Thursday, September 19, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು : ಹಾವು ರೈತನ ಮಿತ್ರ | ಮ.ನ.ಪ್ರಸನ್ನಕುಮಾರ್

ಪ್ರಾಕೃತಿಕ ಸಮತೋಲನ ಕಾಯ್ದುಕ್ಕೊಳ್ಳುವಲ್ಲಿ ಹಾವಿನ ಪಾತ್ರವಿದೆ ಹಾವು ರೈತನ ಮಿತ್ರ ಎಂದು ಉರಗಮಿತ್ರ ಮ.ನ.ಪ್ರಸನ್ನಕುಮಾರ್ ವಿಧ್ಯಾರ್ಥಿಗಳಿಗೆ ಮಾಹಿತಿ ನೀಡಿದರು

ಶಿವಪುರದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ಏರ್ಪಡಿಸಿದ್ದ ಉರಗ ಪ್ರಾತ್ಯಕ್ಷತೆಯಲ್ಲಿ ಹಾವುಗಳ ಕುರಿತು ಮಾಹಿತಿ ನೀಡಿ ಮಾತನಾಡಿದರು.

ಹೊಲ ಗದ್ದೆಗಳಲ್ಲಿ ಇಲಿಯನ್ನು ತಿನ್ನುವ ಹಾವುಗಳ ರೈತನ ಧಾನ್ಯ ಹಾಗೂ ಬೆಳೆಗಳನ್ನು ರಕ್ಷಿಸುವಲ್ಲಿ ಸಹಕಾರಿಯಾಗಲಿದೆ ಎಂದ ಅವರು ಪ್ರಕೃತಿಯು ತನ್ನದೆ ಆದ ಆಹಾರಸರಪಳಿ ರಚಿಸುವ ಮೂಲಕ‌ ಪ್ರಾಕೃತಿಕ ಸಮತೋಲನ ಕಾಯ್ದುಕೊಳ್ಳಲು ವ್ಯವಸ್ಥೆ ಮಾಡಿಕ್ಕೊಂಡಿದೆ ಎಂದರು.

ಹಾವು ವಿಷಕಾರಿ ಎಂದು ಕೊಲ್ಲುತ್ತಾ ಬಂದರೆ ಇಂತಹ ಆಹಾರ ಸರಪಳಿ ತುಂಡಾಗಿ ಪ್ರಾಕೃತಿಕ ಸಮತೋಲನ ತಪ್ಪಲಿದೆ ಎಂದರು. ಹಾವು ಮನುಷ್ಯ ತೊಂದರೆ ಕೊಡದ ಹೊರತು ಮನುಷ್ಯನಿಗೆ ಹುಡುಕಿಕೊಂಡು ಕಚ್ಚುವುದಿಲ್ಲಾ ಹಾವಿಗೆ ದ್ವೇಷ ಇದೆ ಎಂಬುದಾಗಲಿ ಹಾವು ಹಾಲು ಕುಡಿಯಲಿದೆ ಎಂಬುದಾಗಲಿ ತಪ್ಪು ಅಭಿಪ್ರಾಯ ಎಂದ ಪ್ರಸನ್ನಕುಮಾರ್ ಜನವಸತಿ ಪ್ರದೇಶದಲ್ಲಿ ಸಾಮಾನ್ಯವಾಗಿ ಕಂಡು ಬರುವ ಹಾವುಗಳ ಮಾಹಿತಿ ನೀಡಿದರು.

ಹಾವು ಜನವಸತಿ ಪ್ರದೇಶದಲ್ಲಿ ಕಂಡು ಬಂದಲ್ಲಿ ಕೊಲ್ಲದೆ ಹಾವಿನ ಮೇಲೆ‌ ಗಮನವಿರಿಸಿಕೊಂಡು ಉರಗಮಿತ್ರರಿಗೆ ಪೊನ್ ಮಾಡಿ ನನ್ನನ್ನು ಸೇರಿ ಹಲವು ಉರುಗ ಮಿತ್ರ ಬಂದು ಹಾವುಗಳ ಭಯ‌ ದೂರವಾಗಿಸುವಲ್ಲಿ ಹಾವುಗಳನ್ನು ಹಿಡಿದು ಸುರಕ್ಷಿತವಾಗಿ ಹತ್ತಿರದ ವನಪ್ರದೇಶಕ್ಕೆ ಬಿಡಲಾಗುವುದು ಎಂದು ತಿಳಿಸಿದರು.

ಹಾವಿನ ವಿಷವನ್ನು ಕ್ಯಾನ್ಸವರ್ ಗೆ ಸೇರಿ ಹಲವು ವಿಷಯದಲ್ಲಿ ಚುಚ್ಚುಮದ್ದಿಗೆ ಔಷಧಿಯಂತೆಯು ಬಳಸಲಾಗುವುದು ಎಂದರು.

ಹಸಿರು ಹಾ,ವು ಬಾಣಸುರಾ ಹಾವುಗಳ ಸಂಖ್ಯೆ ಕ್ಷೀಣಿಸುತ್ತಿರುವುದು ಆತಂಕದ ವಿಷಯ ಇಂತಹ ಹಾವುಗಳ ರಕ್ಣಣೆಗೆ ಸಂಬಂದಿಸಿದವರೆಲ್ಲಾ ಜಾಗೂರಕರಾಗಿ ಕ್ರಮವಹಿಸಬೇಕು. ಕಳೆನಾಶಕ, ಕೀಟ ನಾಶಕ ಬಳಕೆ ಹಾವುಗಳ ಸಂತತಿ‌ ಕ್ಷೀಣವಾಗಲು ಮುಖ್ಯ ಕಾರಣ ಎಂದ ಅವರು ರೈತರು‌ ಸಾವಯವ ಪದ್ದತಿಗೆ ಒತ್ತು ನೀಡಿ ಸುಸ್ಥಿರ ಕೃಷಿ ಅಳವಡಿಸಿಕ್ಕೊಳ್ಳುವ ಮೂಲಕ ಮಣ್ಣಿನ ಆರೋಗ್ಯ ಮತ್ತು ಪರಿಸರ ಪರ ಕಾಳಜಿ ವಹಿಸುವ ಜೊತೆ ಜೊತೆಗೆ ಉರುಗದ ರಕ್ಷಣೆಗೂ ಮುಂದಾಗಬೇಕೆಂದು ಶಾಲಾ ಮಕ್ಕಳು ಮತ್ತವರ ಪೋಷಕರಿಗೆ ಕಿವಿಮಾತು ಹೇಳಿದರು.

ಎಸ್ ಡಿ ಎಮ್ ಸಿ ಅಧ್ಯಕ್ಷ ಶಿವಕುಮಾರ್, ಮುಖ್ಯ ಶಿಕ್ಷಕ ರಾಜಶೇಖರ್, ಶಿಕ್ಷಕಿಯರಾದ ಬಾನುಮತಿ, ಎಸ್ ಡಿ ಎಮ್ ಸಿ ಸದಸ್ಯರುಗಳಾದ ಅರುಣ್ ಕುಮಾರ್, ಶ್ವೇತ ಮತ್ತು ಮಕ್ಕಳು ಮತ್ತವರ ಪೊಷಕರು ಭಾಗವಹಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!