ಅಗ್ರಿಕ್ಲಬ್ ನಲ್ಲಿ ಕಾಯಂ ಸದಸ್ಯರಿಗಿಂತ ಹೊರಗಿನ ಸದಸ್ಯರು ಹೆಚ್ಚಿದ್ದಾರೆ.ಅಕ್ರಮ ಜೂಜಾಟ ನಡೆಯುತ್ತಿದೆ ಎಂಬ ಅನುಮಾನದ ದೂರಿನ ಮೇಲೆ ಮಂಡ್ಯ ಗ್ರಾಮಾಂತರ ಠಾಣೆಯ ಪೋಲಿಸರು ಕ್ಲಬ್ ಶೋಧ ನಡೆಸಿ ಮಾಹಿತಿ ಪಡೆದರು.
ಅಗ್ರಿ ಕ್ಲಬ್ ನಲ್ಲಿ ಸದಸ್ಯತ್ವ ಪಡೆದುಕೊಂಡಿರುವ ಸದಸ್ಯರಿಗಿಂತ ಬೆಂಗಳೂರು, ಮೈಸೂರು ಸೇರಿದಂತೆ ಬೇರೆಡೆಯಿಂದ ಬರುವವರೇ ಹೆಚ್ಚಾಗಿದ್ದಾರೆಂಬ ದೂರಿನ ಹಿನ್ನಲೆಯಲ್ಲಿ ಮಂಡ್ಯ ಗ್ರಾಮಾಂತರ ಠಾಣೆಯ ಸರ್ಕಲ್ ಇನ್ಸ್‌ಪೆಕ್ಟರ್ ಶಿವಪ್ರಸಾದ್ ರಾವ್ ಜೊತೆಗೆ ಹತ್ತಕ್ಕೂ ಹೆಚ್ಚು ಪೋಲಿಸ್ ಸಿಬ್ಬಂದಿ ಕ್ಲಬ್ ನಲ್ಲಿ ಶೋಧ ನಡೆಸಿದರು.ಈ ಸಂದರ್ಭದಲ್ಲಿ ಕೇವಲ ಮೂರು ಮಂದಿ ಕಾಯಂ ಸದಸ್ಯರಷ್ಟೇ ಇದ್ದು ಉಳಿದವರು ಹೊರಗಿನಿಂದ ಪ್ರವೇಶ ಪಡೆದಿದ್ದರು ಎಂಬ ಮಾಹಿತಿ ತಿಳಿದು ಬಂತು.
ನಮ್ಮದು ಪ್ರತಿಷ್ಠಿತ ಕ್ಲಬ್ ಆಗಿದ್ದು,ಕಾನೂನಿನ ಪ್ರಕಾರ ನಡೆದುಕೊಳ್ಳುತ್ತಿದ್ದೇವೆ.ಕಾನೂನು ಬಾಹಿರವಾಗಿ ಯಾವುದೇ ಚಟುವಟಿಕೆ ನಡೆಸುತ್ತಿಲ್ಲ ಎಂದು ಕ್ಲಬ್ ನ ಪದಾಧಿಕಾರಿಗಳಾದ ಚಂದ್ರು,ಯೋಗೇಶ್ ತಿಳಿಸಿದರು.
ನಾಳೆ ಎಲ್ಲಾ ಸದಸ್ಯರ ವಿವರ ನೀಡುವುದಾಗಿ ಪದಾಧಿಕಾರಿಗಳು ತಿಳಿಸಿದ ನಂತರ ಮಂಡ್ಯ ಗ್ರಾಮಾಂತರ ಠಾಣೆಯ ಪೋಲಿಸರು ತೆರಳಿದರು.




