Thursday, September 19, 2024

ಪ್ರಾಯೋಗಿಕ ಆವೃತ್ತಿ

NEET ಪರೀಕ್ಷೆಯಲ್ಲಿ ಅವ್ಯವಹಾರ : ಪೋಷಕರ ಆಕ್ರೋಶ

ದೇಶದಲ್ಲಿ ನಡೆದ ನೀಟ್ ಪರೀಕ್ಷೆಗಳಲ್ಲಿ ಭಾರೀ ಅವ್ಯವಹಾರವಾಗಿದೆ ಎಂದು ವಿದ್ಯಾರ್ಥಿಗಳು ಹಾಗೂ ಪೋಷಕರು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಈ ಬಾರಿಯ ನೀಟ್ ಪರೀಕ್ಷೆಗಳಲ್ಲಿ 67 ಜನ ವಿದ್ಯಾರ್ಥಿಗಳಿಗೆ ಮೊದಲನೇ ರ್‍ಯಾಂಕ್ ನೀಡಲಾಗಿದೆ ಇದು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ್ದಾರೆ. ಕಳೆದ ವರ್ಷದ ಪರೀಕ್ಷೆಯಲ್ಲಿ ಕೇವಲ ಇಬ್ಬರಿಗೆ, ಅದಕ್ಕಿಂತ ಕಳೆದ ವರ್ಷದ ಪರೀಕ್ಷೆಯಲ್ಲಿ ನಾಲ್ಕು ಜನ ಮಾತ್ರ ಟಾಫರ್ ಆಗಿದ್ದರು. ಈ ಬಾರಿ ಇಷ್ಟೊಂದು ವಿದ್ಯಾರ್ಥಿಗಳು ಟಾಪರ್ ಗಳು ಹೇಗೆ ಸಾಧ್ಯ ಎಂದು ಪ್ರಶ್ನಿಸುತ್ತಿದ್ದಾರೆ.

ಅದೇ ರೀತಿ ಇಬ್ಬರೂ ವಿದ್ಯಾರ್ಥಿಗಳಿಗೆ 720 ಅಂಕಗಳಿಗೆ 719 ಅಂಕ ನೀಡಿದ್ದು, ಇದು ಹೇಗೆ ಸಾಧ್ಯ ಒಂದು ಪ್ರಶ್ನೆಗೆ ತಪ್ಪು ಉತ್ತರ ಕೊಟ್ಟರೂ ನೆಗೆಟಿವ್ ಮಾರ್ಕ್ ಬರುವಾಗ ಇದೆಲ್ಲ ಸಾಧ್ಯವೇ ಇಲ್ಲ ಎಂದು ನೀಟ್ ಬರೆದ ಸ್ಟೂಡೆಂಟ್ ಗಳು ಹೇಳುತ್ತಿದ್ದಾರೆ.

ಇದಕ್ಕೆ ನೀಟ್ ಪ್ರಾಧಿಕಾರವೂ ನಾವು ಪರೀಕ್ಷೆ ಬರೆಯಲು ಟೈಮ್ ಸಾಕಾಗದ ವಿದ್ಯಾರ್ಥಿಗಳಿಗೆ ಗ್ರೇಸ್ ಅಂಕಗಳನ್ನು ನೀಡಿರುವುದಾಗಿ ತಿಳಿಸಿದ್ದು, ಆದರೆ ಗ್ರೇಸ್ ಮಾರ್ಕ್ ಕೊಡಲು ಇರುವ ಮಾನದಂಡಗಳನ್ನು ಪಾಲಿಸಲಾಗಿದೆ ಎಂಬುದನ್ನು ಬಹಿರಂಗಪಡಿಸಿಲ್ಲ

ಜೂನ್ 14 ರಂದು ಪ್ರಕಟವಾಗಬೇಕಿದ್ದ ಫಲಿತಾಂಶವನ್ನು ಮುಂಚಿತವಾಗಿಯೇ ಅಂದರೆ ಜೂನ್ 4 ರಂದೇ ಪ್ರಕಟ ಮಾಡಿರುವುದು ಅನುಮಾನಕ್ಕೆಡೆ ಮಾಡಿಕೊಟ್ಟಿದೆ. ಅಂದೇ ದೇಶದಾದ್ಯಂತ ಲೋಕಸಭಾ ಚುನಾವಣೆಯ ಫಲಿತಾಂಶಗಳ ಪ್ರಕಟವಾಗಿತ್ತು. ಅಂದಿನ ದಿನವೇ ನೀಟ್ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಿ ಒಟ್ಟಾರೆ ಪರೀಕ್ಷೆಯ ಅವ್ಯವಹಾರವನ್ನು ಮುಚ್ಚಿ ಹಾಕುವ ಪ್ರಯತ್ನ ನಡೆದಿದೆ ಎಂದು ವಿದ್ಯಾರ್ಥಿಗಳ ಪೋಷಕರು ಗಂಭೀರ ಆರೋಪ ಮಾಡಿದ್ದಾರೆ.

ಪೇಪರ್ ಸೋರಿಕೆ, ಅನ್ಯಾಯದ ಗ್ರೇಸ್ ಅಂಕಗಳು ಮತ್ತು ಅಕ್ರಮಗಳ ಆರೋಪ

ಸಾಮಾಜಿಕ ಮಾಧ್ಯಮ ವೇದಿಕೆ Twitter NEET ಹಗರಣ 2024 ಸುದ್ದಿಗಳಿಂದ ತುಂಬಿದೆ. NEET 2024 ಪರೀಕ್ಷೆಯ ಬಗ್ಗೆ ತನಿಖೆ ನಡೆಸಬೇಕೆಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ. “#NEET”, “#NEETfraud”, “#NEET_paper_leak”, “#neetscam2024”, “#NEET_reconduct”, ಮತ್ತು ಇನ್ನೂ ಅನೇಕ ಹ್ಯಾಶ್‌ಟ್ಯಾಗ್‌ಗಳು Twitter ನಲ್ಲಿ ಟ್ರೆಂಡಿಂಗ್ ಆಗಿವೆ.

ಜನರು ಸಹ “ರೀ ನೀಟ್ 2024 ಇರುತ್ತದೆಯೇ” ಎಂದು ಕೇಳುತ್ತಿದ್ದಾರೆ. ಫಲಿತಾಂಶ ಘೋಷಣೆಯ ಅಕ್ರಮಗಳು ಮತ್ತು ಅಸಹಜ ಸಮಯವನ್ನು ಉಲ್ಲೇಖಿಸಿ ಅನೇಕ ಜನರು ಎನ್‌ಟಿಎ ವಿರುದ್ಧ ದೂರುಗಳನ್ನು ಸಲ್ಲಿಸಿದ್ದಾರೆ ಮತ್ತು ನೀಟ್ ಮರು ಪರೀಕ್ಷೆಗೆ ಒತ್ತಾಯಿಸುತ್ತಿದ್ದಾರೆ. ಎನ್‌ಟಿಎ ಜೂನ್ 4 ರಂದು ಎನ್‌ಟಿಎ ಉದ್ದೇಶಪೂರ್ವಕವಾಗಿ NEET ಫಲಿತಾಂಶವನ್ನು ಘೋಷಿಸಿತು, ನ್ಯಾಯಯುತ ಪರೀಕ್ಷೆಯನ್ನು ಖಚಿತಪಡಿಸಿಕೊಳ್ಳಲು ತನ್ನ ವೈಫಲ್ಯವನ್ನು ಮರೆಮಾಡಲು ಲೋಕಸಭೆ ಚುನಾವಣೆಯೊಂದಿಗೆ ಘರ್ಷಣೆ ಮಾಡಿದೆ ಎಂದು ಅನೇಕ ಜನರು ಆರೋಪಿಸುತ್ತಿದ್ದಾರೆ.

NEET ಫಲಿತಾಂಶ 2024 ಹಗರಣ ವಿವಾದ: ಪ್ರಮುಖ ಅಂಶಗಳು ಯಾವುವು?

NTA NEET UG 2024 ಫಲಿತಾಂಶವನ್ನು ಘೋಷಿಸಿದ ತಕ್ಷಣ, ಸಾಮಾಜಿಕ ಮಾಧ್ಯಮದಲ್ಲಿ ವಿವಿಧ ಚಿತ್ರಗಳು ಮತ್ತು ಪೋಸ್ಟ್‌ಗಳು ಹರಿದಾಡಲು ಪ್ರಾರಂಭಿಸಿದವು. AIR 1 ಹೊಂದಿರುವ ಟಾಪರ್‌ಗಳ ಸಂಖ್ಯೆ, 718 ಮತ್ತು 719 ಅಂಕಗಳು, ಏಕ ಪರೀಕ್ಷಾ ಕೇಂದ್ರದಿಂದ 8 ಟಾಪರ್‌ಗಳು ಆಯ್ಕೆಯಾಗಿರುವ ಬಗ್ಗೆ ಪೋಷಕರು ಅಘಾತ ವ್ಯಕ್ತಪಡಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!