Saturday, November 21, 2026

ಪ್ರಾಯೋಗಿಕ ಆವೃತ್ತಿ

50 ಕೋಟಿ ರೂ. ವಿಶೇಷ ಅನುದಾನದಲ್ಲಿ ರಸ್ತೆಗಳ ಡಾಂಬರೀಕರಣ : ರವಿಕುಮಾರ್

ಮುಖ್ಯಮಂತ್ರಿಗಳ ವಿಶೇಷ ಅನುದಾನ 50 ಕೋಟಿ ರೂ.ಗಳನ್ನು ಸದ್ಬಳಕೆ ಮಾಡಿಕೊಂಡು ನಗರದ ಎಲ್ಲಾ ರಸ್ತೆಗಳನ್ನು ಡಾಂಬರೀಕರಣ ಮಾಡಲಾಗುತ್ತಿದೆ ಎಂದು ಶಾಸಕ ಗಣಿಗ ರವಿಕುಮಾರ್ ತಿಳಿಸಿದರು.

ಮಂಡ್ಯ ನಗರದ ಕಲ್ಲಹಳ್ಳಿಯ ವಿ.ವಿ. ನಗರ ಬಡಾವಣೆಯ 22 ಮತ್ತು 23ನೇ ಕ್ರಾಸ್ ನಲ್ಲಿ ರಸ್ತೆ ಡಾಂಬರೀಕರಣ ಕಾಮಗಾರಿಗೆ ಗುದ್ದಲಿ ಪೂಜೆ ನೆರವೇರಿಸಿ ಅವರು ಮಾತನಾಡಿದರು.

ಮಂಡ್ಯ ನಗರದ ರಸ್ತೆಗಳು ಬಹುತೇಕ ಹದಗೆಟ್ಟ ಹಿನ್ನೆಲೆಯಲ್ಲಿ ಮುಖ್ಯಮಂತ್ರಿಗಳು ನಗರಕ್ಕೆ 50 ಕೋಟಿ ರೂಗಳ. ವಿಶೇಷ ಅನುದಾನ ನೀಡಿದ್ದಾರೆ. ಅದರಲ್ಲಿ ಬಿಡುಗಡೆ ಆಗಿರುವ 20 ಕೋಟಿ ರೂ. ಬಳಸಿಕೊಂಡು ಈಗಾಗಲೇ ನಗರದ ಅರ್ಧದಷ್ಟು ರಸ್ತೆಗಳ ಅಭಿವೃದ್ಧಿ ಕಾಮಗಾರಿ ಮಾಡಿದ್ದೇವೆ. ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿಗಳ ವಿಶೇಷ ಅನುದಾನ ಬಳಸಿಕೊಂಡು ಉಳಿದಿರುವ ಹದಗೆಟ್ಟ ರಸ್ತೆಗಳಿಗೆ ಡಾಂಬರೀಕರಣ ಮಾಡಲಾಗುವುದು ಎಂದರು.

ನಗರದ ನೂರಡಿ ರಸ್ತೆಯ ಅಭಿವೃದ್ಧಿಗೆ 6:30 ಕೋಟಿ ರೂ ಡೆಲ್ಟಾ ನೀಡಿದ್ದು,ಕಾಮಗಾರಿ ನಡೆಯುತ್ತಿದೆ.ಹಾಗೆಯೇ ಮಹಾವೀರ ವೃತ್ತದಿಂದ ಹೊಸಹಳ್ಳಿ ವೃತ್ತದ ವರೆಗಿನ 800 ಮೀ. ರಸ್ತೆಗೆ ಡೆಲ್ಟಾ 4.50 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದು ವಿಶ್ವ ದರ್ಜೆಯ ಗುಣ ಮಟ್ಟದಲ್ಲಿ ಅಭಿವೃದ್ಧಿ ಪಡಿಸಲಾಗುವುದು. ಮಂಡ್ಯ ನಗರದ ಪ್ರಮುಖ ವೃತ್ತಗಳನ್ನು ನೂರು ಕೋಟಿ ರೂ. ವೆಚ್ಚದಲ್ಲಿ ಸೌಂದರೀಕರಣ ಮಾಡಲಾಗುವುದು ಎಂದರು.

ಸಾತನೂರಿನ ಕನಕದಾಸ ಭವನ ನಿರ್ಮಾಣಕ್ಕೆ ಒಂದು ಕೋಟಿ ರೂ ಹಣ ನೀಡಲಾಗಿದೆ. ಮಂಡ್ಯ ನಗರದಲ್ಲಿ ನಾಡಪ್ರಭು ಕೆಂಪೇಗೌಡರ ಪ್ರತಿಮೆ ನಿರ್ಮಾಣ ಮಾಡಲಾಗುವುದು. ಬ್ಯಾಸ್ಕೆಟ್ ಬಾಲ್ ಕ್ರೀಡಾಂಗಣ ಅಭಿವೃದ್ಧಿಗೆ 2 ಕೋಟಿ ಹಣವನ್ನು ನೀಡಲಾಗಿದೆ. ಗ್ರಾಮೀಣಾಭಿವೃದ್ಧಿ ಇಲಾಖೆಯಿಂದ ಬಿಡುಗಡೆಯಾಗಿರುವ 10 ಕೋಟಿ ರೂ.ಹಣದಲ್ಲಿ ಗ್ರಾಮೀಣ ಪ್ರದೇಶಗಳ ರಸ್ತೆ ಅಭಿವೃದ್ಧಿ ಮಾಡಲಾಗುವುದು. ಹಾಗೆಯೇ ಕಲ್ಲಹಳ್ಳಿ ಎಪಿಎಂಸಿ ಬಳಿ ಇರುವ ರಸ್ತೆ ಕಾಮಗಾರಿಗೆ ಎರಡು ಕೋಟಿ ರೂ. ಹಣ ಬಿಡುಗಡೆಯಾಗಿದ್ದು,ವಿ.ವಿ.ನಗರ 6 ಮತ್ತು 7ನೇ ಕ್ರಾಸ್ ರಸ್ತೆಗಳ ಅಭಿವೃದ್ಧಿ ಕೂಡಾ ಮಾಡಲಾಗುವುದು. ಕಲ್ಲಹಳ್ಳಿ ವಿ.ವಿ.ನಗರ, ಮರೀಗೌಡ ಬಡಾವಣೆಯ ರಸ್ತೆ ಅಭಿವೃದ್ಧಿಗೆ ನಾನು ಬದ್ಧನಾಗಿದ್ದು, ಅದರಂತೆ ಕಾಮಗಾರಿ ನಡೆಯುತ್ತಿದೆ ಎಂದರು.

ನಗರಸಭೆ ಮಾಜಿ ಸದಸ್ಯ ಕೆ.ಸಿ. ರವೀಂದ್ರ ಮಾತನಾಡಿ, ಮಂಡ್ಯ ನಗರದ ಕಲ್ಲಹಳ್ಳಿ ವಿವಿ ನಗರ ವಿಸ್ತೀರ್ಣದಲ್ಲಿ ದೊಡ್ಡದಾಗಿದ್ದು, ಕ್ರಿಯಾಶೀಲ ಶಾಸಕರಾದ ರವಿಕುಮಾರ್ ಅವರು ಈ ಭಾಗದ ರಸ್ತೆಗಳ ಅಭಿವೃದ್ಧಿಗೆ ಸಾಕಷ್ಟು ಅನುದಾನ ನೀಡಿದ್ದಾರೆ. ಈ ಭಾಗದಲ್ಲಿ ರಸ್ತೆ, ಚರಂಡಿಗಳು ಸೇರಿದಂತೆ ಮೂಲಭೂತ ಸೌಲಭ್ಯಗಳ ಅವಶ್ಯಕತೆ ಇದ್ದು, ಇವುಗಳ ಅಭಿವೃದ್ಧಿ ಮಾಡುವಂತೆ ಮನವಿ ಮಾಡಿದರು.

ಈ ಸಂದರ್ಭದಲ್ಲಿ ನಗರಸಭೆ ಅಧ್ಯಕ್ಷ ಎಂ.ವಿ. ಪ್ರಕಾಶ್ (ನಾಗೇಶ್), ಮಾಜಿ ಅಧ್ಯಕ್ಷರಾದ ಎಚ್.ಎಸ್. ಮಂಜು,ಲೋಕೇಶ್,ಸ್ಥಾಯಿ ಸಮಿತಿ ಅಧ್ಯಕ್ಷ ರವಿ, ಆಯುಕ್ತೆ ಪಂಪಾಶ್ರೀ, ನಗರಸಭಾ ಸದಸ್ಯರಾದ ಕುಮಾರ್, ಶಿವಲಿಂಗು,ಮುಡಾ ಅಧ್ಯಕ್ಷ,ನಯೀಂ,ಸದಸ್ಯ ಎಂ.ಕೃಷ್ಣ,ಮುಖಂಡರಾದ ಕಲ್ಲಹಳ್ಳಿ ಆನಂದ್,ಅನೂಪ್ ಮತ್ತಿತರರಿದ್ದರು.

ನಮ್ಮ ಸುದ್ದಿಗಳು ಇಷ್ಟವಾದರೆ ನುಡಿ ಕರ್ನಾಟಕ.ಕಾಂ (ಮಂಡ್ಯ ಡಿಜಿಟಲ್ ಮೀಡಿಯಾ) ಗೆ ದೇಣಿಗೆ ನೀಡಿ ಪ್ರೋತ್ಸಾಹಿಸಿ

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ