Friday, November 20, 2026

ಪ್ರಾಯೋಗಿಕ ಆವೃತ್ತಿ

ಕರ್ನಾಟಕ ಸಂಘದಿಂದ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆ ; ನ.ಲಿ.ಕೃಷ್ಣ

ಶಾಲೆ ಕಾಲೇಜುಗಳಲ್ಲಿ ಕನ್ನಡ ಭಾಷೆಯ ಬೆಳವಣಿಗೆ, ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗಳು ಹೆಚ್ಚಾಗಿ ನಡೆಯಲು ಕರ್ನಾಟಕ ಸಂಘವು ಪೂರಕವಾಗಿ ಕೆಲಸ ಮಾಡುತ್ತಿದೆ ಎಂದು ಪ್ರಗತಿಪರ ಚಿಂತಕ ನ.ಲಿ.ಕೃಷ್ಣ ತಿಳಿಸಿದರು.

ಮದ್ದೂರಿನ ಎಂ.ಎಚ್ ಚನ್ನೇಗೌಡ ವಿದ್ಯಾಲಯದಲ್ಲಿ ಏರ್ಪಡಿಸಿದ್ದ ಕರ್ನಾಟಕ ಸಂಘದ ಉದ್ಘಾಟನೆ ಹಾಗು ಸಮವಸ್ತ್ರ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ಕನ್ನಡ ಭಾಷಾ ಚಳವಳಿ ಸಂದರ್ಭದಲ್ಲಿ ಕನ್ನಡದ ಬೆಳೆವಣಿಗೆ ಸಾಹಿತ್ಯ, ಸಾಂಸ್ಕೃತಿಕ ಚಟುವಟಿಕೆಗೆ ಒತ್ತು ನೀಡುವ ಉದ್ದೇಶದಿಂದ ಶಾಲೆ ಕಾಲೇಜುಗಳಲ್ಲಿ ಕರ್ನಾಟಕ ಸಂಘ ಆರಂಭಿಸಲಾಯಿತು ಎಂದು ಸಂಘದ ಇತಿಹಾಸ ಕುರಿತು ಮಕ್ಕಳಿಗೆ ತಿಳಿಸಿದರು.

ಜವಾಹರ್ ಪ್ರೌಢಶಾಲೆ, ಕಮಲ ನೆಹರು ಪ್ರೌಢಶಾಲೆ ಹಾಗೂ ಕಸ್ತೂರಿ ಬಾ ಶಾಲೆ ಮಹನೀಯರುಗಳ ಹೆಸರಿನಲ್ಲಿ ಆರಂಭಿಸಿದ ಶಾಲೆಗಳು ಇಲ್ಲಿನ ಆಡಳಿತ ಮಂಡಳಿಯ ಶೈಕ್ಷಣಿಕ ಪರ ಕಾಳಜಿಯಿಂದಾಗಿ ಸಹಸ್ರಾರು ವಿದ್ಯಾರ್ಥಿಗಳ ಭವಿಷ್ಯವನ್ನು ಹಸನು ಮಾಡಿವೆ. ಕರ್ನಾಟಕ ಸಂಘದ ಸಕ್ರಿಯ ಚಟುವಟಿಕೆ ಮಕ್ಕಳ ಪ್ರತಿಭೆಯನ್ನ ಹೊರ ತೆಗೆಯುವಲ್ಲಿ ಶ್ರಮಿಸಲಿ ಎಂದರು.

ಪುರಸಭಾ ಅಧ್ಯಕ್ಷರಾದ ಕೋಕಿಲಾ ಅರುಣಾ ಸಮವಸ್ತ್ರ ಶಾಲೆಯ ಸಂಕೇತವಾಗಿ ಅಷ್ಟೇ ಅಲ್ಲದೆ ಸಮಾನತೆಯ ಪ್ರತಿಬಿಂಬವು ಹೌದು. ವಿದ್ಯಾರ್ಥಿಗಳು ಪರಸ್ಪರರನ್ನ ಗೌರವಿಸಿ ಸಮಾನತೆಯಿಂದ ಕಾಣುವ ಗುಣ ಬೆಳೆಸಿಕ್ಕೊಳ್ಳಬೇಕೆಂದರು.ಈ ವಿದ್ಯಾಲಯದ ವಿದ್ಯಾರ್ಥಿಯಾದ ತಾನು ಪುರಸಭೆ ಅಧ್ಯಕ್ಷೆಯಾಗಿ ಕಾರ್ಯಕ್ರಮದಲ್ಲಿ ಭಾಗವಹಿಸುತ್ತಿರುವುದು ಅಭಿಮಾನದ ಸಂಗತಿ. ನೀವು ಕೂಡ ವಿವಿಧ ಕ್ಷೇತ್ರಗಳಲ್ಲಿ ಉನ್ನತ ಸಾಧನೆ ಮಾಡಿ ಶಾಲೆಗೆ ಪೊಷಕರಿಗೆ ಕೀರ್ತಿ ತನ್ನಿ ಎಂದರು.

ಎಂ ಎಚ್ ವಿದ್ಯಾಲಯದ ಕಾರ್ಯದರ್ಶಿ ಅಪೂರ್ವ ಚಂದ್ರು ಮಾತನಾಡಿ ಶಾಲೆಯ ಶೈಕ್ಷಣಿಕ ಪ್ರಗತಿ ಹಾಗೂ ಕ್ರೀಡೆ, ಕಲೆ, ಸಾಹಿತ್ಯ ಚಟುವಟಿಕೆಗೆ ನಮ್ಮ ಸಂಸ್ಥೆ ಹಿಂದಿನಿಂದಲೂ ಆಧ್ಯತೆ ನೀಡುತ್ತ ಬರುತ್ತಿದ್ದು
ಅದನ್ನ ಮುಂದುವರೆಸಿಕೊಂಡು ಹೋಗಲಾಗುವುದು ಎಂದರು.

ರಾಣಿ ಐಶ್ವರ್ಯ ಬಿಲ್ಡರ್ಸ್ ನ ರಾಣಿ ಸತೀಶ್ ಅವರು ಕರ್ನಾಟಕ ಸಂಘದ ಚಟುವಟಿಕೆಗಳು ಕ್ರಿಯಾಶೀಲಗೊಳ್ಳಲಿ ಎಂದು ಶುಭ ಹಾರೈಸಿದರು. ಶಾಲೆಯ ಅಭಿವೃದ್ದಿಗಾಗಿ 50,000 ರೂ. ದೇಣಿಗೆ ನೀಡಿದರು.

ಪುರಸಭೆ ಉಪಾಧ್ಯಕ್ಷ ಪ್ರಸನ್ನ, ತಾಲ್ಲೂಕು ಪತ್ರಕರ್ತರ ಸಂಘದ ಅಧ್ಯಕ್ಷ ಚಕ್ರಪಾಣಿ, ಉಪಾಧ್ಯಕ್ಷ ಹರೀಶ್, ಮಾಜಿ ಅಧ್ಯಕ್ಷರಾದ ಪುಟ್ಟಸ್ವಾಮಿ, ಎ ಪಿ ಎಂ ಸಿ ವರ್ತಕರ ಸಂಘದ ಶಿವರಾಜ್, ಉಮೇಶ್ ಬೋರಾಪುರ, ಶಿವಣ್ಣ ಗೌಡ ಮುಖ್ಯ ಶಿಕ್ಷಕರಾದ ಕೃಷ್ಣ ಹಾಗೂ ಚಂದ್ರಶೇಖರ್ ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ