Saturday, November 21, 2026

ಪ್ರಾಯೋಗಿಕ ಆವೃತ್ತಿ

ಲೀಲಮ್ಮ- ಎಂ.ಕೆ.ಶಿವನಂಜಪ್ಪ ಪ್ರಶಸ್ತಿ ಪ್ರದಾನ: 4 ಕೃತಿಗಳ ಲೋಕಾರ್ಪಣೆ

ಮಂಡ್ಯದ ಮಾಜಿ ಸಂಸದ ಎಂ.ಕೆ.ಶಿವನಂಜಪ್ಪ ಹಾಗೂ ಮಾಜಿ ವಿಧಾನ ಪರಿಷತ್ ಸದಸ್ಯೆ ಲೀಲಮ್ಮ ಶಿವನಂಜಪ್ಪ ಅವರ ಸ್ಮರಣಾರ್ಥವಾಗಿ ಐದನೇ ವರ್ಷದ ಪ್ರಶಸ್ತಿ ಪ್ರದಾನ ಸಮಾರಂಭ ಹಾಗೂ 4 ಕೃತಿಗಳ ಲೋಕಾರ್ಪಣೆ ಕಾರ್ಯಕ್ರಮವನ್ನು ಡಿ.16ರಂದು ಬೆಳಿಗ್ಗೆ 10-30 ಗಂಟೆಗೆ ಮಂಡ್ಯನಗರದ ಗಾಂಧಿಭವನದಲ್ಲಿ ಆಯೋಜಿಸಲಾಗಿದೆ ಮಕ್ಕಳ ತಜ್ಞ ಡಾ.ಜಗದೀಶ್ ಕುಮಾರ್ ತಿಳಿಸಿದರು.

ಮಂಡ್ಯದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಂಡ್ಯ ಎಸ್.ಬಿ.ಎಜುಕೇಷನ್ ಟ್ರಸ್ಟ್ ಕಾರ್ಯದರ್ಶಿ ಮೀರಾ ಶಿವಲಿಂಗಯ್ಯ ಅಧ್ಯಕ್ಷತೆಯಲ್ಲಿ ನಡೆಯಲಿರುವ ಈ ಕಾರ್ಯಕ್ರಮವನ್ನು ಮಂಡ್ಯ ಜಿಲ್ಲಾ ಅಪರ ಜಿಲ್ಲಾಧಿಕಾರಿ ಡಾ.ಎಚ್.ಎಲ್‌.ನಾಗರಾಜು ಉದ್ಘಾಟಿಸುವರು. ಹಿರಿಯ ಸಾಹಿತಿ ತೈಲೂರು ವೆಂಕಟಕೃಷ್ಣ ಕೃತಿ ಲೋಕಾರ್ಪಣೆ ಮಾಡುವರು ಎಂದರು.

ಮಂಡ್ಯದ ಕಾಳನಾಯಕ ಕೆಂಪೇಗೌಡರ ಮನೆತನದ ಕುರಿತಾಗಿ ಡಾ.ಪ್ರದೀಪ್‌ ಕುಮಾರ ಹೆಬ್ರಿಯವರು ಬರೆದಿರುವ ಸುಮಾರು ಏಳುನೂರು ಪುಟಗಳ ಬೃಹತ್ ಕೃತಿ ‘ಅಜಾತ ಶತ್ರು’ ಹಾಗೂ ಮಾಜಿ ಸಚಿವ ಎಂ.ಎಸ್.ಆತ್ಮಾನಂದರವರು ಕಳೆದ ಸುಮಾರು ಹದಿನೈದು ವರ್ಷಗಳಿಂದ ಸಂಗ್ರಹಿಸಿದ ಚಿಂತನ ಬರಹಗಳ ಸಂಪಾದನಾ ಕೃತಿಗಳಾದ ‘ಸುಭಾಷಿತ’, ‘ವಿಚಾರ ವಿನಿಮಯ’ ಹಾಗೂ ‘ಆತ್ಮದೀಪ’ ಲೋಕಾರ್ಪಣೆಯಾಗಲಿರುವ ಕೃತಿಗಳಾಗಿವೆ ಎಂದರು.

ಇದೇ ಸಂದರ್ಭದಲ್ಲಿ ಮಂಡ್ಯದ ಕನ್ನಿಕ ಶಿಲ್ಪ ನವೋದಯ ತರಬೇತಿ ಕೇಂದ್ರದ ಮುಖ್ಯಸ್ಥೆ ಎಚ್.ಆ‌ರ್.ಕನ್ನಿಕ, ಮಂಡ್ಯ ಹೊಯ್ಸಳ ಕರ್ನಾಟಕ ಸೇವಾಟ್ರಸ್ಟ್ ನ ಕಾರ್ಯದರ್ಶಿ ಹೊಳಲು ರಾಘವೇಂದ್ರ, ಮಂಡ್ಯ ಚೆಸ್‌ ಅಕಾಡೆಮಿಯ ಸಹ ಸಂಸ್ಥಾಪಕ ಅಂತರಾಷ್ಟ್ರೀಯ ಚೆಸ್ ಆಟಗಾರ್ತಿ ಮಾಧುರಿ ಜೈನ್, ಹರಿಕಥಾ ಕೀರ್ತನಕಾರ ಕಾರಸವಾಡಿ ಸಚ್ಚಿನ್, ಪ್ರತಿಭಾನ್ವಿತ ವಿಶೇಷ ಚೇತನರಾದ ಡಾ.ಮಾಲಾ ಎಂ.ಬಿ. ಹಾಗೂ ಮಂಡ್ಯ ವೈದ್ಯಕೀಯ ಕಾಲೇಜಿನ ನಿವೃತ್ತ ಸಾರ್ವಜನಿಕ ಸಂಪರ್ಕ ಅಧಿಕಾರಿ ಚ.ಮ.ಉಮೇಶ್‌ ಬಾಬು ಅವರಿಗೆ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎಂದರು.

ಗೋಷ್ಠಿಯಲ್ಲಿ ಮುಖಂಡರಾದ ಎಂ.ಎಸ್.ಸತ್ಯಾನಂದ, ಡಾ.ಪ್ರದೀಪ್ ಕುಮಾರ್ ಹೆಬ್ರಿ, ಗುರು, ರಾಘವ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ