Thursday, September 19, 2024

ಪ್ರಾಯೋಗಿಕ ಆವೃತ್ತಿ

ಕಾವೇರಿ : ಪಂಜಿನ ಮೆರವಣಿಗೆ ನಡೆಸಿದ ಮಂಡ್ಯ ಯೂತ್ ಗ್ರೂಪ್ ಕಾರ್ಯಕರ್ತರು

ತಮಿಳುನಾಡಿಗೆ 15 ದಿನಗಳ ಕಾಲ 5 ಸಾವಿರ ಕ್ಯೂಸೆಕ್ ನೀರು ಬಿಡಬೇಕೆಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿರುವುದರಿಂದ ರಾಜ್ಯಕ್ಕೆ ಅನ್ಯಾಯವಾಗಿದೆ ಎಂದು ಮಂಡ್ಯ ಯೂತ್ ಗ್ರೂಪ್ ಸದಸ್ಯರು ಪಂಜಿನ ಮೆರವಣಿಗೆ ನಡೆಸಿ ವಿರೋಧ ವ್ಯಕ್ತಪಡಿಸಿದರು.

ಮಂಡ್ಯ ಯೂತ್ ಗ್ರೂಪ್ ಅಧ್ಯಕ್ಷ ಡಾ.ಅನಿಲ್‌ ಆನಂದ್‌ ನೇತೃತ್ವದಲ್ಲಿ ಹಲವು ಕಾರ್ಯಕರ್ತರು
ರಾಜ್ಯದ ಅಣೆಕಟ್ಟೆಗಳಲ್ಲಿ ನೀರಿಲ್ಲದಿದ್ದರೂ ಸುಪ್ರೀಂ ಕೋರ್ಟ್ ತಮಿಳುನಾಡಿಗೆ ಕಾವೇರಿ ನೀರು ಬಿಡಲು ಆದೇಶ ನೀಡಿರುವುದು ರಾಜ್ಯದ ಪಾಲಿಗೆ ಮರಣಶಾಸನವಾಗಿದೆ‌.ಕಾನೂನಿಗೆ ಕಣ್ಣಿಲ್ಲ…ಕಾವೇರಿ ನೀರು ನಮ್ಮ ಬದುಕು…ಎಂದು ಘೋಷಣೆ ಕೂಗುತ್ತಾ ನಗರದ ಪ್ರಮುಖ ರಸ್ತೆಗಳಲ್ಲಿ ಪಂಜಿನ ಮೆರವಣಿಗೆ ನಡೆಸಿದರು.

ಸುಪ್ರೀಂ ಕೋರ್ಟ್ ಆದೇಶ ರಾಜ್ಯದ ರೈತರು ಹಾಗೂ ಜನರ ಪಾಲಿಗೆ ಅನ್ಯಾಯ ಮಾಡಿದೆ ಎಂದು ಯೂತ್ ಗ್ರೂಪ್ ಸದಸ್ಯರು ಆಕ್ರೋಶ ವ್ಯಕ್ತಪಡಿಸಿದರು.

ಮಂಡ್ಯ ನಗರದ ವಿ.ವಿ.ರಸ್ತೆ,ಹೊಸಹಳ್ಳಿ ವೃತ್ತ,ನೂರಡಿ ರಸ್ತೆ, ಆರ್‌ಪಿ.ರಸ್ತೆಯಲ್ಲಿ ಪಂಜಿನ ಮೆರವಣಿಗೆ ನಡೆಸಿದ ಯೂತ್‌ ಗ್ರೂಪ್ ಸದಸ್ಯರು ಜನರ ಗಮನ ಸೆಳೆದರು.

ಪ್ರತಿಭಟನೆಯಲ್ಲಿ ವಿನಯ್,ದರ್ಶನ್, ರಾಜಣ್ಣ, ಪ್ರತಾಪ್‌, ವಿನಯ್, ರಕ್ಷಿತ್, ಶಶಿ, ಯೋಗಿ, ನವೀನ್, ಪವನ್ ಮತ್ತಿತರರಿದ್ದರು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!