Friday, September 20, 2024

ಪ್ರಾಯೋಗಿಕ ಆವೃತ್ತಿ

ಮಾತಂಗ ಸಮುದಾಯಕ್ಕೆ ಶ್ರೇಷ್ಠವಾದ ಇತಿಹಾಸವಿದೆ : ಶ್ರೀಪೂರ್ಣಾನಂದ ಭಾರತಿ ಸ್ವಾಮೀಜಿ

ಮಾತಂಗ (ಮಾದಿಗ) ಸಮುದಾಯದ ಬಗ್ಗೆ ಸುಮಾರು 18 ಭಾರತೀಯ ಪುರಾಣಗಳನ್ನು ಉಲ್ಲೇಖವಿದ್ದು, ಸಪ್ತಸ್ವರಗಳ ಸೃಷ್ಟಿಕರ್ತ ಮಾತಂಗ ಮಹರ್ಷಿ ಜನಿಸಿದ ಈ ಸಮುದಾಯಕ್ಕೆ ಶ್ರೇಷ್ಠವಾದ ಇತಿಹಾಸವಿದೆ ಎಂದು ವಿಜಯನಗರ ಜಿಲ್ಲೆಯ ಹಂಪಿ ಮಾತಂಗ ಮಹರ್ಷಿ ಸೇವಾ ಆಶ್ರಮ ಶ್ರೀಪೂರ್ಣಾನಂದ ಭಾರತಿ ಸ್ವಾಮೀಜಿ ತಿಳಿಸಿದರು.

ಮಂಡ್ಯನಗರದ ಜಿಲ್ಲಾ ಕಾರ್ಯನಿತರ ಪತ್ರಕರ್ತರ ಸಭಾಂಗಣದಲ್ಲಿ ಮಂಗಳವಾರ ನಡೆದ ಮಾತಂಗ ಮಹರ್ಷಿ ಅವರ ಜಯಂತಿ ಹಾಗೂ ಜಿಲ್ಲಾ ಮಟ್ಟದ ಸಾಧಕರಿಗೆ ಸನ್ಮಾನ ಸಮಾರಂಭದ ದಿವ್ಯಾಸಾನಿಧ್ಯ ವಹಿಸಿ ಅವರು ಮಾತನಾಡಿದರು.

ಮಾದಿಗ ಎಂದರೆ ಮಹಾ ಆದಿಗ ಎಂಬ ಅರ್ಥವಿದೆ, ಈ ಕುಲದ ಬಗ್ಗೆ ಋಗ್ವೇದ, ಯರ್ಜುರ್ವೇದ, ವೇದ, ಉಪನಿಷತ್ ಗಳಲ್ಲಿ ಉಲ್ಲೇಖವಿದೆ, ರಾಮಾಯಾಣದಲ್ಲಿ ಬರುವ ಜಾಂಬವಂತ, ಆತನ ಪುತ್ರಿ ಜಾಂಬವತಿ ಯು ಶ್ರೀಕೃಷ್ಣನ ಪತ್ನಿಯರಲ್ಲಿ ಒಬ್ಬರಾಗಿದ್ದಾರೆ ಎಂದು ವಿವರಿಸಿದರು.

nudikarnataka.com

ವಾಗೀಶ್ ಟೈಮ್ಸ್ ವಾಹಿನಿಯ ವಾಗೀಶ್ ಚಂದ್ರಗುರು ಪ್ರಧಾನ ಭಾಷಣ ಮಾಡಿ, ಮಾತಂಗ ಸಮುದಾಯ ಉನ್ನತವಾದ ಸಾತ್ವಿಕ ಮನಸ್ಥಿತಿಯನ್ನು ಹೊಂದಿದ ಸಮುದಾಯವಾಗಿದೆ, ವಶಿಷ್ಟ ಮುನಿಯ ಪತ್ನಿ ಆರುಂಧತಿ ಕೂಡ ಮಾತಂಗ (ಮಾದಿಗ) ಕುಲದವರಾಗಿದ್ದರು, ಆಕೆಯ ಕೈ ತುತ್ತನ್ನು ತಿಂದು ರಾಮನು ಬೆಳೆದ, ಜಾಂಬವತಿಯನ್ನು ಲಗ್ನವಾದ ಕೃಷ್ಣ ಕೂಡ ಮಾತಂಗ ಕುಲದ ಅಳಿಯಾದ, ಇದನ್ನೆಲ್ಲ ಗಮನಿಸಿದರೆ ಪ್ರಾಚೀನ ಕಾಲದಲ್ಲಿ ಜಾತಿ ಎಂಬುದರಲಿಲ್ಲ, ಅನಂತರ ವೃತ್ತಿಯಾಧಾರದಲ್ಲಿ ಜಾತಿ ರೂಪಿಕೊಂಡಿಬಹುದು ಎಂದು ಅಭಿಪ್ರಾಯ ಪಟ್ಟರು.

ಅಖಿಲ ಕರ್ನಾಟಕ ಬಾಬುಜಗಜೀವನರಾಮ್ ಸಂಘಗಳ ಒಕ್ಕೂಟದ ಮಂಡ್ಯ ಜಿಲ್ಲಾಧ್ಯಕ್ಷ ಎನ್.ಆರ್. ಚಂದ್ರಶೇಖರ್‌ ಅಧ್ಯಕ್ಷತೆ ವಹಿಸಿದ್ದರು.  ಮುಖ್ಯ ಅತಿಥಿಗಳಾಗಿ ಬಿ.ಜಿ.ಪುರ ಗ್ರಾ.ಪಂ. ಅಧ್ಯಕ್ಷ ಬಿ.ಆರ್. ಸಿದ್ದರಾಜು, ಬ್ರಹ್ಮದೇವರಹಳ್ಳಿ ಗ್ರಾ.ಪಂ. ಅಧ್ಯಕ್ಷ ಬಿ.ಸಿ. ವೆಂಕಟೇಶ್, ಬಗ‌ರ್ ಹುಕುಂ ಸಾಗುವಳಿ ಸಮಿತಿ ಸದಸ್ಯರ ಜಿ. ಕುಮಾರ್ ಬಾಳೆಹೊನ್ನಿಗ, ನಾಗೇಗೌಡನದೊಡ್ಡಿ ಗ್ರಾ.ಪಂ. ಚಲುವಮ್ಮ ಚಿಕ್ಕನಿಂಗಯ್ಯ ಭಾಗವಹಿಸುವರು. ಮುಖಂಡರಾದ ಬಿ.ಬಿ.ಕಾವಲ್ ಕಾಂತರಾಜು, ಹೆಚ್.ಎಂ.ಪುಟ್ಟರಾಜು ಕೆ.ಆರ್.ಪೇಟೆ ಹಾಗೂ ವಕೀಲ ಕೆಂಪಯ್ಯ ಭಾಗವಹಿಸಿದ್ದರು.

ಇದೇ ಸಂದರ್ಭದಲ್ಲಿ ವಿವಿಧ ಕ್ಷೇತ್ರಗಳ ಸಾಧಕರಾದ ಎನ್.ಶೇಖರ್ ಹನಿಯಂಬಾಡಿ, ಚಾಮನಹಳ್ಳಿ ಮಂಜು, ಹನಿಯಂಬಾಡಿ ಜಗದೀಶ್, ನಿಂಗರಾಜು ಹೆಚ್.ಸಿ ಹೊನ್ನಾಯಕನಹಳ್ಳಿ ಹಾಗೂ ವಿ. ನಂಜುಂಡ, ಹೊಸಹೊಳಲು ಅವರನ್ನು ಸನ್ಮಾನಿಸಲಾಗಿತು.

Related Articles

LEAVE A REPLY

Please enter your comment!
Please enter your name here

ಅತ್ಯಂತ ಜನಪ್ರಿಯ

error: Content is protected !!