Wednesday, November 18, 2026

ಪ್ರಾಯೋಗಿಕ ಆವೃತ್ತಿ

ಕಾಡುತ್ತಲೇ ಇರುವ ನೋವಿನ ನೆನಪುಗಳನ್ನು ಹೊತ್ತು ಮರಳಿದ್ದೇನೆ – ಸಂತೋಷ್ ಲಾಡ್

ಬರೋಬ್ಬರಿ ಎರಡು ದಿನಗಳ ಕಾಲ ಅತ್ಯಂತ ಭಯಾನಕ ಭೀಕರತೆಗೆ ಸಾಕ್ಷಿಯಾಗಿ ಬಂದಿದ್ದೇನೆ! ಅಷ್ಟೊಂದು ಜನರ ದುರ್ಮರಣ! ಸಾವಿರಕ್ಕಿಂತ ಹೆಚ್ಚಿನ ಗಾಯಾಳುಗಳು! ಗುರುತೇ ಸಿಗದ ಮೃತ ದೇಹಗಳು! ತಮ್ಮವರ ದೇಹದ ಗುರುತು ಹಿಡಿದು ಬಿಕ್ಕಿ ಬಿಕ್ಕಿ ಅಳುತ್ತಿರುವ ವಾರಸುದಾರು!…. ಇವು ಕಾರ್ಮಿಕ ಸಚಿವ ಸಂತೋಷ್ ಲಾಡ್ ಅವರ ಮನದಾಳದ ಮಾತುಗಳು.

“>

ಒಡಿಸ್ಸಾದಲ್ಲಿ ನಡೆದ ಭೀಕರ ರೈಲುಗಳ ಅಪಘಾತದಲ್ಲಿ ಕನ್ನಡಿಗರ ಸಂರಕ್ಷಣೆಗಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ನಿಯೋಜಿಸಿ ಕಳುಹಿಸಿದ್ದ ಕೆಲಸವನ್ನು ಅತ್ಯಂತ ಯಶಸ್ವಿಯಾಗಿ ನಿರ್ವಹಿಸಿ, ಈಗ ರಾಜ್ಯಕ್ಕೆ ಮರಳಿರುವ ಅವರು ರೈಲುಗಳ ಅಪಘಾತದಲ್ಲಿ ಕಂಡ ಅತ್ಯಂತ ಭೀಕರ, ಘೋರ ಹಾಗೂ ಮನಕಲಕುವ ದೃಶ್ಯಗಳು ಕಂಡು ಭಾರವಾದ ಹೃದಯದೊಂದಿಗೆ ಮರಳಿದ್ದೇನೆ ಎಂದು ಕಂಬನಿ ಮಿಡಿದಿದ್ದಾರೆ.

ಭೀಕರ ಅಪಘಾತದ ದೃಶ್ಯಗಳೆಲ್ಲವನ್ನು ತೀರ ಹತ್ತಿರದಿಂದ ಕಣ್ಣಾರ ಕಂಡು ವಿಧಿ ಎಷ್ಟೊಂದು ಕ್ರೂರಿ ಎಂದು ಸಂಕಟ ಪಡಬೇಕೋ? ನಮ್ಮವರೆಲ್ಲ ಸುರಕ್ಷಿತವಾಗಿದ್ದಾರೆ ಎಂದು ಸಮಾಧಾನ ಪಡಬೇಕೋ? ತಿಳಿಯುತ್ತಿಲ್ಲ! ಅಸುನೀಗಿದವರೂ ನಮ್ಮವರೇ ಅಲ್ಲವೇ? ಕಾಡುತ್ತಲೇ ಇರುವ ನೋವಿನ ನೆನಪುಗಳನ್ನು ಹೊತ್ತು ಮರಳಿದ್ದೇನೆ! ಮನಸ್ಸು ವಿಚಲಿತವಾಗಿದೆ, ಭಾರವಾಗಿದೆ, ಮೂಕವಾಗಿದೆ! ಎಂದು ಅವರು ಮನದಾಳದ ನೋವನ್ನು ಹಂಚಿಕೊಂಡಿದ್ದಾರೆ.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ