Sunday, November 22, 2026

ಪ್ರಾಯೋಗಿಕ ಆವೃತ್ತಿ

ಎಂ.ಬಿ.ಶ್ರೀನಿವಾಸ್ ಪುಣ್ಯಸ್ಮರಣೆ : ರಕ್ತದಾನ ಶಿಬಿರ

ದಲಿತ ನಾಯಕ ಡಾ.ಎಂ.ಬಿ.ಶ್ರೀನಿವಾಸ್‌ ಅವರ ಪ್ರಥಮ ವರ್ಷದ ಪುಣ್ಯಸ್ಮರಣೆ ಅಂಗವಾಗಿ ಪಾಂಡವಪುರ ತಾಲೂಕಿನ ಮೇನಾಗರದಲ್ಲಿ ನ.22ರಂದು ಬೆಳಿಗ್ಗೆ 10.30ಗಂಟೆಗೆ ರಕ್ತದಾನ ಶಿಬಿರ ಹಮ್ಮಿಕೊಳ್ಳಲಾಗಿದೆ ಎಂದು ದಲಿತ ಮುಖಂಡ ಎಂ.ವಿ.ಕೃಷ್ಣ ತಿಳಿಸಿದರು.

ಮಂಡ್ಯದಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಈ ಜೀವಧಾರೆ ಟ್ರಸ್ಟ್ ವತಿಯಿಂದ ನಡೆಯುವ  ಶಿಬಿರದಲ್ಲಿ ಸುಮಾರು 60 ಮಂದಿ ರಕ್ತದಾನ ಮಾಡುವ ನಿರೀಕ್ಷೆ ಇದೆ, ಈ ಮೂಲಕ ಪ್ರಗತಿಪರ, ಜನಪರ ಹೋರಾಟಗಾರ ಎಂ.ಬಿ.ಶ್ರೀನಿವಾಸ್‌ ಅವರ ಹೆಸರನ್ನು ಚಿರಸ್ಥಾಯಿಯಾಗಿಸಲು ಮುಂದಾಗಿದ್ದೇವೆ ಎಂದರು.

ಈ ರಕ್ತದಾನ ಶಿಬಿರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಆಸಕ್ತರು ಆಗಮಿಸಿ, ರಕ್ತದಾನ ಮಾಡುವ ಮೂಲಕ ನೊಂದವರಿಗೆ ನೆರವಾಗಬೇಕೆಂದು ಮನವಿ ಮಾಡಿದರು.

ಗೋಷ್ಠಿಯಲ್ಲಿ ಮುಖಂಡರಾದ ಯತೀಶ್, ಪವನ್, ಕೃಷ್ಣಪ್ಪ, ಶಿವಲಿಂಗಯ್ಯ, ಅಪ್ಪಾಜಪ್ಪ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ