‘ವಾಕ್ ಫಾರ್ ಲೈಫ್’ ಎಂಬ ಹೆಸರಿನಲ್ಲಿ 5 ಕಿ.ಮೀ. ದೂರದ ನಡಿಗೆಯ ಅಂಗಾಂಗ ದಾನ ಜಾಗೃತಿ ಜಾಥಾ ಯಶಸ್ವಿಯಾಗಿತು. ಆದಿಚುಂಚನಗಿರಿಯಲ್ಲಿ ನಡೆಯಿತು. ಸಾವಿರಾರು ಜನ ವಿದ್ಯಾರ್ಥಿಗಳು ಈ ಜಾಥಾದಲ್ಲಿ ಭಾಗವಹಿಸಿದ್ದು ಗಮನಾರ್ಹವಾಗಿತ್ತು.
ಕೃಷಿ ಸಚಿವ ಎನ್.ಚಲುರಾಯಯಸ್ವಾಮಿ ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮನುಷ್ಯನ ಜೀವನ ಉಳಿಸುವಂತಹ ಒಂದು ಅಂತರಾಷ್ಟ್ರೀಯ ಮಟ್ಟದ ವೈದ್ಯಕೀಯ ಸೇವೆಯನ್ನು ಮಾಡುವ ಒಂದು ಸಂಕಲ್ಪವನ್ನು ಬಹಳ ಹಿಂದೆಯೇ ಶ್ರೀಬಾಲಗಂಗಾಧರನಾಥ ಸ್ವಾಮಿಜಿ ಅವರು ಹೊಂದಿದ್ದು, ಅದು ಈ ದಿನ ನನಸಾಗಿದೆ ಎಂದರು.
ಒಬ್ಬ ಮನುಷ್ಯ ಮೆದುಳು ನಿಷ್ಕ್ರಿಯಗೊಂಡಾಗ ಅವನ ದೇಹದಿಂದ ಎಂಟು ಜನಗಳ ಜೀವ ಉಳಿಸುವಂತಹ ಒಂದು ಅವಕಾಶವಿದೆ ಎಂಬುದನ್ನು ತಜ್ಞರು ಈಗಾಗಲೇ ತಿಳಿಸಿದ್ದಾರೆ. ಈ ರೀತಿ ಪ್ರತಿಯೊಬ್ಬ ಮನುಷ್ಯನು ತನ್ನ ದೇಹದ ಅಂಗಾಂಗವನ್ನು ದಾನ ಮಾಡುವುದರಿಂದ ಇನ್ನೊಬ್ಬರ ಜೀವಕ್ಕೆ ಅವರು ಆಸರೆ ಆಗಬಹುದು ಎಂದರು.
ಈ ಒಂದು ಕಾರ್ಯಕ್ರಮ ಅಂತರಾಷ್ಟ್ರೀಯ ಮಟ್ಟದಲ್ಲಿ ಗಮನ ಸೆಳೆಯುವಂತ ಕಾರ್ಯಕ್ರಮವಾಗಿದೆ. ಇದರ ಯಶಸ್ಸಿಗೆ ನಾನು ಸಂಪೂರ್ಣವಾಗಿ ರಾಜ್ಯ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಪರವಾಗಿ ಸಹಕಾರವನ್ನು ನೀಡುತ್ತೇನೆ ಎಂದರು.

ಮಾಜಿ ಸಂಸದರಾದ ಪ್ರತಾಪ್ ಸಿಂಹ ಮಾತನಾಡಿ ಅಂಗಾಂಗ ದಾನ ಮಾಡುವುದರಿಂದ ನಾವು ಮತ್ತೊಬ್ಬನ ಜೀವಕ್ಕೆ ಆಸರೆಯಾಗುತ್ತೇವೆ. ಇಂತಹ ಅಂಗಾಂಗ ದಾನದ ಕಾರ್ಯಕ್ರಮವನ್ನು ಯಶಸ್ವಿಯಾಗಿ ನಿರ್ವಹಿಸುವಲ್ಲಿ ಆದಿಚುಂಚನಗಿರಿ ಮಠವು ಒಂದು ಮೈಲಿಗಲ್ಲನ್ನು ನಿರ್ಮಿಸಲಿದೆ ಎಂದರು.
ಆದಿಚುಂಚನಗಿರಿ ಮಠದ ಶ್ರೀನಿರ್ಮಲಾನಂದನಾಥ ಸ್ವಾಮೀಜಿ ಮಾತನಾಡಿ ‘ಅಂಗಾಂಗ ದಾನದಿಂದ ಒಬ್ಬ ಮನುಷ್ಯ ಇನ್ನೊಬ್ಬರ ಮನುಷ್ಯನಿಗೆ ಜೀವನಕ್ಕೆ ಆಧಾರವಾಗುತ್ತಾರೆ. ಒಬ್ಬ 85 ವರ್ಷದ ವೃದ್ಧ ತನ್ನ 35 ವರ್ಷದ ಮಗನಿಗೆ ಕಿಡ್ನಿಯನ್ನು ದಾನ ಮಾಡುವುದರ ಮೂಲಕ ಅವನ ಜೀವನ ಉಳಿಸಿದ್ದಾನೆ. ಅದೇ ರೀತಿ ಇನ್ನೊಬ್ಬ 70 ವರ್ಷದ ತನ್ನ ಚಿಕ್ಕ ವಯಸ್ಸಿನ ಮಗನಿಗೆ ಅಂಗಾಂಗವನ್ನು ದಾನ ಮಾಡುವುದರ ಮೂಲಕ ಸಾರ್ಥಕತೆ ಮೆರೆದಿದ್ದಾರೆ ಎಂದರು.
ಪ್ರತಿಯೊಬ್ಬ ಮನುಷ್ಯನು ತನ್ನ ಅಂಗಾಂಗವನ್ನು ದಾನ ಮಾಡುವುದರ ಮುಖಾಂತರ ಮತ್ತೊಬ್ಬರ ಜೀವಕ್ಕೆ ಆಸರೆ ಆಗಬೇಕು. ದೇಹ ನಸ್ವರ ಸಾವಿನ ಮುಂಚೆ ನಾವು ಆಗುವಂತಹ ದೇಹದಲ್ಲಿನ ಅಂಗಗಳನ್ನು ದಾನ ಮಾಡುವುದರಿಂದ ಮತ್ತೊಂದು ಜೀವಕ್ಕೆ ನಾವು ಆಸರೆಯಾಗುತ್ತದೆ, ಇದನ್ನು ನಾವು ಜನಜಾಗೃತಿ ಕಾರ್ಯಕ್ರಮವಾಗಿ ಮಾಡಬೇಕಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಶ್ರವಣಬೆಳಗೊಳದ ಶ್ರೀಚಾರುಕೀರ್ತಿ ಭಟ್ಟಾರಕ ಸ್ವಾಮೀಜಿ, ಎಲ್ಲಾ ಜಿಲ್ಲೆಗಳ ಚುಂಚನಗಿರಿ ಮಠದ ಸ್ವಾಮೀಜಿಗಳು, ಪೊಲೀಸ್ ಮಹಾ ನಿರ್ದೇಶಕರು, ಜಿಲ್ಲಾಧಿಕಾರಿ ಉಪಸ್ಥಿತರಿದ್ದರು.




