Thursday, September 19, 2024

ಪ್ರಾಯೋಗಿಕ ಆವೃತ್ತಿ

ವಚನ – ವಚನಕಾರರನ್ನು ರಕ್ಷಿಸಿದ ಮಡಿವಾಳ ಮಾಚಿದೇವ : ಹೆಚ್.ಎಸ್ ಕೀರ್ತನ

12 ಶತಮಾನದ ಬಿಜ್ಜಳನ ಆಸ್ಥಾನದಲ್ಲಿ ಆದ ಬದಲಾವಣೆಯಿಂದ ವಚನ ಮತ್ತು ವಚನಕಾರರಿಗೆ ಅಪಾಯವಿದ್ದ ಕಾಲದಲ್ಲಿ ವಚನ ಮತ್ತು ವಚನಕಾರರನ್ನು ರಕ್ಷಿಸಿದ ಕೀರ್ತಿ ಮಡಿವಾಳ ಮಾಚಿ ದೇವರಿಗೆ ಸಲ್ಲುತ್ತದೆ ಎಂದು ಮಂಡ್ಯ ಉಪವಿಭಾಗಾಧಿಕಾರಿ ಹೆಚ್.ಎಸ್ ಕೀರ್ತನ ತಿಳಿಸಿದರು.

ಮಂಡ್ಯ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ನಗರಸಭೆಯ ಸಹಯೋಗದೊಂದಿಗೆ ಮಡಿವಾಳ ಮಾಚಿದೇವ ಜಯಂತಿಯನ್ನು ಕಲಾಮಂದಿರದಲ್ಲಿಂದು ಜ್ಯೋತಿ ಬೆಳಗುವುದರ ಮೂಲಕ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಜಾತಿ, ಲಿಂಗ, ಸಮಾನತೆ ವಂಚಿತದ ಕಾಲಘಟ್ಟದಲ್ಲಿ ಕಾಯಕವೇ ಭಕ್ತಿ, ಕಾಯಕವೇ ಜೀವನ ಎಂದು ಶ್ರದ್ಧೆ ಇಟ್ಟು ಸಮಾಜದ ಕಂಟಕದ ವಿರುದ್ದ ವಿರೋಧ ವ್ಯಕ್ತಪಡಿಸಿದವರು ಮಡಿವಾಳ ಮಾಚಿದೇವರು. ಮಡಿ ಎಂದರೆ ಶುದ್ಧ, ಶುದ್ಧ ಮಾಡುವುದೆ ಮಾಡಿವಾಳನ ಕುಲ ಕಸುಬು, ಬಟ್ಟೆಯನ್ನಷ್ಟೆ ಅಲ್ಲದೇ ಮನಸ್ಸು, ದಾರಿ, ಜೀವನ ಶೈಲಿ, ವಿವೇಚನೆಗಳನ್ನು ಶುದ್ಧ ಮಾಡಿಕೊಳ್ಳಬೇಕು ಎಂದು ಹೇಳಿದರು.

ಕಾಯಕವೇ ಜೀವನ, ಅಭಿವೃದ್ಧಿಯೇ ನಮ್ಮ ವೃತ್ತಿ ಎಂದು ಶ್ರದ್ಧೆ, ಪ್ರೀತಿಯಿಂದ ಯಾವುದೇ ಕೆಲಸ ಮಾಡಿದರೇ ಯಶಸ್ಸು ನಿಶ್ಚಿತ ಎಂದರು. ಇದೇ ಸಂದರ್ಭದಲ್ಲಿ ಮಡಿವಾಳ ಸಮುದಾಯದ ಮುಖಂಡರಿಗೆ ಸನ್ಮಾನ ಮಾಡಲಾಯಿತು.

ಕಾರ್ಯಕ್ರಮದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕ ಎನ್ ಉದಯ್ ಕುಮಾರ್, ನಗರಸಭೆ ಸದಸ್ಯ ನಾಗೇಶ್, ಮಂಜುಳ, ಕೆ.ಎಸ್.ಓ.ಯು ನಿರ್ದೇಶಕಿ ಮಿಲನ ಆರ್ ಹಾಜರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!