Friday, September 20, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು – ಗೊರವನಹಳ್ಳಿ | ಡಿಜಿಟಲ್ ಗ್ರಂಥಾಲಯ ಪಿತಾಮಹ ಎಸ್ ಆರ್ ರಂಗನಾಥನ್ ಜಯಂತಿ

ವರದಿ : ನ.ಲಿ.ಕೃಷ್ಣ

ಗ್ರಂಥಾಲಯಗಳಿಗೆ ಪಂಚಸೂತ್ರ ರೂಪಿಸಿ ಗ್ರಂಥಾಲಯಗಳ ಅಗತ್ಯತೆ ಜೋಡಣೆ ಮತ್ತಿತರ ವಿಧಾನಗಳನ್ನು ರೂಪಿಸಿ ಗ್ರಂಥಾಲಯ ವಿಜ್ಞಾನಕ್ಕೆ ರೂಪು-ರೇಷೆ ತಂದುಕೊಟ್ಟ ಹಿರಿಮೆ ಶಿಯಾಳಿ ರಾಮಮೃತ ರಂಗನಾಥನ್ ಅವರದು ಎಂದು ಗೊರವನಹಳ್ಳಿ ಗ್ರಾಮ ಪಂಚಾಯಿತಿ ಗ್ರಂಥಪಾಲಕ ವಿವೇಕ್ ಚನ್ನಸಂದ್ರ ತಿಳಿಸಿದರು.

ಗೊರವನಹಳ್ಳಿ ಗ್ರಾ. ಪಂ. ನ ಡಿಜಿಟಲ್ ಗ್ರಂಥಾಲಯ ದಲ್ಲಿ ಏರ್ಪಡಿಸಿದ್ದ ಎಸ್. ಅರ್. ರಂಗನಾಥನ್ ಅವರ ಜನ್ಮದಿನ ಕಾರ್ಯಕ್ರಮದಲ್ಲಿ ಮಕ್ಕಳಿಗೆ ಮಾಹಿತಿ ನೀಡಿದರು.


ಮದ್ರಾಸ್ ಪ್ರಾಂತ್ಯದ ಶಿಯಾಳಿಯ ಪುಟ್ಟ ಹಳ್ಳಿಯಲ್ಲಿ 1892 ಆಗಸ್ಟ್ 12 ರಲ್ಲಿ ಜನಿಸಿದ ರಂಗನಾಥನ್ ಗ್ರಂಥಾಲಯ ಕುರಿತು ಅಸಕ್ತಿ ಕಲಿಕೆ ಮತ್ತು ಸಾಧನೆ ಮೂಲಕ ಗ್ರಂಥಾಲಯ ಗಳಿಗೆ ‘ಪಂಚಸೂತ್ರ’ ನೀಡಿ ಲೈಬ್ರರಿ ಸೈನ್ಸ್ ಗೆ ಬುನಾದಿಹಾಕಿಕೊಟ್ಟ ಹಿರಿಮೆ ಅವರದು ಎಂದ ಅವರು ಮಕ್ಕಳು

  1. ಗ್ರಂಥಗಳು ಉಪಯೊಗಕ್ಕಾಗಿವೆ
  2. ಪ್ರತಿಯೊಬ್ಬ ಓದುಗನಿಗೂ ಅವರದೆ ಆದ ಗ್ರಂಥ
  3. ಪ್ರತಿಯೊಂದು ಗ್ರಂಥಕ್ಕೆ ಅವರದೆ ಆದ ಓದುಗ
  4. ಓದುಗರ ಸಮಯ ಉಳಿಸಿ
  5. ಗ್ರಂಥಾಲಯ ಬೆಳೆಯುತ್ತಿರುವ ಸಂಸ್ಥೆ

ಈ ಪಂಚಸೂತ್ರ ಗಳ ಮಹತ್ವ ಅರಿತು ಜೀವನದಿ ಕಾರ್ಯಪ್ರವೃತ್ತರಾಗಬೇಕು ಎಂದರು.

ಕಾರ್ಯಕ್ರಮದಲ್ಲಿ ಶಾಲಾ ಮಕ್ಕಳು ಶಿಕ್ಷಕ ವರ್ಗದವರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!