Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಳವಳ್ಳಿ : ಕ್ಷಯ ರೋಗಿಗಳಿಗೆ ಆಹಾರ ಕಿಟ್ ವಿತರಣೆ

ಪ್ರಧಾನ ಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನದಡಿ ನಿಕ್ಷಯ ಮಿತ್ರನಾಗಿ ನಗು ಫೌಂಡೇಷನ್ ಟ್ರಸ್ಟ್ ಮಳವಳ್ಳಿ ವತಿಯಿಂದ ಮಳವಳ್ಳಿ ತಾಲ್ಲೂಕಿನಲ್ಲಿ ಕ್ಷಯ ರೋಗದಿಂದ ಬಳಲುತ್ತಿರುವ ರೋಗಿಗಳಿಗೆ ಒಂದು ತಿಂಗಳಿ ಗಾಗುವಷ್ಟು ಆಹಾರ ಕಿಟ್‌ಗಳನ್ನು ವಿತರಣೆ ಮಾಡಲಾಯಿತು.

ನಗು ಪೌಂಡೇಷನ್ ಟ್ರಸ್ಟ್ ಅಧ್ಯಕ್ಷ ಡಾ.ಅರುಣ್‌ಕುಮಾರ್ ಮಾತನಾಡಿ, ಕ್ಷಯ ರೋಗಿಗಳಿಗೆ ಸೂಕ್ತ ಅವಧಿಯಲ್ಲಿ ಔಷಧಿ ಮತ್ತು ಪೌಷ್ಟಿಕಾಂಶದ ಆಹಾರವನ್ನು ನೀಡಿದರೇ ರೋಗವನ್ನು ಸಂಪೂರ್ಣವಾಗಿ ಗುಣಪಡಿಸಬಹುದು ಎಂದರು.

ಗ್ರಾಮೀಣ ಪ್ರದೇಶದಲ್ಲಿರುವ ಕ್ಷಯ ರೋಗಿಗಳನ್ನು ಗುರುತಿಸಿ ಔಷಧಿ ಜೊತೆಗೆ ಪೌಷ್ಠಿಕಾಂಶವಿರುವ ಆಹಾರದ ಕಿಟ್‌ಗಳನ್ನು ನಿರಂತರವಾಗಿ ನೀಡಲಾಗುತ್ತಿದೆ, ನಗು ಫೌಂಡೇಷನ್ ವತಿಯಿಂದ ಹಲವು ಜನಪರ ಕಾರ್ಯಕ್ರಮಗಳನ್ನು ಆಯೋಜನೆ ಮಾಡಿಕೊಂಡು ಬರಲಾಗುತ್ತಿದ್ದು, ಮುಂದಿನ ದಿನಗಳಲ್ಲಿ ಹೆಚ್ಚಿನ ಸೇವೆ ಮಾಡಲಾಗುವುದು ಎಂದರು.

ಪ್ರಧಾನಮಂತ್ರಿ ಟಿಬಿ ಮುಕ್ತ ಭಾರತ ಅಭಿಯಾನದಡಿ ನಿಕ್ಷಯ ಮಿತ್ರನಾಗಿ ಮಳವಳ್ಳಿ ಕ್ಷಯ ರೋಗಿಗಳಿಗೆ ಆಹಾರ ಕಿಟ್ಸ್ ವಿತರಿಸುತ್ತಿರುವ ನಗು ಫೌಂಡೇಷನ್ ಟ್ರಸ್ಟ್ ಗೆ ಕೃತಜ್ಞತೆಯನ್ನು ಮಂಡ್ಯ ಜಿಲ್ಲಾ ಕ್ಷಯ ರೋಗ ವಿಭಾಗದ ಆಡಳಿತ ಮಂಡಳಿ ಸಲ್ಲಿಸಿದೆ.

ಇದೇ ಸಂದರ್ಭದಲ್ಲಿ ಮೂಳೆ ಮತ್ತು ಕೀಳು ತಜ್ಞ ಡಾ.ಸುನೀಲ್, ಜಿಲ್ಲಾ ಕಾರ್ಯಕ್ರಮ ಸಂಯೋಜಕ ಹರ್ಷ, ಪ್ರಯೋಗ ಶಾಲಾ ತಾಂತ್ರಿಕ ಅಧಿಕಾರಿ ದಿವ್ಯ ಸೇರಿದಂತೆ ಇತರರು ಇದ್ದರು

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!