Thursday, November 19, 2026

ಪ್ರಾಯೋಗಿಕ ಆವೃತ್ತಿ

ಮಂಡ್ಯ | 16 ಕೋಟಿ ವೆಚ್ಚದಲ್ಲಿ ಕ್ರಿಟಿಕಲ್ ಕೇರ್ ಘಟಕ : ರವಿಕುಮಾರ್

ಮಂಡ್ಯನಗರ ಮಿಮ್ಸ್ ಆಸ್ಪತ್ರೆಯನ್ನು ಉನ್ನತಿಕರಣಗೊಳಿಸುವ ಸಲುವಾಗಿ 16 ಕೋಟಿ ವೆಚ್ಚದ 50 ಹಾಸಿಗೆಗಳ ಕ್ರಿಟಿಕಲ್ ಕೇರ್ ಘಟಕದ ನಿರ್ಮಾಣ ಮಾಡಲಾಗುತ್ತಿದೆ ಎಂದು ಮಂಡ್ಯ ವಿಧಾನಸಭಾ ಕ್ಷೇತ್ರದ ಶಾಸಕ ಪಿ. ರವಿಕುಮಾರ್ ಹೇಳಿದರು.

ಮಂಡ್ಯ ಮಿಮ್ಸ್ ಆವರಣದಲ್ಲಿ 16 ಕೋಟಿ ವೆಚ್ಚದ ಕ್ರಿಟಿಕಲ್ ಕೇರ್ ಸೆಂಟರ್ ಕಾಮಗಾರಿಗೆ ಇಂದು ಭೂಮಿ ಪೂಜೆ ನೆರವೇರಿಸಿ ಮಾತನಾಡಿದರು.

ಮಂಡ್ಯ ಅಲ್ಲದೆ ರಾಮನಗರ ಮತ್ತು ತುಮಕೂರು ಜಿಲ್ಲೆಯ ಆಯ್ದ ಭಾಗಗಳಿಂದಲೂ ಮಿಮ್ಸ್ ಆಸ್ಪತ್ರೆಗೆ ಸಾರ್ವಜನಿಕರು ಚಿಕೆತ್ಸೆ ಪಡೆಯಲು ಬರುವುದರಿಂದ ಕ್ರಿಟಿಕಲ್ ಕೇರ್ ಘಟಕದ ನಿರ್ಮಾಣ ಮಾಡಲಾಗುತ್ತಿದೆ ಎಂದು ತಿಳಿಸಿದರು.

ಮಿಮ್ಸ್ ನಿರ್ದೇಶಕರ ಸತತ ಪ್ರಯತ್ನದಿಂದಾಗಿ ರೋಬೋಟಿಕ್ ರೇಡಿಯೋ ತರೆಪಿಯನ್ನು ಸಹ ಇಂದಿನಿಂದ ಆರಂಭಿಸಲಾಗಿದೆ. ಮಿಮ್ಸ್ ಆಸ್ಪತ್ರೆಯನ್ನು ಹೊರತುಪಡಿಸಿ ಸಾರ್ವಜನಿಕರಿಗೆ ಅನುಕೂಲವಾಗಲು ಮಂಡ್ಯ ಜಿಲ್ಲೆಗೆ ಒಂದು ಜಿಲ್ಲಾಸ್ಪತ್ರೆಯ ಅವಶ್ಯಕತೆಯಿದ್ದು, ಜಿಲ್ಲಾ ಆಸ್ಪತ್ರೆ ನಿರ್ಮಾಣಕ್ಕಾಗಿ ಕ್ರಮ ಕೈಗೊಳ್ಳಲಾಗುತ್ತಿದೆ ಎಂದರು.

ಮುಂದಿನ ಸಂಕ್ರಾಂತಿ ಹಬ್ಬದೊಳಗಾಗಿ ಜಿಲ್ಲೆಯಲ್ಲಿ ಕ್ಯಾನ್ಸರ್ ಆಸ್ಪತ್ರೆಯನ್ನು ನಿರ್ಮಿಸಲು ಕ್ರಮ ಕೈಗೊಂಡಿದ್ದು, ಈಗಾಗಲೇ ಶೇಕಡಾ 70 ರಷ್ಟು ಆಸ್ಪತ್ರೆಯ ಅಭಿವೃದ್ಧಿ ಕೆಲಸ ಪೂರ್ಣಗೊಂಡಿದೆ. ಆಸ್ಪತ್ರೆಗೆ ಅಗತ್ಯವಾದ ಸಲಕರಣೆಗಳಿಗಾಗಿ ಸರ್ಕಾರಕ್ಕೆ ಅರ್ಜಿ ಸಲ್ಲಿಸಿದ್ದು ಸರ್ಕಾರ ಒಪ್ಪಿಗೆ ಸೂಚಿಸಿದೆಎಂದು ತಿಳಿಸಿದರು.

ಮಂಡ್ಯ ಮಿಮ್ಸ್ ನಿರ್ದೇಶಕರಾದ ಡಾ: ನರಸಿಂಹ ಸ್ವಾಮಿ ಅವರು ಮಾತನಾಡಿ ಸರ್ಕಾರದ ಸಹಕಾರದಿಂದ ರೋಗಿಗಳ ಸೇವೆಗೆ ಅನುಕೂಲವಾಗಲು ಮಿಮ್ಸ್ ಆಸ್ಪತ್ರೆಯಲ್ಲಿ 16 ಕೋಟಿ ವೆಚ್ಚದ 50 ಹಾಸಿಗೆಗಳ ಕ್ರಿಟಿಕಲ್ ಕೇರ್ ಘಟಕದ ನಿರ್ಮಾಣವಾಗುತ್ತಿದೆ ಹಾಗೂ ಶೀಘ್ರದಲ್ಲೇ ಜಿಲ್ಲೆಯಲ್ಲಿ ಕ್ಯಾನ್ಸರ್ ಕೇರ್ ಸೆಂಟರ್ ತೆರೆಯಲಾಗುವುದು. ಕ್ಯಾಸುಲಿಟಿ ವಿತರಣೆಗಾಗಿ ಮನವಿ ಸಲ್ಲಿಸಿದ್ದು, ಸರ್ಕಾರ ಕ್ಯಾಸುಲಿಟಿ ವಿತರಣೆಗಾಗಿ ಭರವಸೆ ನೀಡಿದೆ ಎಂದರು.

ಈ ಸಂದರ್ಭದಲ್ಲಿ ಮಿಮ್ಸ್ ನ ವೈದ್ಯಕೀಯ ಅಧೀಕ್ಷಕ ಡಾ: ಶಿವಕುಮಾರ್, ಮುಡಾ ನಿರ್ದೇಶಕ ಕೃಷ್ಣ, ನಗರಸಭೆ ಸದಸ್ಯ ಶ್ರೀಧರ್, ಶಾಲಾ ಅಭಿವೃದ್ಧಿ ಸಮಿತಿ ಅಧ್ಯಕ್ಷರಾದ ಅಭಿಲಾಶ್,ಮುಖಂಡರಾದ ಅರುಣ್, ಪ್ರದೀಪ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ