Thursday, September 19, 2024

ಪ್ರಾಯೋಗಿಕ ಆವೃತ್ತಿ

ಎಲೆಚಾಕನಹಳ್ಳಿ – ಹಾಲಾಳು ಬಳಿ ವಸತಿ ಬಡಾವಣೆಗಳ ಅಭಿವೃದ್ಧಿ : ವಿ.ಸೋಮಣ್ಣ

ಕರ್ನಾಟಕ ಗೃಹ ಮಂಡಳಿಯು 225 ವಸತಿ ಯೋಜನೆಯಡಿ ಮಂಡ್ಯ ತಾಲ್ಲೂಕಿನ ಎಲೆಚಾಕನಹಳ್ಳಿ ಹಾಗೂ ನಾಗಮಂಗಲ ತಾಲ್ಲೂಕಿನ ಹಾಲಾಳು-ಇರುಬನಹಳ್ಳಿ ಗ್ರಾಮಗಳಲ್ಲಿ ಒಟ್ಟು ರೂ. 289.92 ಕೋಟಿಗಳ ಯೋಜನಾ ವೆಚ್ಚದಲ್ಲಿ ವಸತಿ ಬಡಾವಣೆಯನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ವಸತಿ ಮತ್ತು ಮೂಲಸೌಲಭ್ಯ ಅಭಿವೃದ್ಧಿ ಸಚಿವ ವಿ.ಸೋಮಣ್ಣ ತಿಳಿಸಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಶಾಸಕ ಮಧು.ಜಿ.ಮಾದೇಗೌಡರ ಪ್ರಶ್ನೆಗೆ ಲಿಖಿತ ಉತ್ತರ ನೀಡಿರುವ ಸಚಿವರು, ಎಲೆಚಾಕನಹಳ್ಳಿ ಗ್ರಾಮದಲ್ಲಿ 199.29 ಎಕರೆ ಜಮೀನನ್ನು ಒಟ್ಟು ರೂ. 213.43 ಕೋಟಿಗಳ ಯೋಜನಾ ವೆಚ್ಚದಲ್ಲಿ ವಿವಿಧ ವರ್ಗಗಳ 2,169 ನಿವೇಶನಗಳನ್ನು ಹಾಗೂ ಬೆಳ್ಳೂರು ಹೋಬಳಿ ಹಾಲಾಳು-ಇರುಬನಹಳ್ಳಿ ಗ್ರಾಮಗಳ 99 ಎಕರೆ 35 ಗುಂಟೆ ಪ್ರದೇಶದಲ್ಲಿ ರೂ. 76.49 ಕೋಟಿಗಳ ಯೋಜನಾ ವೆಚ್ಚದಲ್ಲಿ ವಿವಿಧ ವರ್ಗಗಳ 1,241 ನಿವೇಶನಗಳನ್ನು ಅಭಿವೃದ್ಧಿಪಡಿಸಲಾಗುತ್ತಿದೆ ಎಂದು ಮಾಹಿತಿ ನೀಡಿದ್ದಾರೆ.

ಎಲೆಚಾಕನಹಳ್ಳಿ ಗ್ರಾಮದಲ್ಲಿ ಭೂಸ್ವಾಧೀನಪಡಿಸಲಾದ ಜಮೀನಿಗೆ ಭೂಸ್ವಾಧೀನ ಕಾಯ್ದೆ 2013ರಲ್ಲಿನ ನಿರ್ದೇಶನದಂತೆ ರಾಷ್ಟ್ರೀಯ ಹೆದ್ದಾರಿಗೆ ಹೊಂದಿಕೊಂಡಿರುವ ಜಮೀನುಗಳಿಗೆ ಎಕರೆ ಒಂದಕ್ಕೆ ರೂ. 51,86,594/- ಹಾಗೂ ಇತರೆ ಜಮೀನಿಗಳಿಗೆ ರೂ. 7,71,100/- ಗಳ ನಗದು ಪರಿಹಾರ ನಿರ್ಧರಿಸಿ ಪರಿಹಾರ ಪಾವತಿಸಲಾಗಿದೆ. 40 ಎಕರೆ ಜಮೀನಿನ ಭೂಮಾಲೀಕರು ನಗದು ಪರಿಹಾರದ ಬದಲಾಗಿ 60:40ರ ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ನಿವೇಶನ ನೀಡಲು ಕೋರಿದ್ದಾರೆ. ಹಾಗೇ, ಹಾಲಾಳು-ಇರುಬನಹಳ್ಳಿ ಗ್ರಾಮಗಳಲ್ಲಿ ಜಮೀನನ್ನು ಭೂಸ್ವಾಧೀನಪಡಿಸಿದ್ದು ನಗದು ಪರಿಹಾರ ನಿರ್ಧರಿಸಲಾಗಿದೆ. ಸದರಿ ಜಮೀನ ಭೂಮಾಲೀಕರು ನಗದು ಪರಿಹಾರದ ಬದಲಾಗಿ 60:40ರ ಅನುಪಾತದಲ್ಲಿ ಅಭಿವೃದ್ಧಿಪಡಿಸಿದ ನಿವೇಶನ ನೀಡಲು ಕೋರಿದ್ದಾರೆ ಎಂದಿದ್ದಾರೆ.

ಹಾಲಾಳು-ಇರುಬನಹಳ್ಳಿ ಗ್ರಾಮಗಳಲ್ಲಿ ವಸತಿ ಬಡಾವಣೆ ಅಭಿವೃದ್ಧಿಪಡಿಸುವ ಕಾಮಗಾರಿಯು ಶೇ 45ರಷ್ಟು ಮುಗಿದಿದೆ. ವಸತಿ ಬಡಾವಣೆಯ ಸ್ವತ್ತುಗಳನ್ನು 2023ರ ಅಂತ್ಯದೊಳಗೆ ಹಂಚಿಕೆ ಮಾಡಲಾಗುವುದು.. ಎಲೆಚಾಕನಹಳ್ಳಿ ಗ್ರಾಮದಲ್ಲಿ ವಸತಿ ಬಡಾವಣೆಯ ವಿನ್ಯಾಸ ನಕ್ಷೆಯನ್ನು ಅನುಮೋದನೆಗಾಗಿ ನಗರ ಯೋಜನಾ ಇಲಾಖೆ ಬೆಂಗಳೂರಿಗೆ ಸಲ್ಲಿಸಲಾಗಿದೆ. ಅನುಮತಿಸಿದ ನಂತರ ಕಾಮಗಾರಿ ಆರಂಭಗೊಳ್ಳಲಿದೆ. ಇಲ್ಲಿನ ವಸತಿ ಬಡಾವಣೆಯ ಸ್ವತ್ತುಗಳನ್ನು 2023ರ ಅಂತ್ಯದೊಳಗೆ ಹಂಚಿಕೆ ಮಾಡಲಾಗುವುದು ಎಂದು ತಿಳಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!