Friday, September 20, 2024

ಪ್ರಾಯೋಗಿಕ ಆವೃತ್ತಿ

ನಾಟಕಗಳಿಂದ ಸಾಂಸ್ಕೃತಿಕ ಶ್ರೀಮಂತಿಕೆ ತಿಳಿಯಲು ಸಾಧ್ಯ

ಪೌರಾಣಿಕ ನಾಟಕಗಳ ಪ್ರದರ್ಶನಗಳಿಂದ ಯುವಕರಿಗೆ ದೇಶದ ಸಾಂಸ್ಕೃತಿಕ ಶ್ರೀಮಂತಿಕೆ ತಿಳಿಸಿಕೊಡಲು ಸಹಕಾರಿಯಾಗುತ್ತದೆ ಎಂದು ಸಮಾಜ ಸೇವಕ ಆರ್ ಟಿ ಓ ಮಲ್ಲಿಕಾರ್ಜುನ್ ಅಭಿಪ್ರಾಯಪಟ್ಟರು.

ಕೆ ಆರ್ ಪೇಟೆ ತಾಲೂಕಿನ ಶೀಳನೆರೆ ಹೋಬಳಿಯ ವಸಂತಪುರ ಗ್ರಾಮದ ಡಾ.ಬಿ.ಆರ್ ಅಂಬೇಡ್ಕರ್ ಕೃಪಪೋಷಿತ ನಾಟಕ ಮಂಡಳಿ ವತಿಯಿಂದ ನಡೆದ ಕುರುಕ್ಷೇತ್ರ ಅಥವಾ ಧರ್ಮರಾಜ್ಯ ಸ್ಥಾಪನೆ ಪೌರಾಣಿಕ ನಾಟಕ ಪ್ರದರ್ಶನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಯುವಕರು ತಾಂತ್ರಿಕತೆ ಮೈಗೂಡಿಸಿಕೊಂಡಂತೆಲ್ಲ, ನಾಡಿನ ಸಂಸ್ಕೃತಿ ಮತ್ತು ನಡೆ-ನುಡಿಯನ್ನು ಮರೆಯುತ್ತಿರುವ ಪ್ರಸ್ತುತ ದಿನಗಳಲ್ಲಿ ಗ್ರಾಮದ ಯುವಕರು ಪೌರಾಣಿಕ ನಾಟಕ ಅಭಿನಯಿಸುತ್ತಿರುವುದು ಹೆಮ್ಮೆಯ ವಿಚಾರ. ವಸಂತಪುರ ಮತ್ತು ಸುತ್ತಮುತ್ತಲಿನ ಗ್ರಾಮಸ್ಥರು ತಡರಾತ್ರಿಯಲ್ಲಿಯೂ ಕುರುಕ್ಷೇತ್ರ ಅಥವಾ ಧರ್ಮ ರಾಜ್ಯ ಸ್ಥಾಪನೆ ನಾಟಕ ವೀಕ್ಷಣೆಗೆ ಮುಂದಾಗುವ ಮೂಲಕ ತಮ್ಮ ಗ್ರಾಮದ ಕಲಾವಿದರಿಗೆ ಪ್ರೋತ್ಸಾಹ ಮಾಡುತ್ತಿರುವುದು ಶ್ಲಾಘನೀಯ ಎಂದರು.

ಈ ಸಂದರ್ಭದಲ್ಲಿ ರಾಜು, ಸಂಜಯ್, ವಿನೋದ್ ಕುಮಾರ್, ಕರಿಯಯ್ಯ, ಕುಮಾರ್, ಸತೀಶ್, ವಿಜಯಕುಮಾರ್, ಶಿವರಾಜು, ಯೋಗೇಶ್, ವಿನೋದ್ ರಾಜು, ಮಂಜುನಾಥ್, ಶಿವರಾಜು, ಜಯರಾಮ್, ರಮೇಶ್, ದುಬಾಯಿ ಹರೀಶ್, ಶಿವ, ಪ್ರಭಾಕರ್, ಮಂಜು, ನಾಗರಾಜು ಸೇರಿದಂತೆ ವಸಂತಪುರ ಗ್ರಾಮಸ್ಥರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!