Thursday, September 19, 2024

ಪ್ರಾಯೋಗಿಕ ಆವೃತ್ತಿ

ಮಂಡ್ಯ ಜನರ ಮನಸೂರೆಗೊಂಡ ಗಣೇಶೋತ್ಸವ

ಮಂಡ್ಯ ನಗರದ ಬೆಸಗರಹಳ್ಳಿ ರಾಮಣ್ಣ ವೃತ್ತದಲ್ಲಿರುವ ಕಲಾನಭ ಗೆಳೆಯರ ಬಳಗದಿಂದ ನಡೆಸಿದ ಗಣೇಶೋತ್ಸವ ಮೆರವಣಿಗೆ ಹಲವಾರು ಕಲಾತಂಡಗಳ ನಡುವೆ ಜನರ ಮನ ಸೂರೆಗೊಳ್ಳುವಲ್ಲಿ ಯಶಸ್ವಿಯಾಯಿತು.

ಕಳೆದ ಒಂದು ತಿಂಗಳಿಗೂ ಹೆಚ್ಚು ಕಾಲ ಕಲಾನಭ ಗೆಳೆಯರು ಗಣೇಶ ಮೂರ್ತಿಯ ಪ್ರತಿಷ್ಠಾಪನೆಯನ್ನು ನಗರದ ಬೆಸಗರಹಳ್ಳಿ ರಾಮಣ್ಣ ಸರ್ಕಲ್ ನಲ್ಲಿ ಮಾಡಿದ್ದರು. ವಿಜಯದಶಮಿ ದಿನವಾದ ಇಂದು ವಿವಿಧ ಕಲಾ ತಂಡಗಳ ನಡುವೆ ಗಣೇಶನ ಮೆರವಣಿಗೆ ನಡೆಸಿದರು.

ಮೆರವಣಿಗೆಯಲ್ಲಿ ತಾಯಿ ಚಾಮುಂಡೇಶ್ವರಿ, ಕಾವೇರಿ ಮಾತೆ,ಪುನೀತ್ ರಾಜಕುಮಾರ್ ಅವರ ಭಾವಚಿತ್ರದ ಮೆರವಣಿಗೆ ನಡೆಯಿತು‌. ಗಾರುಡಿ ಗೊಂಬೆ, ನಂದಿ ಧ್ವಜ, ಡೊಳ್ಳು ಕುಣಿತ,ವೀರಗಾಸೆ ತಂಡಗಳು ಮೆರವಣಿಗೆಯಲ್ಲಿದ್ದು, ಜನರಿಗೆ ಆಕರ್ಷಿಸಿತು. ಯುವಕರು ಹಾಗೂ ಮಕ್ಕಳು ಡ್ರಮ್ಸ್ ಹಾಗೂ ತಮಟೆ ಸದ್ದಿಗೆ ಮನದುಂಬಿ ಕುಣಿದು ಕುಪ್ಪಳಿಸಿದರು.

ಮೈಸೂರಿನಲ್ಲಿ ದಸರಾ ಜನರ ಮನಸ್ಸನ್ನು ಸೂರೆಗೊಂಡರೆ ಮಂಡ್ಯದಲ್ಲಿ ಕಲಾನಭ ಗೆಳೆಯರ ಬಳಗ ನಡೆಸಿದ ಗಣೇಶೋತ್ಸವ ಮೆರವಣಿಗೆ ಕೂಡ ಪುಟ್ಟ ದಸರಾ ವೈಭವವನ್ನು ಮಂಡ್ಯದ ಜನರ ಕಣ್ಮುಂದೆ ಸೃಷ್ಟಿ ಮಾಡಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!