Thursday, September 19, 2024

ಪ್ರಾಯೋಗಿಕ ಆವೃತ್ತಿ

ನನ್ನ ಶೂಗಳನ್ನು ಎಣಿಸಲು ಸಿಬಿಐಗೆ ಸ್ವಾಗತ ಎಂದ ಮಹುವಾ ಮೊಯಿತ್ರಾ !

ಸಂಸತ್ತಿನಲ್ಲಿ ಪ್ರಶ್ನೆಗಳನ್ನು ಕೇಳಲು ಲಂಚ ಪಡೆದ ಆರೋಪಕ್ಕೆ ಸಂಬಂಧಿಸಿದಂತೆ ಟಿಎಂಸಿ ರಾಜ್ಯಸಭೆ ಸದಸ್ಯೆ ಮಹುವಾ ಮೊಯಿತ್ರಾ ವಿರುದ್ಧ ಸಿಬಿಐ ತನಿಖೆಗೆ ಆದೇಶಿಸಿರುವ ಬಗ್ಗೆ ಮಹುವಾ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಭ್ರಷ್ಟಾಚಾರ ನಿಗ್ರಹ ಸಂಸ್ಥೆ ಲೋಕಪಾಲ್ ಮಹುವಾ ಮೊಯಿತ್ರಾ ಪ್ರಕರಣವನ್ನು ಸಿಬಿಐ ತನಿಖೆಗೆ ಆದೇಶಿಸಿದೆ ಎಂದು ಬಿಜೆಪಿ ಸಂಸದ ನಿಶಿಕಾಂತ್ ದುಬೆ ಬುಧವಾರ(ನ.08) ಹೇಳಿದ್ದಾರೆ.

‘ನನ್ನ ದೂರಿನ ಆಧಾರದ ಮೇಲೆ, ರಾಷ್ಟ್ರೀಯ ಭದ್ರತೆಗೆ ಸಂಬಂಧಿಸಿದಂತೆ ಆರೋಪಿ ಸಂಸದೆ ಮಹುವಾ ಮೊಯಿತ್ರಾ ಅವರ ಭ್ರಷ್ಟಾಚಾರದ ಬಗ್ಗೆ ಇಂದು ಲೋಕಪಾಲ್ ಸಿಬಿಐ ತನಿಖೆಗೆ ಆದೇಶಿಸಿದೆ’ ಎಂದು ನಿಶಿಕಾಂತ್ ದುಬೆ ಟ್ವಿಟರ್‌ನಲ್ಲಿ ಪೋಸ್ಟ್ ಮಾಡಿದ್ದಾರೆ.

“>

ಈ ಬಗ್ಗೆ ಟ್ವಿಟರ್‌ನಲ್ಲಿ ಪೋಸ್ಟ್‌ ಮಾಡಿರುವ ಮಹುವಾ ಮೊಯಿತ್ರಾ, “ನನಗೆ ಕರೆ ಮಾಡುವ ಮಾಧ್ಯಮಗಳಿಗೆ ನನ್ನ ಉತ್ತರ 13,000 ಕೋಟಿ ರೂ. ಅದಾನಿ ಕಲ್ಲಿದ್ದಲು ಹಗರಣದ ಕುರಿತು ಸಿಬಿಐ ಮೊದಲು ಎಫ್‌ಐಆರ್ ದಾಖಲಿಸಬೇಕಾಗಿದೆ. ಕೇಂದ್ರ ಗೃಹ ಇಲಾಖೆಯ ಕ್ಲಿಯರೆನ್ಸ್‌ನೊಂದಿಗೆ ಭಾರತೀಯ ಬಂದರುಗಳು ಮತ್ತು ವಿಮಾನ ನಿಲ್ದಾಣಗಳನ್ನು ಖರೀದಿಸುವ ಅದಾನಿ ಸಂಸ್ಥೆಗಳು ಎಫ್‌ಪಿಐ ಮಾಲೀಕತ್ವವನ್ನು ಹೇಗೆ ಹೊಂದಿದ್ದವು ಎಂಬುದು ರಾಷ್ಟ್ರೀಯ ಭದ್ರತಾ ಸಮಸ್ಯೆಯಾಗಿದೆ. ನನ್ನ ಶೂಗಳನ್ನು ಎಣಿಸಲು ಸಿಬಿಐಗೆ ಸ್ವಾಗತ” ಎಂದು ಛೇಡಿಸಿದ್ದಾರೆ.

ಸಂಸತ್ತಿನಲ್ಲಿ ಕೈಗಾರಿಕೋದ್ಯಮಿ ಗೌತಮ್ ಅದಾನಿ ವಿರುದ್ಧ ಪ್ರಶ್ನೆಗಳನ್ನು ಕೇಳುವುದಕ್ಕೆ ಬದಲಾಗಿ ಉದ್ಯಮಿ ದರ್ಶನ್ ಹಿರಾನಂದನಿ ಅವರಿಂದ ಹಣಕಾಸಿನ ಅನುಕೂಲಗಳು ಮತ್ತು ಉಡುಗೊರೆಗಳ ರೂಪದಲ್ಲಿ ಮೊಯಿತ್ರಾ ಲಂಚ ಪಡೆದಿದ್ದಾರೆ ಎಂದು ಬಿಜೆಪಿ ಸಂಸ ದುಬೆ ಆರೋಪಿಸಿದ್ದರು.

ಪ್ರಶ್ನೆಗಳನ್ನು ಅಪ್​ಲೋಡ್ ಮಾಡಲು ಮೊಯಿತ್ರಾ ಅವರ ಲೋಕಸಭೆ ಖಾತೆಗೆ ದುಬೈನಿಂದ ಲಾಗ್ ಇನ್ ಆಗಿರುವುದಾಗಿ ಹಿರಾನಂದನಿ ಅಫಿಡವಿಟ್‌ನಲ್ಲಿ ಹೇಳಿಕೊಂಡಿದ್ದಾರೆ. ಆದರೆ, ಲಂಚದ ಆರೋಪವನ್ನು ಟಿಎಂಸಿ ಸಂಸದೆ ನಿರಾಕರಿಸಿದ್ದರು. ಆದರೆ ಸಂಸತ್ತಿನ ಲಾಗಿನ್ ಮತ್ತು ಪಾಸ್‌ವರ್ಡ್ ವಿವರಗಳನ್ನು ಸ್ನೇಹಿತ ಮತ್ತು ಉದ್ಯಮಿ ದರ್ಶನ್ ಹಿರಾನಂದನಿಗೆ ನೀಡಿದ್ದಾಗಿ ನಂತರ ಒಪ್ಪಿಕೊಂಡಿದ್ದರು.

ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಲವು ದಿನಗಳ ಹಿಂದಷ್ಟೇ ಲೋಕಸಭೆಯ ನೈತಿಕ ಸಮಿತಿಯ ಮುಂದೆ ಮೊಯಿತ್ರಾ ವಿಚಾರಣೆಗೆ ಹಾಜರಾಗಿದ್ದರು. ಉದ್ಯಮಿ ದರ್ಶನ್ ಹಿರಾನಂದನಿ ಅವರೊಂದಿಗೆ ಸಂಸತ್ತಿನ ಲಾಗಿನ್ ವಿವರಗಳನ್ನು ಹಂಚಿಕೊಳ್ಳುವಾಗ ತಾನು ಯಾವುದೇ ಸಂಸದೀಯ ನಿಯಮಗಳನ್ನು ಉಲ್ಲಂಘಿಸಿಲ್ಲ ಎಂದು ಸಮಿತಿಗೆ ಮೊಯಿತ್ರಾ ತಿಳಿಸಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!