ಮಹಿಳೆಯು ಸಮಾಜದ ಸ್ವಾಭಿಮಾನದ ಸಂಕೇತವಾಗಿದ್ದು, ಪ್ರತಿ ಕ್ಷೇತ್ರದಲ್ಲಿ ಮಹಿಳೆಯು ಗುರುತಿಸಿಕೊಂಡು ಸಮಾಜದ ಪ್ರಗತಿಯ ಪ್ರಮುಖ ಭಾಗವಾಗಿದ್ದಾಳೆ ಎಂದು ಉಪನ್ಯಾಸಕಿ ಬೆಂಗಳೂರು ಶೈಲಜ ತಿಳಿಸಿದರು.
ಮಂಡ್ಯ ಕೆಎಸ್ ಆರ್ ಟಿಸಿ ಘಟಕದಲ್ಲಿ ನೆಡೆದ ಅಂತರ ರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹಿಳೆಯರ ಮೇಲೆ ಆಗುತ್ತಿರುವ ದೌರ್ಜನ್ಯಗಳನ್ನು ತಡೆಯಲು ಮತ್ತು ಮಹಿಳೆಯರ ಸುರಕ್ಷತೆಗಾಗಿ ಕಾನೂನುಗಳು ಬಿಗಿಯಾಗಬೇಕು ಎಂದರು.
ಮಂಡ್ಯ ವಿಭಾಗದ ವಿಭಾಗಿಯ ನಿಯಂತ್ರಣ ಅಧಿಕಾರಿ ಎಸ್.ಪಿ. ನಾಗರಾಜ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದರು.
ಮುಖ್ಯ ಅತಿಥಿಗಳಾಗಿ ಸಂಚಾರ ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಣಿ, ವಿಭಾಗಿಯ ಸಂಚಲನಾಧಿಕಾರಿ ಪರಮೇಶ್ವರ್, ಸಹಾಯಕ ಸಂಚಲನಾ ಅಧಿಕಾರಿ ಪುಷ್ಪಲತಾ, ಮಂಡ್ಯ ವಿಭಾಗದ ಕಾರ್ಮಿಕ ಕಲ್ಯಾಣ ಅಧಿಕಾರಿ ಶೇಷಮೂರ್ತಿ ರವರು, ವಿಭಾಗಿಯ ಉಗ್ರಾಣ ಅಧಿಕಾರಿ ಶಶಿಕುಮಾರ್, ವಿಭಾಗೀಯ ಸಹಾಯಕ ಭದ್ರತಾ ಅಧಿಕಾರಿ ರವೀಂದ್ರ ಸೇರಿದಂತೆ ಇತರರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.
ಕಾರ್ಯಕ್ರಮದ ನೇತೃತ್ವವನ್ನು ಘಟಕದ ಘಟಕ ವ್ಯವಸ್ಥಾಪಕ ಎಚ್.ಎನ್.ರಘು ರವರ ನೇತೃತ್ವದಲ್ಲಿ ನೆರವೇರಿತು ವೇದಿಕೆಯ ಕಾರ್ಯಕ್ರಮದ ನಂತರ ಮಹಿಳಾ ತಂಡದಿಂದ ಭರತನಾಟ್ಯ ಹಾಡುಗಾರಿಕೆ ಹಾಗೂ ಅಮೋಘ ನೃತ್ಯದಿಂದ ಸಭಿಕರ ಮನ ಸೆಳೆಯಿತು. ಮಂಡ್ಯ ಘಟಕದ ಎಂ.ಈಶ್ವರ್ ಕಾರ್ಯಕ್ರಮ ನಿರೂಪಿಸಿದರು.




