Thursday, September 19, 2024

ಪ್ರಾಯೋಗಿಕ ಆವೃತ್ತಿ

ನಾಗಮಂಗಲ| ಮಾದಹಳ್ಳಿಯಿಂದ ವ್ಯಕ್ತಿ ನಾಪತ್ತೆ

ನಾಗಮಂಗಲ ತಾಲೂಕಿನ ಹೊಣಕೆರೆ ಹೋಬಳಿಯ ಮಾದಹಳ್ಳಿಯಿಂದ ಸಣ್ಣತಿಮ್ಮಯ್ಯ ಅವರ ಪುತ್ರ  ರಮೇಶ್ (46) ಎಂಬ ವ್ಯಕ್ತಿ ಕಳೆದ ನ.28ರಂದು ಕಾಣಿಯಾಗಿದ್ದಾರೆ.

ಇವರಿಗೆ ಮದುವೆಯಾಗಿದ್ದು, ಇಬ್ಬರು2 ಗಂಡು ಮಕ್ಕಳು, ಒಬ್ಬ ಹೆಣ್ಣು ಮಗಳು ಇದ್ದು, ಕಳೆದ ನ.28ರ ಬೆಳಿಗ್ಗೆ 6 ಗಂಟೆಯಲ್ಲಿ ಮನೆಯಲ್ಲಿ ಎಲ್ಲರನ್ನು ಹಾಲು ಕರೆಯಲು ಏಳಿಸಿದ್ದು, ನಂತರ ಮನೆಯಿಂದ ಹೊರಗಡೆ ಹೋದವರು, ವಾಪಸ್ ಮನೆಗೆ ಬಂದಿಲ್ಲ ಎಂದು ರಮೇಶ ಅವರ ತಾಯಿ ಲಕ್ಷ್ಮಮ್ಮ ನಾಗಮಂಗಲ ಗ್ರಾಮಾಂತರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ರಮೇಶ್ ಮೊಬೈಲ್ ಪೋನ್‌ನನ್ನು ಮನೆಯಲ್ಲಿ ಬಿಟ್ಟು ಹೋಗಿದ್ದು, ಎಲ್ಲ ಕಡೆಗಳಲ್ಲಿ ಹುಡುಕಿದರೂ ಹಾಗೂ ಬೆಂಗಳೂರಿನಲ್ಲಿ ಎಲ್ಲ ಹುಡುಕಿದರೂ ಪತ್ತೆಯಾಗಿರುವುದಿಲ್ಲ, ರಮೇಶ್ 5 ಅಡಿ ಎತ್ತರವಿದ್ದು, ಸಾಧಾರಣ ಶರೀರ ಹೊಂದಿದ್ದು, ಕನ್ನಡ ಮಾತಾನಾಡುತ್ತಾರೆ, ಮನೆಯಿಂದ ಹೋಗುವಾಗ ಒಂದು ಬಿಳಿ ಬಣ್ಣದ ಶರ್ಟ್ ಹಾಗೂ ಲುಂಗಿಯನ್ನು ಧರಿಸಿರುತ್ತಾರೆ. ಇವರ ಬಗ್ಗೆ ಸುಳಿವು ಸಿಕ್ಕವರು ರಾಕೇಶ್ ಮೊ. 8088326755 ಹಾಗೂ ವೆಂಕಟೇಶ್ ಮೊ. 8431766711 ಅನ್ನು ಸಂಪರ್ಕಿಸುವಂತೆ ಕೋರಲಾಗಿದೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!