Friday, November 20, 2026

ಪ್ರಾಯೋಗಿಕ ಆವೃತ್ತಿ

ಮದ್ದೂರು | ಯಾವುದೇ ಅಡೆತಡೆ ಇಲ್ಲದೆ ದಿನವಿಡೀ ನಡೆದ ಮತದಾನ ಪ್ರಕ್ರಿಯೆ

ವರದಿ : ಪ್ರಭು ವಿ.ಎಸ್.

ಮದ್ದೂರು ವಿಧಾನಸಭಾ ಕ್ಷೇತ್ರ ವ್ಯಾಪ್ತಿ ದಿನವಿಡೀ ನಡೆದ ಮತದಾನ ಪ್ರಕ್ರಿಯೆ ಬಿರುಸಿನಿಂದ ಆರಂಭಗೊಂಡು ಮಧ್ಯಾಹ್ನ ಬಿಸಿಲೇರುತ್ತಿದ್ದಂತೆ ನಿಧಾನಗತಿಗೆ ಜಾರಿತಲ್ಲದೇ ತಾಲೂಕಿನಾದ್ಯಂತ ಯಾವುದೇ ಅಹಿತಕರ ಘಟನೆಗಳು ವರದಿಯಾಗಿಲ್ಲ.

254 ಭೂತ್‌ಗಳಲ್ಲಿ ತಾಂತ್ರಿಕ ದೋಷಗಳೂ ಸೇರಿದಂತೆ ಯಾವುದೇ ಅಡೆತಡೆಗಳು ಕಂಡಬಂದಿಲ್ಲ. ಮುಖ್ಯವಾಗಿ  ಗುಂಪು ಘರ್ಷಣೆ, ಮತಯಂತ್ರ ದೋಷ ಮತ್ತಿತರ ಗೊಂದಲಗಳು ದಿನವಿಡೀ ಕಾಣಸಿಗದಿರುವುದು ಇದೇ ಮೊದಲನೇ ಬಾರಿ.

ಶಾಸಕ ಡಿ.ಸಿ. ತಮ್ಮಣ್ಣ ಡಿಎಕೆರೆ ಗ್ರಾಮದಲ್ಲಿ, ಕಾಂಗ್ರೆಸ್ ಅಭ್ಯರ್ಥಿ ಕೆ.ಎಂ. ಉದಯ್ ಪತ್ನಿಯೊಟ್ಟಿಗೆ ಸ್ವಗ್ರಾಮ ಕದಲೂರು ಗ್ರಾಮದ ಮತಗಟ್ಟೆಯಲ್ಲಿ, ಬಿಜೆಪಿ ಅಭ್ಯರ್ಥಿ ಎಸ್.ಪಿ. ಸ್ವಾಮಿ, ಜಿ.ಪಂ. ಮಾಜಿ ಅಧ್ಯಕ್ಷೆ ನಾಗರತ್ನ ಸ್ವಾಮಿ ಜತೆಗೂಡಿ ಸಾದೊಳಲು ಗ್ರಾಮದ ಸರಕಾರಿ ಶಾಲೆಯ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ಮಾಜಿ ಶಾಸಕ ಬಿ. ರಾಮಕೃಷ್ಣ ಕೆ. ಹೊನ್ನಲಗೆರೆ ಮತಗಟ್ಟೆಯಲ್ಲಿ ಮತದಾನ ಮಾಡಿದರೆ, ಮಾಜಿ ಶಾಸಕಿ ಕಲ್ಪನಾಸಿದ್ದರಾಜು ಪಟ್ಟಣದ ಬಿಇಓ ಕಚೇರಿ ಮತಗಟ್ಟೆಯಲ್ಲಿ ತಮ್ಮ ಹಕ್ಕು ಚಲಾಯಿಸಿದರು.

ವಿಶೇಷಚೇತನ ಮತಗಟ್ಟೆ :
ಮದ್ದೂರು ಒಟ್ಟಣದ ಸರಕಾರಿ ಬಾಲಕರ ಪ್ರಾಥಮಿಕ ಶಾಲೆಯ ಭೂತ್.ನಂ.190ರ ವಿಶೇಷಚೇತನ ಅಧಿಕಾರಿಗಳೇ ಮತದಾನ ಪ್ರಕ್ರಿಯೆಯಲ್ಲಿ ದಿನವಿಡೀ ಕರ್ತವ್ಯ ನಿರ್ವಹಿಸುವ ಮೂಲಕ ಗಮನ ಸೆಳೆದರಲ್ಲದೇ ವಾಕ್ ಮತ್ತು ಶ್ರವಣ ದೋಷವುಳ್ಳ ವಿಶೇಷ ಚೇತನರಿಗೆ ಶಿಕ್ಷಕ ನಟರಾಜ್ ಸಹ್ನೆಯಲ್ಲಿ ಸಹಕರಿಸುವ ಮೂಲಕ ಮತದಾನಕ್ಕೆ ಒತ್ತು ನೀಡಿದರು.

ಇದೇ ಪ್ರಥಮಬಾರಿಗೆ 80 ವರ್ಷ ವಯೋಮಾನದ ನಂತರದ ಹಿರಿಯ ನಾಗರೀಕರಿಗೆ ಅವರಿದ್ದ ಸ್ಥಳದಲ್ಲೇ ಮತದಾನ ಪ್ರಕ್ರಿಯೆಗೆ ಅವಕಾಶ ಕಲ್ಪಿಸಿದ್ದ ಹಿನ್ನೆಲೆಯಲ್ಲಿ ಮತಗಟ್ಟೆಗಳಿಗೆ ಆಗಮಿಸುವ ವಯೋವೃದ್ಧರ ಸಂಖ್ಯೆ ಕ್ಷೀಣಿಸಿತ್ತು.

18 ವರ್ಷ ವಯೋಮಾನದ ಯುವ ಜನತೆ ಪ್ರಥಮಬಾರಿಗೆ ಹಕ್ಕು ಚಲಾಯಿಸಲೆಂದು ಉತ್ಸಾಹದಿಂದ ಮತಗಟ್ಟೆಗಳತ್ತ ಆಗಮಿಸುತ್ತಿದ್ದ ದೃಶ್ಯ ಪಟ್ಟಣ ಸೇರಿದಂತೆ ತಾಲೂಕಿನ ಎಲ್ಲೆಡೆ ಕಂಡುಬಂದಿತು.

ಮದ್ದೂರು ತಾಲೂಕಿನ ವಿವಿಧೆಡೆ ಗ್ರಾಮೀಣ ಭಾಗದ ಸಾರ್ವಜನಿಕರು ಸಂಚರಿಸಲು ವಾಹನಗಳಿಲ್ಲದೆ ಜನರು ಬಸ್‌ನಿಲ್ದಾಣಗಳಲ್ಲಿ ಬಿಸಿಲನ್ನು ಲೆಕ್ಕಿಸದೆ ಕಾದು ಬಸವಳಿದ ದೃಶ್ಯ ತಾಲೂಕಿನಾದ್ಯಂತ ಕಂಡುಬಂದಿತು.

ಚುನಾವಣೆ ಹಿನ್ನೆಲೆಯಲ್ಲಿ ಮೈಸೂರು, ಬೆಂಗಳೂರು ಹೆದ್ದಾರಿಯಲ್ಲಿ ದಿನನಿತ್ಯ ಕಂಡುಬರುತ್ತಿದ್ದ ವಾಹನ ದಟ್ಟಣೆ ಕಾಣಸಿಗದೆ ಹೆದ್ದಾರಿ ಪೂರ್ಣ ಬಿಕೋ ಎನ್ನುತ್ತಿದ್ದ ದೃಶ್ಯ ಬೆಳಗ್ಗಿನಿಂದಲೂ ಆರಂಭಗೊಂಡು ಸಂಜೆಯೂ ಮುಂದುವರೆದಿತ್ತು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ