ್ ಮಿಷನ್)ಗಳ ಕಾರ್ಯನಿರ್ವಹಣೆ, ಎಲ್ಲಾ ಅಧಿಕಾರಿಗಳ ಮಧ್ಯೆ ಸಮನ್ವಯತೆ ಸಾಧಿಸುವುದು ಹಾಗೂ ವ್ಯವಸ್ಥಿತ ಮತದಾರರ ಶಿಕ್ಷಣ ಮತ್ತು ಮತದಾನದಲ್ಲಿ ಪಾಲ್ಗೊಳ್ಳುವುದು ಸೆಕ್ಟರ್ ಅಧಿಕಾರಿಗಳ ಗುರಿ ಮತ್ತು ಉದ್ದೇಶಗಳಾಗಿವೆ ಎಂದರು.

ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದರೆ ಕೂಡಲೇ ಕ್ರಮ ಕೈಗೊಳ್ಳಬೇಕು

ಅಪರ ಜಿಲ್ಲಾಧಿಕಾರಿ ಡಾ. ಎಚ್. ಎಲ್. ನಾಗರಾಜು ಮಾತನಾಡಿ, ಸೆಕ್ಟರ್ ಅಧಿಕಾರಿಗಳು ಚುನಾವಣಾ ಕಾರ್ಯದಲ್ಲಿ ನಿರತರಾಗಿದ್ದಾಗ ಯಾವುದೇ ಕಾನೂನು ಬಾಹಿರ ಚಟುವಟಿಕೆಗಳು ಕಂಡು ಬಂದರೆ ಕೂಡಲೇ ಕ್ರಮ ಕೈಗೊಳ್ಳಬೇಕು. ಕಳೆದ ಗ್ರಾಮ, ತಾಲೂಕು, ಜಿಲ್ಲಾ ಪಂಚಾಯತ್, ನಗರಸಭೆ, ಪುರಸಭೆ, ನಗರ ಪಾಲಿಕೆ, ವಿಧಾನಸಭೆ ಮತ್ತು ಲೋಕಸಭೆಗಳಲ್ಲಿ ನಡೆದ ಘಟನೆಗಳು ದೂರುಗಳು ಸನ್ನಿವೇಶಗಳನ್ನು ತಿಳಿದು ಕಾರ್ಯನಿರ್ವಹಿಸಬೇಕು ಎಂದರು.

ಕೆಲವು ಉದಾಹರಣೆಗಳನ್ನು ನೀಡಿ ಯಾವ ರೀತಿ ಕೆಲಸ ನಿರ್ವಹಿಸಬೇಕು ಎಂದು ಸೆಕ್ಟರ್ ಅಧಿಕಾರಿಗಳಿಗೆ ವಿವರಿಸಿದರು.

ಕಾರ್ಯಕ್ರಮದಲ್ಲಿ ಮುಡಾ ಆಯುಕ್ತ ಲೋಕನಾಥ್, ಮಂಡ್ಯ ಉಪವಿಭಾಗಾಧಿಕಾರಿ ಶಿವಮೂರ್ತಿ, ಪಾಂಡವಪುರ ಉಪವಿಭಾಗಾಧಿಕಾರಿ ನಂದೀಶ್, ಜಿ.ಪಂ. ಉಪಕಾರ್ಯದರ್ಶಿ ಆನಂದ್ ಕುಮಾರ್ ಸೇರಿದಂತೆ ಎಲ್ಲಾ ಸೆಕ್ಟರ್ ಅಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!