Friday, September 20, 2024

ಪ್ರಾಯೋಗಿಕ ಆವೃತ್ತಿ

ಡಾ.ಎಂ.ಬಿ.ಶ್ರೀನಿವಾಸ್ ಪುಣ್ಯಸ್ಮರಣೆ: ಶಾಲಾ ಮಕ್ಕಳಿಗೆ ಬ್ಯಾಗ್ ವಿತರಣೆ

ಮಂಡ್ಯ ನಗರದಲ್ಲಿರುವ ಹೊಸಹಳ್ಳಿ ಸರ್ಕಾರಿ ಶಾಲೆ ಆವರಣದಲ್ಲಿ ಡಾ.ಎಂ.ಬಿ.ಶ್ರೀನಿವಾಸ್ ಪ್ರತಿಷ್ಠಾನ ಆಯೋಜಿಸಿದ್ದ ಡಾ.ಎಂ.ಬಿ.ಶ್ರೀನಿವಾಸ್ ಅವರ 2ನೇ ವರ್ಷದ ಪುಣ್ಯ ಸ್ಮರಣಾರ್ಥ ಶಾಲಾ ವಿದ್ಯಾರ್ಥಿಗಳಿಗೆ ನೋಟ್‌ಬುಕ್-ಶಾಲಾ ಬ್ಯಾಗ್ ವಿತರಣಾ ಕಾರ್ಯಕ್ರಮಕ್ಕೆ ಶಾಸಕ ರವಿಕುಮಾರ್‌ಗೌಡ ಗಣಿಗ ಚಾಲನೆ ನೀಡಿದರು.

ಬಳಿಕ ಮಾತನಾಡಿದ ಅವರು, ಪ್ರಗತಿಪರ ಹೋರಾಟಗಾರಾಗಿದ್ದ ಎಂ.ಬಿ.ಶ್ರೀನಿವಾಸ್ ಎಲ್ಲರ ಪ್ರೀತಿಗೆ ಪಾತ್ರರಾಗಿದ್ದರು, ದಲಿತ ಚಳುವಳಿ, ಹೋರಾಟ ಅಲ್ಲದೆ ರೈತಪರ, ಕಾವೇರಿ ಚಳುವಳಿಯಲ್ಲೂ ಮೂಂಚುಣಿಯಲ್ಲಿದ್ದರು, ಪ್ರತಿದಿನ ಹೋರಾಟದ ಮೂಲಕ ಜನರಿಗೆ ನ್ಯಾಯ ದೊರಕಿಸುವಲ್ಲಿ ಸಫಲತೆ ಕಾಣುತ್ತಿದ್ದರು, ಅಂತ ಹೋರಾಟಗಾರ ನಮ್ಮ ಜತೆ ಇಲ್ಲ ಎಂದು ಸ್ಮರಿಸಿದರು.

ಬಾಳಿ ಬದುಕುವ ವಯಸ್ಸಿನಲ್ಲಿ ತೀರಿಕೊಂಡರು, ಅವರ ಕುಟುಂಬಕ್ಕೆ ದು:ಖಭರಿಸುವ ಶಕ್ತಿ ದೇವರು ನೀಡಲಿ, ನಾವು ಸಾಂತ್ವಾನ ಸಲ್ಲಿಸೋಣ, ಅವರ ಸವಿ ನೆನಪಿನಲ್ಲಿ ಶಾಲಾ ಮಕ್ಕಳಿಗೆ ನೋಟ್‌ಬುಕ್-ಬ್ಯಾಗ್‌ಗಳನ್ನು ನೀಡುವುದರ ಮೂಲಕ ಅವರು ಇನ್ನೂ ಜೀವಂತವಾಗಿದ್ದಾರೆ ಎನ್ನುವುದನ್ನು ನೆನೆಯೋಣ ಎಂದರು.
ಇಂತಹ ಒಳ್ಳಯ ಕಾರ್ಯಕ್ರಮಕ್ಕೆ ಸಾಕ್ಷಾಯಾಗಿದ್ದೇವೆ, ಏನಾದರೂ ಸಾಧನೆ ಮಾಡಬೇಕಾದ ಸಂದರ್ಭದಲ್ಲಿ ಉತ್ತಮ ರೀತಿಯಲ್ಲಿ ಸಾಧನೆ ಮಾಡಿ ಮಾದರಿಯಾಗಿರೋಣ ಎಂದರು.

ಡಾ.ಎಂ.ಬಿ.ಶ್ರೀನಿವಾಸ್ ಪ್ರತಿಷ್ಠಾನದ ಮುಖ್ಯಸ್ಥ ರಾಹುಲ್‌ಶ್ರೀನಿವಾಸ್, ನಮ್ಮ ತಂದೆ ಪ್ರಗತಿಪರ ಹೋರಾಟಗಾರರು ಎಂದು ಹೇಳಿಕೊಳ್ಳುವುದಕ್ಕೆ ಹೆಮ್ಮೆಯಾಗುತ್ತದೆ, ನೊಂದವರಪರ ಹೋರಾಟ ಮಾಡಿ, ನ್ಯಾಯಕೊಡಿಸುವಲ್ಲಿ ಸಫಲರಾಗುತ್ತಿದ್ದರು, 40 ವರ್ಷಗಳ ಕಾಲ ಹೋರಾಟ ಜೀವನ ನಡೆಸಿದ್ದಾರೆ ಎಂದು ಸ್ಮರಿಸಿದರು.

ಮಂಡ್ಯದ ನೆಲ ಹೋರಾಟದ ಮಣ್ಣು, ಎಲ್ಲರಲ್ಲೂ ಹೋರಾಟದ ಗುಣವನ್ನು ಬೆಳೆಸುತ್ತದೆ, ನಮ್ಮ ತಂದೆಯೂ ಕೂಡ 80ರ ದಶಕದಲ್ಲಿ ದಲಿತ ಚಳುವಳಿ, ರೈತಚಳುವಳಿ, ಪ್ರಗತಿಪರ ಚಳುವಳಿ, ಹೋರಾಟಗಳಲ್ಲಿ ಪಾಲ್ಗೊಂಡು ಸಮರ್ಥ ನಾಯಕತ್ವ ವಹಿಸುತ್ತಿದ್ದರು, ದಸಂಸ ರಾಜ್ಯ ಸಂಘಟನಾ ಸಂಚಾಲಕರಾಗಿ ರೂಪುಗೊಂಡು ರಾಜ್ಯಮಟ್ಟದಲ್ಲಿ ಹೋರಾಟಗಳನ್ನು ನಡೆಸಿದ್ದರು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ನಗರಸಭಾ ಸದಸ್ಯರಾದ ಶ್ರೀಧರ್, ಪವಿತ್ರಾ, ರಾಮಲಿಂಗಯ್ಯ, ಮನ್ಮುಲ್ ನಿರ್ದೇಶಕ ಉಮ್ಮಡಹಳ್ಳಿ ಶಿವಕುಮಾರ ಶಿವಪ್ಪ, ಪ್ರಗತಿಪರ ಹೋರಾಟಗಾರ ಎಂ.ವಿ.ಕೃಷ್ಣ, ಸಾತನೂರು ಜಯರಾಂ, ಸಮಾಜಸೇವಕ ಶೇಖರ್‌ಹೊಸಹಳ್ಳಿ, ಶಾಲಾ ಶಿಕ್ಷಕರು ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!