Friday, September 20, 2024

ಪ್ರಾಯೋಗಿಕ ಆವೃತ್ತಿ

ಮದ್ದೂರು ಸರ್ಕಾರಿ ಆಸ್ಪತ್ರೆಯಲ್ಲಿ ಸರಣಿ ಮೊಬೈಲ್ ಕಳ್ಳತನ

ವರದಿ : ನ.ಲಿ.ಕೃಷ್ಣ, ಕೃಷಿಕರು.


  • ಅಸುರಕ್ಷತೆಯ ಭೀತಿ ಆತಂಕದಲ್ಲಿ ರೋಗಿಗಳು
  • ಹೆರಿಗೆ ವಿಭಾಗದಲ್ಲಿ ಸರಣಿಯಾಗಿ ಮೊಬೈಲ್ ಕಳ್ಳತನ
  • ಕಿಟಕಿಗೆ ಹಾಕಿದ ಮೆಸ್ ಕೂಯ್ದು ಕಳ್ಳರು

ಮದ್ದೂರು ಸರ್ಕಾರಿ ಆಸ್ಪತ್ರೆಯ ಹೆರಿಗೆ ವಿಭಾಗದಲ್ಲಿ ಸರಣಿಯಾಗಿ ಮೊಬೈಲ್ ಕಳ್ಳತನ ನಡೆದಿದೆ. ಶನಿವಾರ ರಾತ್ರಿ ಎರಡು ಮೊಬೈಲ್ ಗಳು ಹಾಗೂ ಶುಕ್ರವಾರ ರಾತ್ರಿ ಒಂದು ಮೊಬೈಲ್ ಕಳ್ಳತನವಾಗಿದೆ.

ನೇರವಾಗಿ ವಾರ್ಡ್ ಗೆ ಬಂದು ಒಮ್ಮೆ ಮತ್ತೊಮೆ ಕಿಟಕಿಗೆ ಹಾಕಿದ ಮೆಸ್ ಕೂಯ್ದು ಕಳ್ಳರು ಮೊಬೈಲ್ ಕದ್ದಿದ್ದಾರೆ.

ಮದ್ದೂರು ಪಟ್ಟಣವಾಸಿ ತೊರೆಚಾಕನಹಳ್ಳಿ ಸತೀಶ್ ತಮ್ಮ ಕಡೆಯವರು ಹೆರಿಗಾಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದು ಅವರ ಜೊತೆ ಆಸ್ಪತ್ರೆಗೆ ತೆರಳಿದಾಗ ಈ ವಿಷಯ ತಿಳಿದು ಬಂದಿದೆ.

ಮದ್ದೂರಿನ  ಮಾನಸ ಅವರು ಅವರ ತಮ್ಮನ ಹೆಂಡತಿಯನ್ನು ಹೆರಿಗೆಗೆ ಕರೆತಂದಿದ್ದು, ಈ ಸಂದರ್ಭದಲ್ಲಿ ಬಾಣಂತಿಯ ಪೊನ್ ಕೂಡ ಕಳುವಾಗಿರುತ್ತದೆ.

ಈ ಬಗ್ಗೆ ಅವರು ಮದ್ದೂರು ಆಸ್ಪತ್ರೆಯಲ್ಲಿ ರೋಗಿಗಳ ನೆರವಿಗಾಗಿ ಕಾರ್ಯನಿರ್ವಹಿಸುತಿರುವ ಸ್ವಯಂ ಸೇವಾತಂಡ “ಮದ್ದಿನಮನೆ ನೆರವಿಗರ ಕೂಟ” ಕ್ಕೆ ಈ ಕುರಿತು ವಿಷಯ ಮುಟ್ಟಿಸಿದ್ದಾರೆ.

ಮದ್ದಿನ ಮನೆ ನೆರವಿಗರಕೂಟದ ನಗರಕೆರೆ ಜಗದೀಶ್ ಅವರು ಈ ಸಂಬಂಧ ಸರ್ಕಲ್ ಇನ್ಸ್ಪೆಕ್ಟರ್ ಸಂತೋಷ್ ಅವರ ಗಮನಕ್ಕೆ ಈ ವಿಷಯ ತಂದಮೇರೆಗೆ, ಅವರು ಲಿಖಿತ ದೂರು ಸಲ್ಲಿಸಿದರೆ, ಮೊಬೈಲ್ ಪ್ರಕರಣ ಕುರಿತು ತನಿಖೆ ನಡೆಸಲು ಅನುಕೂಲವಾಗಲಿದೆ ಎಂದು ತಿಳಿಸಿದ್ದರ ಮೇರೆಗೆ ಮದ್ದಿನ‌ಮನೆ ನೆರವಿಗರ ಕೂಟದ ಮತ್ತೊರ್ವ ಸದಸ್ಯ ಮ.ನ ಪ್ರಸನ್ನಕುಮಾರ್ ಠಾಣೆಗೆ ಸತೀಶ್ ಅವರೊಟ್ಟಿಗೆ ತೆರಳಿ ಈ ಕುರಿತು ದೂರು ದಾಖಲಿಸಲು ಕ್ರಮ ವಹಿಸಿದ್ದಾರೆ.

ಈ ಬಗ್ಗೆ ನುಡಿಕರ್ನಾಟಕ.ಕಾಮ್ ಜೊತೆ ಮಾತನಾಡಿದ ಪುರಸಭೆ ಮಾಜಿ ಅಧ್ಯಕ್ಷ ಶೇಖರ್ ಅವರು ಮಂಡ್ಯ ಆಸ್ಪತ್ರೆ ಮಾದರಿಯಲ್ಲಿ ಮದ್ದೂರು ಆಸ್ಪತ್ರೆಯಲ್ಲಿಯು ಸೂಕ್ತ ಬಂದೊಬಸ್ತ್ ನೊಟ್ಟಿಗೆ ರಕ್ಷಣೆಗೆ ಕ್ರಮವಹಿಸಬೇಕಾಗಿದೆ ಎಂದು ತಾಲ್ಲೂಕು ಹಾಗೂ ಜಿಲ್ಲಾ ವೈಧ್ಯಾದಿಕಾರಿಗಳನ್ನು ಆಗ್ರಹಿಸಿದ್ದಾರೆ.

ಚನ್ನಸಂದ್ರ ಲಕ್ಷ್ಮಣ್ ಹಾಗೂ ಮೊಬೈಲ್ ಕಳೆದು ಕೊಂಡವರು ಸರ್ಕಾರಿ ಆಸ್ಪತ್ರೆಯಲ್ಲಿ ಭದ್ರತಾ ವ್ಯವಸ್ಥೆಯನ್ನು ಮಾಡಬೇಕೆಂದು ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!