ಬೆಂಗಳೂರು-ಮೈಸೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಬೆಳಗಿನ ಜಾವ ಮತ್ತೊಂದು ದರೋಡೆ ನಡೆದಿದೆ.
ಶ್ರೀರಂಗಪಟ್ಟಣದ ಗಂಜಾಂ ಮೇಲ್ಸೇತುವೆ ಮೇಲೆ ಘಟನೆ ನಡೆದಿದ್ದು,ದರೋಡೆಕೋರರು
ಕೊಡಗು ಮೂಲದ ಚಲನ್ ದಂಪತಿಗಳ ಸುಲಿಗೆ ಮಾಡಿ,ಎರಡು ಲಕ್ಷ ರೂ.ಮೌಲ್ಯದ
ಸುಮಾರು 30 ಗ್ರಾಂ ಚಿನ್ನಾಭರಣ ದರೋಡೆ ಮಾಡಿದ್ದಾರೆ.
ಹೆದ್ದಾರಿಯಲ್ಲಿ ಚಲಿಸುತ್ತಿದ್ದ ಸಂದರ್ಭದಲ್ಲಿ ಪೊಲೀಸರು ಎಂದು ಹೇಳಿಕೊಂಡು ಹಳೆ ಟೆಕ್ನಿಕನ್ನೇ ಬಳಸಿ ದರೋಡೆ ಮಾಡಲಾಗಿದೆ.
ಪದೇ ಪದೇ ರಾಷ್ಟ್ರೀಯ ಹೆದ್ದಾರಿಯಲ್ಲಿ ದರೋಡೆ ಮಾಡ್ತಿರೋ ಖದೀಮರು ಈಗಾಗಲೇ ಇದೇ ರೀತಿ 3 ದರೋಡೆ ನಡೆಸಿದ್ದಾರೆ. ಈಗ 4ನೇ ದರೋಡೆಯನ್ನು ಕೂಡ ಯಶಸ್ವಿಯಾಗಿ ಮುಗಿಸಿದ್ದಾರೆ ಈ ಕಿರಾತಕರು.
ನಿಂತಿರುವ ಕಾರು ಅಥವಾ ಸ್ಲೋ ಆಗಿರುವ ಕಾರುಗಳನ್ನೇ ತಡೆದು ದರೋಡೆ ಮಾಡುತ್ತಿರುವುದು ಸಾರ್ವಜನಿಕರಲ್ಲಿ ಭಯ ಮೂಡಿಸಿದೆ.
ದರೋಡೆಗೊಳಗಾದ ಚಲನ್ ದಂಪತಿಗಳಿಂದ ಶ್ರೀರಂಗಪಟ್ಟಣ ಪೊಲೀಸರಿಗೆ ದೂರು ನೀಡಿದ್ದಾರೆ.
ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಆಗಾಗ್ಗೆ ನಡೆಯುತ್ತಿರುವ ದರೋಡೆ ಪ್ರಕರಣಗಳು
ಪೊಲೀಸರಿಗೆ ತಲೆನೋವು ತಂದಿದೆ.




