Thursday, September 19, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು ಪುರಸಭೆ: ಆಪರೇಷನ್ ಮೂಲಕ ಕಾಂಗ್ರೆಸ್ ಅಧಿಕಾರಕ್ಕೆ

ಜೆಡಿಎಸ್ ಮತ್ತು ಬಿಜೆಪಿ ಸದಸ್ಯರಿಗೆ ಆಪರೇಷನ್ ಮಾಡುವ ಮೂಲಕ ಮದ್ದೂರು ಪುರಸಭೆಯಲ್ಲಿ ಕಾಂಗ್ರೆಸ್ ಅಧಿಕಾರದ ಚುಕ್ಕಾಣಿ ಹಿಡಿದಿದೆ.

ಶಾಸಕ ಕದಲೂರು ಉದಯ್ ನೇತೃತ್ವದಲ್ಲಿ ಕಾಂಗ್ರೆಸ್ ಪಕ್ಷ ಇಪ್ಪತ್ತು ವರ್ಷಗಳ ಬಳಿಕ ಪುರಸಭೆ ಅಧಿಕಾರ ಹಿಡಿಯುವಲ್ಲಿ ಯಶಸ್ವಿಯಾಗಿದೆ.23 ಸದಸ್ಯ ಬಲದ ಪುರಸಭೆಯ ಅಧ್ಯಕ್ಷ- ಉಪಾಧ್ಯಕ್ಷ ಸ್ಥಾನಕ್ಕೆ ಚುನಾವಣೆ ನಡೆಯಿತು.

ಜೆಡಿಎಸ್, ಬಿಜೆಪಿ ಸದಸ್ಯರನ್ನು ಆಪರೇಷನ್ ಮಾಡುವ ಮೂಲಕ ಶಾಸಕ ಕದಲೂರು ಉದಯ್ ಜೆಡಿಎಸ್ ಪಕ್ಷವನ್ನು ಅಧಿಕಾರದಿಂದ ಕೆಳಗಿಳಿಸಿ ಕೈ ತೆಕ್ಕೆಗೆ ಅಧಿಕಾರ ಕೊಡಿಸಿದ್ದಾರೆ.

ಕಾಂಗ್ರೆಸ್ ಪಕ್ಷದ ಪರ ಜೆಡಿಎಸ್ ನ 6 ಸದಸ್ಯರು ಹಾಗೂ ಬಿಜೆಪಿಯ ಓರ್ವ ಸದಸ್ಯ ಬೆಂಬಲ ನೀಡಿದ ಪರಿಣಾಮ ಅಧ್ಯಕ್ಷರಾಗಿ ಕಾಂಗ್ರೆಸ್‌ನ ಕೋಕಿಲಾ ಅರುಣ್ ಹಾಗೂ ಉಪಾಧ್ಯಕ್ಷರಾಗಿ ಜೆಡಿಎಸ್‌ನ ಟಿ.ಆರ್.ಪ್ರಸನ್ನ ಕುಮಾರ್ ಆಯ್ಕೆಯಾದರು.

ಕಾಂಗ್ರೆಸ್ ಅಭ್ಯರ್ಥಿ ಕೋಕಿಲ ಅರುಣ್ ಪರ ಕಾಂಗ್ರೆಸ್ 3, ಜೆಡಿಎಸ್ 6, ಪಕ್ಷೇತರ 4, ಬಿಜೆಪಿ 1 ಹಾಗೂ ಶಾಸಕ ಕದಲೂರು ಉದಯ್ ಅವರ ಮತ ಸೇರಿದಂತೆ
ಒಟ್ಟು 15 ಮತಗಳು ಬಿದ್ದವು.

ಜೆಡಿಎಸ್ ಅಭ್ಯರ್ಥಿ ಶೋಭರಾಣಿ ಪರ ಕೇವಲ 08 ಮತಗಳು ಚಲಾವಣೆಯಾಗಿ ಮಾಜಿ ಶಾಸಕ ಡಿ.ಸಿ.ತಮ್ಮಣ್ಣ ನೇತೃತ್ವದ ಜೆಡಿಎಸ್ ಮುಖಭಂಗ ಅನುಭವಿಸಿತು.

ಮತದಾನದ ವೇಳೆ ಓರ್ವ ಜೆಡಿಎಸ್ ಸದಸ್ಯ ಸುರೇಶ್ ಕುಮಾರ್ ಹಾಗೂ ಸಂಸದ ಎಚ್‌.ಡಿ.ಕುಮಾರಸ್ವಾಮಿ ಗೈರಾಗಿದ್ದರು.

ಕಾಂಗ್ರೆಸ್ ಗೆ ಬೆಂಬಲ ನೀಡಿದ ಕಾರಣದಿಂದ ಬಂಡಾಯ ಜೆಡಿಎಸ್ ಸದಸ್ಯ ಟಿ.ಆರ್.ಪ್ರಸನ್ನಕುಮಾರ್ 15 ಮತ ಪಡೆದು ಉಪಾಧ್ಯಕ್ಷರಾಗಿ ಆಯ್ಕೆಯಾದರು.ಜೆಡಿಎಸ್ ಅಭ್ಯರ್ಥಿ ಮನೋಜ್ ಕುಮಾರ್ 8 ಮತ ಗಳಿಸಿದರು.

ಕಾಂಗ್ರೆಸ್ ಸಂಭ್ರಮ

ಶಾಸಕ ಕದಲೂರು ಉದಯ್ ನಾಯಕತ್ವದಲ್ಲಿ ಆಪರೇಷನ್ ಮಾಡಿ ಕಳೆದ 20 ವರ್ಷಗಳ ಬಳಿಕ ಮದ್ದೂರು ಪುರಸಭೆ ಅಧಿಕಾರ ಹಿಡಿದ ಕಾಂಗ್ರೆಸ್ ಸದಸ್ಯರು ಹಾಗೂ ಮುಖಂಡರು ಸಂಭ್ರಮ ಮೇರೆ ಮೀರಿತ್ತು.ಕಾರ್ಯಕರ್ತರು ಪಟಾಕಿ ಸಿಡಿಸಿ ಸಂಭ್ರಮಾಚರಣೆ ಮಾಡಿದರು.

ಈ ಸಂದರ್ಭದಲ್ಲಿ ಕಾಂಗ್ರೆಸ್ ಮುಖಂಡರಾದ ಅರುಣ್ ಕುಮಾರ್,ಅಮರ್ ಬಾಬು ಸೇರಿದಂತೆ ನೂರಾರು ಕಾಂಗ್ರೆಸ್ ಕಾರ್ಯಕರ್ತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!