Thursday, September 19, 2024

ಪ್ರಾಯೋಗಿಕ ಆವೃತ್ತಿ

ಅಕ್ಷರದವ್ವ ಸಾವಿತ್ರಿಬಾಯಿ ಪುಲೆ ತ್ಯಾಗ ದೊಡ್ಡದು : ಮಧು ಜಿ.ಮಾದೇಗೌಡ

ಮಹಿಳೆಯರಿಗೆ ಶಿಕ್ಷಣ ನಿಷೇಧವಿದ್ದ ಕಾಲದಲ್ಲೇ ಎಲ್ಲಾ ಮಹಿಳೆಯರಿಗೆ ವಿದ್ಯಾದಾನ ಮಾಡಲು ಮುಂದಾದ ಮಾತೆ ಸಾವಿತ್ರಿಬಾಯಿ ಪುಲೆ ತ್ಯಾಗ ದೊಡ್ಡದು, ಆದರ್ಶ ಮಹಿಳೆಯಾಗಿ ದೇಶದ ಜನರ ಮನಸ್ಥಿನಲ್ಲಿ ಅವರು ಚಿರಸ್ಥಾಯಿ ಆಗಿದ್ದಾರೆಂದು ವಿಧಾನ ಪರಿಷತ್ ಸದಸ್ಯ ಮಧು ಜಿ.ಮಾದೇಗೌಡ ಹೇಳಿದರು.

ಮಂಡ್ಯ ಶಂಕರನಗರದಲ್ಲಿರುವ ಸತ್ಯದರ್ಶಿನಿ ಸಭಾಂಗಣದಲ್ಲಿ ಶಾಲಾ ಶಿಕ್ಷಣ ಮತ್ತು ಸಾಕ್ಷರತೆ ಇಲಾಖೆಯ ಮಂಡ್ಯ ದಕ್ಷಿಣ ವಲಯ ಹಾಗೂ ಉತ್ತರ ವಲಯ ಶಾಲಾ ಶಿಕ್ಷಕಿಯರು-ಶಿಕ್ಷಕರು ಆಯೋಜಿಸಿದ್ದ ಮೊಲದ ಅಕ್ಷರದವ್ವ ಮಾತೆ ಸಾವಿತ್ರಿಬಾಯಿ ಪುಲೆ ಜಯಂತಿ ಮತ್ತು ಅಭಿನಂದನಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತ ದೇಶದಲ್ಲಿ ಹೆಣ್ಣು ಮಕ್ಕಳು ಮತ್ತು ಮಹಿಳೆಯರಿಗೆ ಶಿಕ್ಷಣ ನೀಡಲು ಹೋರಾಟ ಮಾಡಿ, ಅಕ್ಷರ ಕಲಿಸಲು ಸಾಕಷ್ಟು ಕಷ್ಟ ಅನುಭವಿಸಿ, ಸಾಧನೆ ಮಾಡಿಯೇ ತೀರುತ್ತಾರೆ, ಆದರ್ಶ ಶಿಕ್ಷಕಿಯಾಗಿ ಬೆಳಕಾಗಿದ್ದಾರೆ. ಸ್ವತಂತ್ರ ಬಂದ ನಂತರವೂ ಹೆಣ್ಣುಮಕ್ಕಳಿಗೆ ಶಿಕ್ಷಣ ಲಭಿಸಲು ಸಾಧ್ಯವಾಗುತ್ತಿರಲಿಲ್ಲ, ಆದರೆ ಬ್ರಿಟಿಷರ ಆಡಳಿತಾವಧಿಯಲ್ಲಿಯೇ ಹೆಣ್ಣುಮಕ್ಕಳಿಗೆ ಶಿಕ್ಷಣ ಕೊಡಿಸಲು ಅಪಾರ ಶ್ರಮಪಟ್ಟು, ಹೋರಾಟ ನಡೆಸಿ, ತ್ಯಾಗಮಯಿಯಾದ ಮಾತೆ ಸಾವಿತ್ರಿಬಾಯಿ ಪುಲೆ ಪೂಜ್ಯನೀಯರು ಎಂದು ನುಡಿದರು.

ಇಂದಿನ ದಿನಗಳಲ್ಲಿ ಶಿಕ್ಷಕರ ಸಮಸ್ಯೆಗಳು ಸಾಕಷ್ಟಿವೆ ಎನ್ನುವುದು ನನಗೆ ತಿಳಿದಿದೆ, ಹಂತ ಹಂತವಾಗಿ ವಿಧಾನಪರಿಷತ್ತಿನಲ್ಲಿ ಚರ್ಚಿಸಿ, ಸರ್ಕಾರದ ಗಮನ ಸೆಳೆದು ಪ್ರಾಮಾಣಿಕ ಪ್ರಯತ್ನಪಡುತ್ತೇನೆ, ನನ್ನ ಗೆಲುವಿಗೆ ಶಿಕ್ಷಕ ಸಮೂಹ ಶ್ರಮಿಸಿದೆ, ಪ್ರತಿಫಲವಾಗಿ ನಿಮ್ಮ ಪರ ನಿಲ್ಲುತ್ತೇವೆ ಎಂದರು.

ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಜಿಲ್ಲಾ ಅಧ್ಯಕ್ಷೆ ಮೀರಾಶಿವಲಿಂಗಯ್ಯ ಮಾತನಾಡಿ, ಮಹಿಳಾ ಶಿಕ್ಷಣ ದೂರದ ಕನಸಾಗಿದ್ದ ಕಾಲದಲ್ಲಿ ಬಾಲ್ಯವಿವಾಹ ಉತ್ತುಂಗದಲ್ಲಿದ್ದ ದಿನಗಳಲ್ಲಿ ಬಾಲಕಿಯರಿಗಾಗಿ ಶಾಲೆ ತೆರೆದು , ಸಮಾನತೆಯ ಹೆಜ್ಜೆಯಿಡಲು ಪ್ರೇರಕಶಕ್ತಿಯಾಗಿದ್ದು ಮಾತೆ ಸಾವಿತ್ರಿಬಾಯಿ ಪುಲೆ ಅವರು ಎಂದು ಸ್ಮರಿಸಿದರು.

ಶೋಷಿತರ ವಿಮೋಚನೆಯ ದಾರಿಗಳನ್ನು ಹುಡುಕುತ್ತ, ಶಿಕ್ಷಣ ಸಂಘಟನೆ, ಹೋರಾಟಗಳನ್ನು ಪ್ರತಿಪಾದಿಸಿದರು. ಪ್ರಾಥಮಿಕ ಶಿಕ್ಷಣ ಎಷ್ಟು ಮುಖ್ಯ ಎನ್ನುವುದು ವಿದ್ಯಾವಂತ ಸಮುದಾಯಕ್ಕೆ ಗೊತ್ತಿದೆ, ಮೂಲ ಶಿಕ್ಷಣ ಲಭಿಸುವುದೇ ಪ್ರಾಥಮಿಕ ಶಾಲೆಗಳಿಂದ, ಇಂತಹ ಕ್ಷೇತ್ರದಲ್ಲಿ ಸೇವೆ ಸಲ್ಲಿಸುತ್ತಿರುವ ಪ್ರಾಥಮಿಕ ಶಾಲಾ ಶಿಕ್ಷಕರು ವಿದ್ಯಾರ್ಥಿಗಳಿಗೆ ಬೆಳಕಾಗಿರುತ್ತಾರೆ, ಮಾರ್ಗದರ್ಶಕರಾಗಿರುತ್ತಾರೆ ಎಂದು ಹೇಳಿದರು.

ಇದೇ ಸಂದರ್ಭದಲ್ಲಿ ಚಿಕ್ಕಮಂಡ್ಯ ಶಾಲೆಯ ಶಿಕ್ಷಕಿ ಸರ್ವಮಂಗಳ ಅವರು ಕುರುಕ್ಷೇತ್ರ ಪೌರಾಣಿಕ ನಾಟಕದ ಶಕುನಿ ಪಾತ್ರದ ವೇಷಭೂಷಣದಲ್ಲಿ ಅಭಿನಯ ಪ್ರದರ್ಶಿಸಿ ಮೆಚ್ಚುಗೆಗೆ ಪಾತ್ರರಾದರು. ವಿವಿಧ ಶಾಲಾ ಶಿಕ್ಷಕಿಯರು -ಶಿಕ್ಷಕರನ್ನು ಅಭಿನಂಧಿಸಲಾಯಿತು.

ಕಾರ್ಯಕ್ರಮದಲ್ಲಿ ರಾಜ್ಯ ಸರ್ಕಾರಿ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ರಾಜ್ಯ ಉಪಾಧ್ಯಕ್ಷ ನಾಗೇಶ್, ಶಿಕ್ಷಣ ಇಲಾಖೆ ಜಿಲ್ಲಾ ಯೋಜನಾಧಿಕಾರಿ ರೇಣುಕಮ್ಮ, ಸಾವಿತ್ರಿಬಾಯಿ ಪುಲೆ ಶಿಕ್ಷಕಿಯರ ಸಂಘದ ಅಧ್ಯಕ್ಷೆ ಸರಸ್ವತಿ, ತಾಲೂಕು ಶಿಕ್ಷಕರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ನಾಗರಾಜು, ಶಿಕ್ಷಕರ ಸಂಘದ ತಾಲೂಕು ಅಧ್ಯಕ್ಷ ಕೆ.ಸಿ.ರವಿಶಂಕರ್, ಪ್ರಧಾನ ಕಾರ್ಯದರ್ಶಿ ಚಿಕ್ಕೇಗೌಡ, ಶಿಕ್ಷಕಿಯರಾದ ಐಲಿನ್‌ ಸೌಮ್ಯಲತಾ, ಆಶಾರಾಣಿ, ನಾಗಲಕ್ಷ್ಮಿ, ಮಂಜುಳಾ, ಲಕ್ಷ್ಮಿ, ವಿನೋದಾ, ಸುಕನ್ಯ, ಗಿರಿಜಮ್ಮ, ಫಾತಮಾರಾಣಿ, ಚಿದಾನಂದ, ರಮೇಶ್, ಕುಮಾರ್, ಮಹೇಂದ್ರ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!