Tuesday, November 24, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯವನ್ನು ‘ಸಕ್ಕರೆನಗರ’ ಎನ್ನುವ ಬದಲು ‘ಬಾಡುನಗರ’ ಎನ್ನಬಹುದು : ರಘುನಾಥ ಚ.ಹ

‘ನಾನು ಎಲ್ಲ ಕಾರ್ಯಕ್ರಮಗಳಲ್ಲಿ ಪುಸ್ತಕ ಹಿಡಿದು ನಿಲ್ಲುವುದು ಸಹಜ. ಆದರೆ ಇವತ್ತು ನಾನು ಮೊಟ್ಟೆಯನ್ನು ಹಿಡಿದು ನಿಂತದ್ದು ವಿಶೇಷ ಎನಿಸಿತು’. ಮಂಡ್ಯವನ್ನ ಸಕ್ಕರೆ ನಗರ ಅಂತ ಕರಿತೀವಿ, ನಮ್ಮ ಯೋಚನೆಯನ್ನು ಬದಲಿಸಿಕೊಳ್ಳಬೇಕು, ಬಹುಶಃ ‘ಬಾಡುನಗರ’ ಎಂದು ಕರೆಯುವುದರ ಬಗ್ಗೆ ಯೋಚನೆ ಮಾಡಬಹುದೇನೋ ಎಂದು ಹಿರಿಯ ಪತ್ರಕರ್ತ ರಘುನಾಥ ಚ.ಹ., ಅಭಿಪ್ರಾಯಪಟ್ಟರು.

ಬಾಡೂಟ ಬಳಗದ ವತಿಯಿಂದ ಮಂಡನಗರದ  ಕರ್ನಾಟಕ ಸಂಘದ ಕೆ.ವಿ.ಶಂಕರಗೌಡ ಸಭಾಂಗಣದಲ್ಲಿ ಮಂಗಳವಾರ ಸಂಜೆ ನಡೆದ ‘ಮಂಡ್ಯ ಮುನ್ನುಡಿ’ ಕಾರ್ಯಕ್ರಮದಲ್ಲಿ ಭಾಗವವಹಿಸಿ ಅವರು ಮಾತನಾಡಿದರು.

ಸಕ್ಕರೆ ಆರೋಗ್ಯಕ್ಕೆ ಹಾನಿಕರ ಎಂಬುದು ನಮಗೆ ಗೊತ್ತು, ವೈಯಕ್ತಿಕ ಆರೋಗ್ಯ ಮತ್ತು ಸಮಾಜಕ್ಕೆ ಬಾಡು ಅವಶ್ಯಕವಾಗಿದೆ. ಮಹೇಶ್ ಜೋಷಿ ಮಾಂಸದ ಪ್ರಸ್ತಾಪ ಮಾಡದಿದ್ದರೆ, ನಾವ್ಯಾರು ಮಾಂಸದೂಟ ಬೇಕು ಎಂದು ಹೋರಾಟ ಮಾಡುತ್ತಿರಲಿಲ್ಲ ಎನಿಸುತ್ತದೆ, ಇದು ಸ್ವತಃ ಅವರೇ ಮಾಡಿಕೊಂಡಿದ್ದು’ ಎಂದು ತಿಳಿಸಿದರು.

ಅಲ್ಪಸಂಖ್ಯಾತರೇ ಬಹುಸಂಖ್ಯಾತರನ್ನು ಆಳುತ್ತ ಬಂದಿದ್ದಾರೆ

ಪ್ರಗತಿಪರ ಚಿಂತಕ ಶಿವಸುಂದರ್ ಮಾತನಾಡಿ ಮೊದಲಿಗೆ ಬಾಡೂಟ ಬಳಗಕ್ಕೆ ಅಭಿನಂದನೆಗಳು, 87 ವರ್ಷಗಳ ಇತಿಹಾಸದಲ್ಲಿ, ನಡೆಯದ ಪ್ರಕ್ರಿಯೆಯನ್ನು ಮಂಡ್ಯದಲ್ಲಿ ಮಾಡಿ ತೋರಿಸಿದ್ದೀರಿ’, ಅಲ್ಪಸಂಖ್ಯಾತರು ಬಹುಸಂಖ್ಯಾತರನ್ನು ಆಳುವುದು ಅಸಹಜ ಪ್ರಕ್ರಿಯೆ ಆದರೆ ಇತಿಹಾಸದುದ್ದಕ್ಕೂ ಅಲ್ಪಸಂಖ್ಯಾತರೇ ಬಹುಸಂಖ್ಯಾತರನ್ನು ಆಳುತ್ತ ಬಂದಿದ್ದಾರೆ. ಅದಕ್ಕೆ ಅವರು ಬಳಸುತ್ತಿರುವ ದೊಡ್ಡ ಆಯುಧವೆಂದರೆ ಸಾಂಸ್ಕೃತಿಕ ರಾಜಕಾರಣ. ನಮ್ಮ ತಲೆಯೊಳೆಗೆ ಕೀಳರಿಮೆಯನ್ನು ಸೃಷ್ಠಿಸಿ, ಪ್ರತಿಯೊಂದರಲ್ಲೂ ಮೇಲೂ ಕೀಳನ್ನು ಸೃಷ್ಠಿಸಿ, ಸಮಾಜದಲ್ಲಿ ಮೇಲಿನವರ ಸಹಾಯವಿಲ್ಲದೇ, ನಮಗೆ ಮೋಕ್ಷವೇ ಇಲ್ಲವೇನೋ ಎಂಬ ಭಯವನ್ನು ಸೃಷ್ಠಿಸಿಕೊಂಡು ಬಂದಿದ್ದಾರೆ ಎಂದರು.

‘ಗಾಂಧಿಜಯಂತಿ ಹಾಗೂ ಮಹಾವೀರ ಜಯಂತಿ ಬಂತೂ ಅಂದ್ರೆ ಮಾಂಸಹಾರ ನಿಷೇಧ, ಅಂಬೇಡ್ಕರ್ ಜಯಂತಿಯನ್ನು ಮೈಸೂರಿನ ಅಂಬೇಡ್ಕರ್ ಭವನದಲ್ಲಿ ಬಾಡೂಟ ಮಾಡುವ ಆಗಿಲ್ಲವಂತೆ, ಇದು ದೇವರಾಜ ಆರಸು ಅವರ ಕಾಲದಲ್ಲಿ ಹುಟ್ಟಿಕೊಂಡಿತು. ಮಾಂಸಹಾರ ಕೀಳು ಎನ್ನುವುದನ್ನ ಸರ್ಕಾರ ತನ್ನ ಆದೇಶಗಳ ಮೂಲಕ ಮಾಡುತ್ತೇ, ಅದನ್ನು ಇಷ್ಟುದಿನ ಒಪ್ಪಿಕೊಂಡು ಬಿಟ್ಟಿದ್ದೇವು’ ಎಂದು ವಿವರಿಸಿದರು.

ಕೇವಲ ಒಂದು ಸಮ್ಮೇಳನಕ್ಕೆ ಸೀಮಿತವಾಗಿಲ್ಲ, ಕಳೆದ ಮೂರ್‍ನಾಲ್ಕು ದಿನಪ್ರತಿಕೆಗಳನ್ನ ನೋಡಿದರೆ, ಪಂಜಾಬ್ ಸರ್ಕಾರ ಅಮೃತಸರ ಸೇರಿದಂತೆ ಮೂರು ನಗರಗಳನ್ನು ಪವಿತ್ರನಗರ ಎಂದು ಘೋಷಣೆ ಮಾಡಿ, ಅದಕ್ಕೊಂಡು ವಿಶೇಷ ಸ್ಥಾನಮಾನ ಕೊಟ್ಟು, ಮಾಂಸ, ಮದ್ಯ ಮತ್ತು ಮಾದಕ ವಸ್ತುಗಳನ್ನು ನಿಷೇಧ ಮಾಡಿದೆ. ಇದು ರಾಷ್ಟ್ರಮಟ್ಟದಲ್ಲಿ ಆಗುತ್ತಿರುವ ಒಂದು ಬೆಳವಣಿಗೆಯಾಗಿದೆ. ಅಂದರೆ ಮದ್ಯದ ಜತೆ ಮಾಂಸವನ್ನು ಸಮೀಕರಣ ಮಾಡುವುದು ಮನುಷ್ಯ ವಿರೋಧಿ ಚಟುವಟಿಕೆ ಎನ್ನಬಹುದು ಎಂದರು.

ಸಂವಿಧಾನ ಬದಲಾವಣೆ ಮಾಡುತ್ತಿರುವವರು ನೇರವಾಗಿ ಇಂತಹ ಪ್ರಕ್ರಿಯೆ ಆಗಲ್ಲ ಎಂದು ಮಾಂಸಾಹಾರ ನಿಷೇಧ ಮಾಡುವ ಪ್ರಕ್ರಿಯೆಗೆ ಕೈ ಹಾಕಿದ್ಧಾರೆ. ಇಂತಹ ಬೆಳವಣಿಗೆಗೆ ಸಮಾಜದ ಸ್ವೀಕೃತಿಯೂ ಕೂಡ ಸಿಗುತ್ತದೆ. ನಾಳೆ ಇಲ್ಲಿನ ಹಲವು ನಗರಗಳನ್ನು ಪವಿತ್ರನಗರ ಅಂತ ಘೋಷಿಸಿದರೆ, ಅದಕ್ಕೆ ಅಷ್ಟರ ಮಟ್ಟಿಗೆ ವಿರೋಧಗಳು ಎದುರಾಗಲ್ಲ ಎಂದು ನನಗೆ ಅನಿಸುತ್ತದೆ, ಅಷ್ಟರ ಮಟ್ಟಿಗೆ ಮುಖ್ಯವಾಹಿನಿಗಳ ಮೆದುಳನ್ನು ಹ್ಯಾಕ್ ಮಾಡಲಾಗಿದೆ ಎಂದರು.

ಕಾರ್ಯಕ್ರಮದಲ್ಲಿ ವನ್ಯಜೀವಿ ಛಾಯಾಗ್ರಾಹಕ ಲೋಕೇಶ್‌ ಮೊಸಳೆ,  ಸಂಸ್ಕೃತಿ ಚಿಂತಕ ಉಗ್ರನರಸಿಂಹೇಗೌಡ, ಸಾಹಿತಿ ಗುರುಪ್ರಸಾದ್‌ ಕಂಟಲಗೆರೆ, ರಂಗಕರ್ಮಿ ಸಂತೋಷ್‌ ಗುಡ್ಡಿಯಂಗಡಿ ಹಾಗೂ ವಕೀಲ ಜೀರಹಳ್ಳಿ ರಮೇಶ್ ಗೌಡ ಭಾಗವಹಿಸಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ