Thursday, September 19, 2024

ಪ್ರಾಯೋಗಿಕ ಆವೃತ್ತಿ

ಪತ್ರಕರ್ತರಿಗೆ ಹಣದ ಆಮಿಷ: ಬೆತ್ತಲಾದ ಸರ್ಕಾರ

ದೀಪಾವಳಿಯ ಅಂಗವಾಗಿ ರಾಜ್ಯ ಸರ್ಕಾರ ಕೆಲವೊಂದು ಆಯ್ದ ರಾಜ್ಯ ಮಟ್ಟದ ಪತ್ರಿಕೆಗಳ ಸಂಪಾದಕರು ಹಾಗೂ ವರದಿಗಾರರಿಗೆ ಸ್ವೀಟ್ಸ್ ಬಾಕ್ಸ್ ,ದುಬಾರಿ ಮದ್ಯ ಹಾಗೂ 2.50 ಲಕ್ಷ ರೂ. ನೀಡುವ ಮೂಲಕ ರಾಜ್ಯದ ಜನರ ಮುಂದೆ ಬೆತ್ತಲಾಗಿ ನಿಂತಿದೆ‌.

ಬಿಜೆಪಿ ಸರ್ಕಾರ 40% ಕಮಿಷನ್ ಸರ್ಕಾರ ಎಂದು ಗುತ್ತಿಗೆದಾರರ ಸಂಘ ಅಧ್ಯಕ್ಷರೇ ಪ್ರಧಾನಿ ನರೇಂದ್ರ ಮೋದಿಯವರಿಗೆ ಪತ್ರ ಬರೆದಿದ್ದಾರೆ.ಈ ಬಗ್ಗೆ ಕಾಂಗ್ರೆಸ್ ಪಕ್ಷ ಕೂಡಾ ಪದೇ ಪದೇ ಆರೋಪಿಸುತ್ತಾ ಪೇಸಿಎಂ ಎಂಬ ಅಭಿಯಾನ ನಡೆಸಿತ್ತು.

ಇದಕ್ಕೆಲ್ಲ ಪುಷ್ಟಿ ನೀಡಿದಂತೆ ರಾಜ್ಯ ಸರ್ಕಾರ ಪತ್ರಕರ್ತರಿಗೆ ಹಣದ ಮೂಲಕ ಲಂಚ ನೀಡಲು ಹೋಗಿ ರಾಜ್ಯದ ಜನರೆದುರು ಸಂಪೂರ್ಣವಾಗಿ ಬೆತ್ತಲಾಗಿ ನಿಂತಿದೆ.ರಾಜ್ಯದ ಜನರಿಗೆ ಇದು ಲಂಚದ ಸರ್ಕಾರ ಎಂದು ಅಧಿಕೃತವಾಗಿ ತಿಳಿಸಿದೆ.

 

ಸ್ವತಃ ಸಿಎಂ ಕಚೇರಿಯಿಂದಲೇ ಪತ್ರಕರ್ತರಿಗೆ 2.50 ಲಕ್ಷ ಹಣದ ಸಮೇತ ಲಂಚದ ಸ್ವೀಟ್ ಬಾಕ್ಸ್ ಪತ್ರಕರ್ತರಿಗೆ ನೀಡಿದ್ದಾರೆ.ಇದನ್ನು ಕಂಡು ಒಂದಿಬ್ಬರು ಪತ್ರಕರ್ತರು ಚೆನ್ನಾಗಿ ಬೈದು ತಿರಸ್ಕರಿಸಿ ವಾಪಸ್ ಸಿಎಂ ಕಚೇರಿಗೆ ಲಂಚದ ಗಿಫ್ಟ್ ಬಾಕ್ಸ್ ವಾಪಸ್ ಕಳಿಸಿದ್ದಾರೆ.ಆದರೆ ಹಣ ಪಡೆದುಕೊಂಡ ಇನ್ನೂ ಕೆಲವರು ಏನು ಮಾಡಿದ್ರೂ ಎಂಬ ಬಗ್ಗೆ ಗೊತ್ತಾಗಿಲ್ಲ.

ಸಿಎಂ ಕಚೇರಿಯಿಂದಲೇ ಈ ಗಿಫ್ಟ್ ಬಾಕ್ಸ್ ನೀಡಲಾಗಿದೆ ಎಂಬುದು ದೊಡ್ಡ ಮಟ್ಟದಲ್ಲಿ ಬಹಿರಂಗವಾದರೂ ಈ ಬಗ್ಗೆ ಸಿಟ್ಟಾಗಬೇಕಾಗಿದ್ದ ಟಿವಿ ಮಾಧ್ಯಮಗಳು ಬಾಯಿಗೆ ಲಕ್ವಾ ಹೊಡೆದವರಂತೆ ಸುಮ್ಮನಿವೆ. ಅವುಗಳ ಬಾಯಲ್ಲಿ ಬಿಜೆಪಿ ಸರ್ಕಾರ ಕೊಟ್ಟ ಕಡುಬು ಸಿಕ್ಕಿಕೊಂಡಿದೆ‌‌.ಇದೇ ಜಾಗದಲ್ಲಿ ಬೇರೊಂದು ಸರ್ಕಾರ ಇದ್ದಿದ್ದರೆ ದಿನದ 24 ಗಂಟೆಯೂ ಲಂಚದ ಬಗ್ಗೆ ಮಾತನಾಡುತ್ತಾ ಹಾವಳಿಯಿಡುತ್ತಿದ್ದ ಟಿವಿ ಚಾನಲ್ ಗಳು ಸ್ವತಃ ಸಿಎಂ ಕಚೇರಿಯಿಂದಲೇ ಈ ಗಿಫ್ಟ್ ಬಾಕ್ಸ್ ನೀಡಿರುವ ಬಗ್ಗೆ ಮಾತೇ ಎತ್ತುತ್ತಿಲ್ಲ. ಸಿಎಂ ಕಚೇರಿಯಿಂದಲೇ ಲಂಚದ ಬಾಕ್ಸ್ ತಲುಪಿದ ಹಿನ್ನಲೆಯಲ್ಲಿ ಸಿಎಂ ಬಸವರಾಜ ಬೊಮ್ಮಾಯಿಯವರು ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕೆಂದು ಯಾರೂ ಒತ್ತಾಯಿಸುತ್ತಿಲ್ಲ.

ಕಾಂಗ್ರೆಸ್,ಜೆಡಿಎಸ್ ಸರ್ಕಾರವಿದ್ದರೆ 24 ಗಂಟೆಯೂ ಲಂಚ, ಭ್ರಷ್ಟಾಚಾರ ಎಂದೆಲ್ಲ ಬಾಯಿ ಬಡಿದುಕೊಳ್ಳುತ್ತಿದ್ದ ಮಾಧ್ಯಮಗಳು ಈಗ ಬಾಯಿ ಬಿಚ್ಚದಿರುವುದು ಯಾವ ರೀತಿ ಸರಿ ಎಂದು ರಾಜ್ಯದ ಜನರು ಮಾತನಾಡುತ್ತಿದ್ದಾರೆ. 40 ಪರ್ಸೆಂಟ್ ಕಮಿಷನ್ ಏಕೆಂದು ಈಗ ನಮಗೆ ಅರ್ಥವಾಗಿದೆ ಎಂದು ಹಲವು ಜನ ಸಾಮಾಜಿಕ ಜಾಲತಾಣಗಳಲ್ಲಿ ಬಿಜೆಪಿ ಸರ್ಕಾರದ ನಡೆಯನ್ನು ಟೀಕಿಸುತ್ತಿದ್ದಾರೆ.
ವಿವಿಧ ರಾಜ್ಯಗಳಲ್ಲಿ ಶಾಸಕರನ್ನು ಖರೀದಿಸಿ ಸರ್ಕಾರವನ್ನು ಉರುಳಿಸಿ ತಾನು ಅಧಿಕಾರ ನಡೆಸುತ್ತಿರುವ ಬಿಜೆಪಿ ಪಕ್ಷಕ್ಕೆ ಪತ್ರಕರ್ತರನ್ನು ಕೊಂಡುಕೊಳ್ಳುವುದು ಎಷ್ಟೊತ್ತಿನ ಮಾತು ಎಂಬುದು ರಾಜ್ಯದ ಜನರಿಗೆ ಗೊತ್ತಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!