Wednesday, October 23, 2024

ಪ್ರಾಯೋಗಿಕ ಆವೃತ್ತಿ

ಮಣಿಪುರದಲ್ಲಿ ಹೇಯ ಕೃತ್ಯ : ಮಹಿಳೆಯರ ಬೆತ್ತಲೆ ಮೆರವಣಿಗೆ, ಸಾಮೂಹಿಕ ಅತ್ಯಾಚಾರ

ಮಣಿಪುರದ ಕಾಂಗಪೂರ ಜಿಲ್ಲೆಯಲ್ಲಿ ಮೇ 4ರಂದು ನಡೆದಿದ್ದ ಹಿಂಸಾಚಾರದ ವೇಳೆ ಪುರುಷರ ಗುಂಪೊಂದು ಕುಕಿ-ಜೋ ಬುಡಕಟ್ಟು ಜನಾಂಗಕ್ಕೆ ಸೇರಿದ ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ರಸ್ತೆಯಲ್ಲಿ ಮೆರವಣಿಗೆ ಮಾಡಲಾಗಿದೆ. ಆನಂತರ ಸಮೀಪದ ಮೈದಾನದಲ್ಲಿ ಅವರ ಮೇಲೆ ಸಾಮೂಹಿಕ ಅತ್ಯಾಚಾರವೆಸಗಲಾಗಿದೆ. ಮಹಿಳೆಯರನ್ನು ಬೆತ್ತಲೆಯಾಗಿ ರಸ್ತೆಯಲ್ಲಿ ಮೆರವಣಿಗೆ ಮಾಡಿರುವ ಹೇಯ ಕೃತ್ಯದ ವಿಡಿಯೋ ಬುಧವಾರ ಸಾಮಾಜಿಕ ಮಾಧ್ಯಮಗಳಲ್ಲಿ ಹಂದಾಡಿದೆ. ಹೀಗಾಗಿ ರಾಜ್ಯದಲ್ಲಿ ಪರಿಸ್ಥಿತಿ ಮತ್ತೆ ಉದ್ವಿಗ್ನಗೊಂಡಿದೆ.

ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ITLF) ಗುರುವಾರ ಹಮ್ಮಿಕೊಂಡಿದ್ದ ಪ್ರತಿಭಟನಾ ಮೆರವಣಿಗೆಯ ಮುನ್ನಾ ದಿನವೆ ವಿಡಿಯೊ ಬಿಡುಗಡೆ ಮಾಡಲಾಗಿದೆ. ರಾಜ್ಯ ರಾಜಧಾನಿ ಇಂಫಾಲ್‌ನಿಂದ ಸುಮಾರು 35 ಕಿಮೀ ದೂರದಲ್ಲಿರುವ ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಮೇ 4 ರಂದು ಈ ಘಟನೆ ಸಂಭವಿಸಿದೆ. ಕಾಂಗ್‌ಪೋಪಿಯಲ್ಲಿ ಪ್ರಥಮ ಮಾಹಿತಿ ವರದಿ (ಎಫ್‌ಐಆರ್) ದಾಖಲಾಗಿದ್ದರೂ ಮತ್ತೊಂದು ಜಿಲ್ಲೆಯಲ್ಲಿ ಘಟನೆ ನಡೆದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

“>

ಬುಡಕಟ್ಟು ಸಮುದಾಯದ ಇಬ್ಬರು ಮಹಿಳೆಯರನ್ನು ಭತ್ತದ ಗಟ್ಟಿಗೆ ಕರೆದೊಯ್ಯುವ ದುಷ್ಕರ್ಮಿಗಳ ಗುಂಪು ಅವರನ್ನು ಹಿಂಸಿಸುತ್ತಿರುವುದು ವಿಡಿಯೊದಲ್ಲಿ ಕಂಡು ಬಂದಿದೆ ಮಹಿಳೆಯರು ಸಹಾಯಕ್ಕಾಗಿ ಅಂಗಲಾಚುವುದು ವಿಡಿಯೋದಲ್ಲಿ ಕಂಡುಬರುತ್ತದೆ.

ಈ ಘಟನೆಯನ್ನು ದೃಢೀಕರಿಸಿರುವ ಪೊಲೀಸರು ಬುಧವಾರ ಸಂಜೆ ಹೇಳಿಕೆ ಬಿಡುಗಡೆ ಮಾಡಿದ್ದು, ”ದುಷ್ಕರ್ಮಿಗಳ ಬಂಧನಕ್ಕಾಗಿ ಎಲ್ಲ ರೀತಿಯ ಪತ್ರಗಳನ್ನು ನಡೆಸುತ್ತಿರುವುದಾಗಿ ಹೇಳಿದ್ದಾರೆ. ಕೃತ್ಯದಲ್ಲಿ ಭಾಗಿಯಾದವರ ವಿರುದ್ಧ ಥೇಬಲ್ ಜಿಲ್ಲೆಯ ನಾಂಗ್‌ಪೋಕ್ ಸೆಕ್ಸ್, ಪೊಲೀಸ್ ಠಾಣೆಯಲ್ಲಿ ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ ದಾಖಲಿಸಲಾಗಿದೆ” ಎಂದು ತಿಳಿಸಿದ್ದಾರೆ.

”ಸಂತ್ರಸ್ತ ಮಹಿಳೆಯರು ಕುಕಿ ಜೋ ಬುಡಕಟ್ಟಿಗೆ ಸೇರಿದವರು ಇಬ್ಬರೂ ಮಹಿಳೆಯರ ಮೇಲೆ ಸಾಮೂಹಿಕ ಅತ್ಯಾಚಾರ ನಡೆದಿದ ಗುರುತು ಬಹಿರಂಗವಾಗುವಂಥ ವಿಡಿಯೊವನ್ನು ದುಷ್ಕರ್ಮಿಗಳು ಸಾಮಾಜಿಕ ಮಾಧ್ಯಮದಲ್ಲಿ ಬಿಡುಗಡೆ ಮಾಡಿದ್ದು, ಮಹಿಳೆಯರು ಮತ್ತಷ್ಟು ಅಪಮಾನಕ, ಗುರಿಯಾಗಿದ್ದಾರೆ” ಎಂದು ಐಟಿಎಲ್ಎಫ್ ತಿಳಿಸಿದೆ.

ಘಟನೆ ಬಗ್ಗೆ ನಿಗಮ ವ್ಯಕ್ತಪಡಿಸಿರುವ ಹಲವಾರು ಸಂಘಟನೆಗಳು, ಪಕ್ಷಗಳು ಇದೊಂದು ಪ್ರಶಾಚಿಕ ಕೃತ್ಯ ಎಂದು ಟೀಕಿಸಿವೆ.

ಶಿರಾದ ಪ್ರಾದೇಶಿಕ ಪಕ್ಷ ತಿಪ್ಪಾ ಮೋಯಾದ ಮುಖ್ಯಸ್ಥ ಪ್ರದೇತ್ ದೇಬ್ ಬರ್ಮಾ ಕೂಡ ವಿಡಿಯೊ ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ.

ನಾನು ರಾಜಕೀಯ ತಜ್ಞನಲ್ಲ ಆದರೆ ಮಹಿಳೆಯರನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡುವುದು ಮತ್ತು ಲೈಂಗಿಕ ಕಿರುಕುಳ ನೀಡುವುದು ಸಂಕಟವನ್ನೂ ಮೀರಿದೆ. #ಮಣಿಪುರದಲ್ಲಿ ದೀರ್ಘಕಾಲದವರೆಗೆ ಹಿಂಸಾಚಾರಗಳು ನಡೆಯಲು ಬಿಡಲಾಗಿದೆ. ಹಾಗಾಗಿ ಇದೀಗ ಇಂತಹ ಅವಮಾನದ ಘಟನೆ ನಡೆದಿದೆ ಎಂದು ಸಿನಿಮಾ ನಿರ್ಮಾಪಕ ಜಗತ್ ಜೂನ್  ಟ್ವೀಟ್ ಮಾಡಿದ್ದಾರೆ.

ಈ ಭಯಾನಕ ವೀಡಿಯೊವು ಆಕ್ರೋಶವನ್ನು ಹುಟ್ಟುಹಾಕಿದೆ. ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್‌ಎಫ್) ಗುರುವಾರ ಘೋಷಿಸಿದ ಯೋಜಿತ ಪ್ರತಿಭಟನಾ ಮೆರವಣಿಗೆಯ ಮುನ್ನಾದಿನದಂದು ಅವರ ದುರವಸ್ಥೆಯನ್ನು ಎತ್ತಿ ತೋರಿಸುತ್ತದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.

”ಮೇ 4 ರಂದು ಅಪರಿಚಿತ ಶಸ್ತ್ರಸಜ್ಜಿತ ದುಷ್ಕರ್ಮಿಗಳು ಇಬ್ಬರು ಮಹಿಳೆಯರನ್ನು ಬೆತ್ತಲೆಯಾಗಿ ಪರೇಡ್ ಮಾಡಿದ ವೈರಲ್ ವೀಡಿಯೊಗಳಿಗೆ ಸಂಬಂಧಿಸಿದಂತೆ, ನಾಂಗ್‌ಪೋಕ್ ಸೆಕ್ಮೈ ಪೊಲೀಸ್ ಠಾಣೆಯಲ್ಲಿ (ತೌಬಲ್ ಜಿಲ್ಲೆ) ಅಪಹರಣ, ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣವನ್ನು ದಾಖಲಿಸಲಾಗಿದೆ… ತನಿಖೆ ಪ್ರಾರಂಭವಾಗಿದೆ. ಆದಷ್ಟು ಬೇಗ ಆರೋಪಿಗಳನ್ನು ಬಂಧಿಸಲು ರಾಜ್ಯ ಪೊಲೀಸರು ಎಲ್ಲಾ ರೀತಿಯ ಪ್ರಯತ್ನಗಳನ್ನು ಮಾಡುತ್ತಿದ್ದಾರೆ” ಎಂದು ಮಣಿಪುರ ಪೊಲೀಸರು ಟ್ವೀಟ್ ಮಾಡಿದ್ದಾರೆ.

ಐಟಿಎಲ್‌ಎಫ್‌ನ ವಕ್ತಾರರ ಪ್ರಕಾರ, ”ಮೇ 4 ರಂದು ಕಾಂಗ್‌ಪೋಕ್ಪಿ ಜಿಲ್ಲೆಯಲ್ಲಿ ಸಂಭವಿಸಿದ ಹೇಯ ದೃಶ್ಯವು, ಪುರುಷರು ಅಸಹಾಯಕ ಮಹಿಳೆಯರನ್ನು ನಿರಂತರವಾಗಿ ಕಿರುಕುಳ ನೀಡುವುದನ್ನು ತೋರಿಸುತ್ತದೆ. ಅವರು ತಮ್ಮ ಸೆರೆಯಾಳುಗಳೊಂದಿಗೆ ಅಳುತ್ತಾರೆ ಮತ್ತು ಮನವಿ ಮಾಡುತ್ತಾರೆ.”

“ಹೇಯ ಕೃತ್ಯ”ವನ್ನು ಖಂಡಿಸಿರುವ ವಕ್ತಾರರು, ”ಕೇಂದ್ರ ಮತ್ತು ರಾಜ್ಯ ಸರ್ಕಾರಗಳು, ರಾಷ್ಟ್ರೀಯ ಮಹಿಳಾ ಆಯೋಗ ಮತ್ತು ಪರಿಶಿಷ್ಟ ಪಂಗಡಗಳ ರಾಷ್ಟ್ರೀಯ ಆಯೋಗವು ಈ ಅಪರಾಧದ ಗಂಭೀರವಾಗಿ ತೆಗೆದುಕೊಂಡು ತಪ್ಪಿತಸ್ಥರ ವಿರುದ್ಧ ಕಾನೂನು ಹೋರಾಟ ಮಾಡಬೇಕು” ಎಂದು ಹೇಳಿಕೆಯಲ್ಲಿ ಒತ್ತಾಯಿಸಿದ್ದಾರೆ.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!