ಮದ್ದೂರು ತಾಲ್ಲೂಕು ಭಾರತೀನಗರ ಪಟ್ಟಣದ ಅಂಬೇಡ್ಕರ್ ಭವನದಲ್ಲಿ ಭಾರತೀನಗರದ ಪರಿಶಿಷ್ಟ ಜಾತಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮೀನ್ ಶಿವಲಿಂಗಯ್ಯ ಅವರ ನೇತೃತ್ವದಲ್ಲಿ ಬುದ್ದ ಪೂರ್ಣಿಮಾ ಕಾರ್ಯಕ್ರಮ ನಡೆಯಿತು.
ಈ ಸಂದರ್ಭದಲ್ಲಿ ಭಾರತೀನಗರದ ಪರಿಶಿಷ್ಟ ಜಾತಿಯ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಅಮೀನ್ ಶಿವಲಿಂಗಯ್ಯ ಅವರು ಸೋಮವಾರ ಸಂಜೆ 6 ಗಂಟೆಯಲ್ಲಿ ಮಾತನಾಡಿ, ಬುದ್ದ ರವರ ಮಾರ್ಗದರ್ಶನ, ಆದರ್ಶಗಳು ನಮ್ಮೆಲ್ಲರಿಗೂ ಪ್ರೇರೇಪಣೆಯಾಗಬೇಕು. ಸಮಾಜದ ಅಭಿವೃದ್ದಿಗಾಗಿ ಪ್ರತೀಯೊಬ್ಬರು ಬುದ್ದ ಅವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಬೇಕೆಂದರು.
ನಂತರ ದಲಿತ ಮುಖಂಡ ಚಿದಂಬರ್ ಮಾತನಾಡಿ, ಶಾಂತಿಗಾಗಿ ಪರಿಯಾಟನೆ ಮಾಡಿ ಅಹಿಂಸೆ ಮತ್ತು ಸತ್ಯದ ಮಾರ್ಗದ ಆರಾಧಕರಾದ ಭಗವಾನ್ ಬುದ್ದರವರ ಜಯಂತಿ ಕಾರ್ಯಕ್ರಮವನ್ನು ನಮ್ಮ ಪರಿಶಿಷ್ಟಜಾತಿಯ ಕಾಂಗ್ರೆಸ್ ಪಕ್ಷದ ವತಿಯಿಂದ ಆಯೋಜಿಸಲಾಗಿದ್ದು, ಬುದ್ದ ರವರ ಆದರ್ಶಗಳ ಮಾರ್ಗದಲ್ಲಿ ನಾವೆಲ್ಲರೂ ನಡೆಯೋಣ ಎಂದರು.




